ಬಳ್ಳಾರಿ

ಜಿಲ್ಲಾಡಳಿತ, ಎಸ್‌.ಟಿ ಕಲ್ಯಾಣ ಇಲಾಖೆಯಿಂದ ಶಿಕಾರಿರಾಮುಗೆ ಸನ್ಮಾನ

ಜಿಲ್ಲಾಡಳಿತ, ಎಸ್‌.ಟಿ ಕಲ್ಯಾಣ ಇಲಾಖೆಯಿಂದ ಶಿಕಾರಿರಾಮುಗೆ ಸನ್ಮಾನ

ಲೋಕದರ್ಶನ ವರದಿ 

ಕಂಪ್ಲಿ 20: ಸ್ಥಳೀಯ ಶಿಕಾರಿ ಕಾಲೋನಿಯ ಹಕ್ಕಿಪಿಕ್ಕಿ ಸಮುದಾಯದ ಮುಖಂಡ ಹಾಗೂ ಅಲೆಮಾರಿ, ಅರೆ ಅಲೆಮಾರಿ ಜಿಲ್ಲಾ ಅನುಷ್ಠಾನ ಸಮಿತಿ ಸದಸ್ಯ ಎಚ್‌.ಪಿ.ಶಿಕಾರಿರಾಮು ಇವರ ಸಮಾಜಸೇವೆ ಹಾಗೂ ಬುಡಕಟ್ಟು ಕಲೆಯನ್ನು ಗುರುತಿಸಿ, ಬಳ್ಳಾರಿಯಲ್ಲಿ ವಾಲ್ಮೀಕಿ ಜಯಂತ್ಯೋತ್ಸವ ನಿಮಿತ್ತ ಬುಧವಾರ ಜಿಲ್ಲಾಡಳಿತ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಸನ್ಮಾನಿಸಿ ಗೌರವಿಸಲಾಯಿತು.  

ಶಾಸಕರಾದ ನಾಗೇಂದ್ರ, ಸೋಮಶೇಖರರೆಡ್ಡಿ, ಎಡಿಸಿ ಮಂಜುನಾಥ, ಸಮಾಜ ಕಲ್ಯಾಣ ಅಧಿಕಾರಿ ರಾಜಪ್ಪ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶಕೀನಾ ಬೇಗಂ, ವಾಲ್ಮೀಕಿ ನಿಗಮದ ಅಧಿಕಾರಿ ಜಗದೀಶ್ ಇತರರಿದ್ದರು. 


ಸುದ್ದಿ ಓದಿ