ಮನರಂಜನೆ

ರಾಜ್‌ಕುಂದ್ರಾ ವಿರುದ್ಧ ಶೆರ್ಲಿನ್ ಗಂಭೀರ ಆರೋಪ

ರಾಜ್‌ಕುಂದ್ರಾ ವಿರುದ್ಧ ಶೆರ್ಲಿನ್ ಗಂಭೀರ ಆರೋಪ

ನವದೆಹಲಿ : ಅ 16: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಆಕೆಯ ಪತಿ ರಾಜ್ ಕುಂದ್ರಾ  ಮೇಲೆ ಒಂದಾದ ಮೇಲೊಂದರಂತೆ ಆರೋಪಗಳ ವರದಿ ಹೆಚ್ಚಾಗುತ್ತಲೇ ಇದೆ. ಈಗ  ನಟಿ ಶೆರ್ಲಿನ್ ಚೋಪ್ರಾ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಆಕೆಯ ಪತಿ ರಾಜ್ ಕುಂದ್ರಾ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಈಗ ದಂಪತಿಗಳ ವಿರುದ್ಧ ಶೆರ್ಲಿನ್ ಕೆಲ ಗಂಭೀರ  ಆರೋಪ ಮಾಡಿದ್ದಾರೆ.  

ಏನಿದು ಆರೋಪ: 

ಅಕ್ಟೋಬರ್ 14 ರಂದು ಕುಂದ್ರಾ ಮತ್ತು ಶೆಟ್ಟಿ ವಿರುದ್ಧ ಮುಂಬೈ ಪೊಲೀಸರಿಗೆ ಚೋಪ್ರಾ ದೂರು ನೀಡಿದ್ದು ಎಫ್​ ಐಆರ್​ ದಾಖಲಾಗಿದೆ.    ಲೈಂಗಿಕ ದೌರ್ಜನ್ಯ ಮತ್ತು ಶೋಷಣೆ ಮಾಡಿದ್ದಾರೆ ಎಂದಿದ್ದಾರೆ.  ಶಿಲ್ಪಾ ಶೆಟ್ಟಿ ನನಗೆ ಕುಂದ್ರಾ ಜೊತೆ ಒಪ್ಪಂದಕ್ಕೆ ಸಹಿ ಹಾಕುವಂತೆ ಆಮಿಷವೊಡ್ಡಿದ್ದಳು. ಭೂಗತ ಸಂಪರ್ಕ ಹೊಂದಿರುವ ಕುಂದ್ರಾ, ತನ್ನ ವೃತ್ತಿಜೀವನವನ್ನು ಹಾಳು ಮಾಡುವುದಾಗಿ ಬೆದರಿಕೆ ಹಾಕಿದ್ದ. ಮೂರು ವಿಡಿಯೋಗಳನ್ನು ಚಿತ್ರೀಕರಿಸಿದ್ದು, ಇದುವರೆಗೂ ಹಣ ಪಾವತಿಸಿಲ್ಲ ಎಂದು ಶೆರ್ಲಿನ್ ಅಚ್ಚರಿ ಹೇಳಿಕೆ ನೀಡಿದ್ದಾರೆ. 

ಅಶ್ಲೀಲ ಚಿತ್ರ ನಿರ್ಮಾಣ, ಬಂಧನ : 

ಅಶ್ಲೀಲ ಚಿತ್ರ ನಿರ್ಮಾಣ ದಂಧೆ ಸಂಬಂಧ ಉದ್ಯಮಿ ರಾಜ್​ ಕುಂದ್ರಾ ಸೇರಿದಂತೆ ಅನೇಕರನ್ನು ಮುಂಬೈ ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಜುಲೈ 19ರಂದು ಬಂಧಿಸಿದ್ದರು.  ನಂತರ ಸೆಪ್ಟೆಂಬರ್ 20 ರಂದು 50 ಸಾವಿರ ರೂ ಮೊತ್ತದ ಶೂರಿಟಿ ಬಾಂಡ್​ ನೀಡಲು ಸೂಚನೆ ನೀಡಿ, ಮುಂಬೈ ಕೋರ್ಟ್‌ ರಾಜ್​ ಕುಂದ್ರಾಗೆ ಜಾಮೀನು ಮಂಜೂರು ಮಾಡಿದೆ. ಆದರೂ ಇವರ ಮೇಲೆ ಒಂದಾದ ಮೇಲೊಂದರಂತೆ ಹಲವರು ಆರೋಪ ಮಾಡುತ್ತಲೇ ಬರುತ್ತಿದ್ದಾರೆ.


ಸುದ್ದಿ ಓದಿ