ಶಿಗ್ಗಾವ್

ರಾಜ್ಯ ಮಟ್ಟದ ಟಗರಿನ ಕಾಳಗಕ್ಕೆ ಶಶಿದರ ಯಲಿಗಾರ ಚಾಲನೆ

ರಾಜ್ಯ ಮಟ್ಟದ ಟಗರಿನ ಕಾಳಗಕ್ಕೆ ಶಶಿದರ ಯಲಿಗಾರ ಚಾಲನೆ


ಲೋಕದರ್ಶನ ವರದಿ 

ಶಿಗ್ಗಾವಿ 24: ತಾಲೂಕಿನ ಬಂಕಾಪೂರ ಪಟ್ಟಣದ ನ್ಯೂ ಸ್ಟಾರ್ ಛತ್ರಪತಿ ಹಾಗೂ ಅಪ್ಪು ಬಾಯ್ಸ್‌ ಹಾವೇರಿ ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಗಂಟಿ ಆಂಜನೇಯ ದೇವಸ್ಥಾನ ರಸ್ತೆ ಪಕ್ಕದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಟಗರಿನ ಕಾಳಗಕ್ಕೆ ಸಿ.ಬಿ.ಯಲಿಗಾರ ಸೇವಾ ಸಂಸ್ಥೆಯ ಅಧ್ಯಕ್ಷ ಶಶಿಧರ ಯಲಿಗಾರ ಚಾಲನೆ ನೀಡಿದರು. ಮರಿ ಕುರಿ, ಎರಡು ಹಲ್ಲಿನ ಟಗರು, 4 ಹಲ್ಲಿನ ಟಗರು, 8 ಹಲ್ಲಿನ ಟಗರುಗಳ ಕಾಳಗ ಆಯೋಜಿಸಲಾಗಿತ್ತು. ವಿಜೇತ ಟಗರುಗಳಿಗೆ ಆಕರ್ಷಕ ಟ್ರೋಪಿ ಮತ್ತು ನಗದು ಬಹುಮಾನ ಘೋಷಣೆ  ಮಾಡಲಾಗಿದೆ. ಶ್ರೀಪಾದ ಸಂಕಣ್ಣವರ, ಸಂದೀಪ ಬಂಕಾಪುರ, ಕಾರ್ತಿಕ ಪೂಜಾರ, ದಾದು ಹಾವೇರಿ, ಆಮೀನ್ ಬೆಳಗಾಲಪೇಟ, ಬಸು ಬಂಕಾಪುರ ಸೇರಿದಂತೆ ಯುವಕ ಮಂಡಳದ ಸದಸ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ