ಮನರಂಜನೆ

ಪತಿಯ ಕೆಲಸದಿಂದಾಗಿ ಶಿಲ್ಪಾಶೆಟ್ಟಿಗೆ ಮುಜುಗರ

ಪತಿಯ ಕೆಲಸದಿಂದಾಗಿ ಶಿಲ್ಪಾಶೆಟ್ಟಿಗೆ ಮುಜುಗರ

ಮುಂಬೈ,ಜುಲೈ 28: ಪತಿ ರಾಜ್ ಕುಂದ್ರಾ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿದ್ದು, ಈ ವಿಚಾರ ಪತ್ನಿ, ನಟಿ ಶಿಲ್ಪಾ ಶೆಟ್ಟಿ ಮೇಲೆ ಪರಿಣಾಮ ಬೀರಿದೆಯಂತೆ.

ಇದುವರೆಗೆ ಸೋನಿ ಟಿವಿಯ ಡ್ಯಾನ್ಸ್ ರಿಯಾಲಿಟಿ ಶೋ ಜಡ್ಜ್ ಆಗಿ ಕೆಲಸ ಮಾಡುತ್ತಿದ್ದ ಶಿಲ್ಪಾ ಶೆಟ್ಟಿ, ಆ ಶೋನ ಪ್ರಮುಖ ಆಕರ್ಷಣೆಯಾಗಿದ್ದರು. ಆದರೆ ಇದೀಗ ಪತಿ ಮಾಡಿದ ಕೆಲಸದಿಂದ ಅವರು ಮುಜುಗರಕ್ಕೀಡಾಗಿದ್ದಾರೆ.

ಪತಿಯ ಮೇಲೆ ಬಂದಿರುವ ಆಪಾದನೆಯಿಂದಾಗಿ ಶಿಲ್ಪಾ ಈಗ ಡ್ಯಾನ್ಸ್ ಶೋಗೂ ಹೋಗಿಲ್ಲ. ಪೊಲೀಸರು ಶಿಲ್ಪಾ ನಿವಾಸಕ್ಕೆ ಬಂದು ಅವರನ್ನೂ ವಿಚಾರಣೆಗೊಳಪಡಿಸಿದ್ದರು. ಈ ಪ್ರಕರಣದಿಂದ ಆಘಾತಕ್ಕೊಳಗಾಗಿರುವ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ ಎನ್ನಲಾಗಿದೆ.

ಸುದ್ದಿ ಓದಿ