ಶಿಗ್ಗಾವ್

ಶರನ್ನವರಾತ್ರಿ ದುರ್ಗಾ ದೇವಿಯನ್ನು ಪೂಜಿಸಿ ಶರಣು ಹೋಗಲು ಅತ್ಯಂತ ಪ್ರಶಸ್ತಕಾಲ: ಬಸವರಾಜ ಬೊಮ್ಮಾಯಿ

ಶರನ್ನವರಾತ್ರಿ ದುರ್ಗಾ ದೇವಿಯನ್ನು ಪೂಜಿಸಿ ಶರಣು ಹೋಗಲು ಅತ್ಯಂತ ಪ್ರಶಸ್ತಕಾಲ: ಬಸವರಾಜ ಬೊಮ್ಮಾಯಿ

ಲೋಕದರ್ಶನ ವರದಿ

ಶಿಗ್ಗಾವಿ 30:  ಬೇರೆ ದಿನಗಳಿಗಿಂತ ಈ ನವದಿನಗಳಲ್ಲಿ ದೇವಿಯ ಸಾನ್ನಿಧ್ಯ ಅನೇಕ ಪಟ್ಟು ಹೆಚ್ಚಿರುತ್ತದೆ. ದುಷ್ಟ ಶಿಕ್ಷಣೆ, ಶಿಷ್ಟ ರಕ್ಷಣೆ ಮಾಡುವ ದೇವಿಯ ಅನುಗ್ರಹ ಪ್ರಾಪ್ತವಾಗುತ್ತದೆ ಎಂಬ ನಂಬಿಕೆಯಿದೆ. ಶರನ್ನವರಾತ್ರಿ ಒಂಭತ್ತು ದಿನಗಳ ಕಾಲ ಶ್ರೀ ದುರ್ಗಾ ದೇವಿಯನ್ನು ಪೂಜಿಸಿ ಆಕೆಯನ್ನು ಶರಣು ಹೋಗಲು ಅತ್ಯಂತ ಪ್ರಶಸ್ತಕಾಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

    ಪಟ್ಟಣದ ಗ್ರಾಮದೇವಿ ದೇವಸ್ಥಾನದಲ್ಲಿ ಗುರುವಾರ ಶರನ್ನವರಾತ್ರಿ ನಿಮಿತ್ತ  ನಡೆದ ಗ್ರಾಮದೇವಿ ಪುರಾಣ ಕಾರ್ಯಕ್ರಮದಲ್ಲಿ ಮಾತನಾಡಿದವರು ದುಷ್ಟ ಶಕ್ತಿ ನಿಗ್ರಹಗೊಂಡು ಶಿಷ್ಟರಿಗೆ ಒಳಿತಾಗಲಿ ಎಂದು ಪ್ರಾರ್ಥಿಸಲಾಗುವ ಈ ನವರಾತ್ರಿ ಅನೇಕ ವೈಶಿಷ್ಟ್ಯತೆ ಪಡೆದು

 ಮನುಷ್ಯ ತನ್ನಲ್ಲಿರುವದುಷ್ಟಬುದ್ಧಿ, ಕೆಟ್ಟ ಗುಣಗಳನ್ನು ನಿವಾರಿಸಿಕೊಳ್ಳಲು ದೇವಿಯ ಆರಾಧನೆ ಮುಖ್ಯವಾಗಿರುತ್ತದೆ, ದೇವಿ ಆರಾಧನೆಯಿಂದ ಆತ್ಮಶುದ್ಧಿ, ಆತ್ಮಸ್ಥೈರ್ಯ, ಶಕ್ತಿಯನ್ನು ಪಡೆದುಕೊಂಡು ನೆಮ್ಮದಿಯ ಜೀವನ ರೂಪಿಸಿಕೊಳ್ಳಲು ಮುಂದಾಗಬೇಕು ಎಂದು ಹೇಳಿದರು. 

  ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ ನಮ್ಮ ಭಾರತ ಸುಸಂಸ್ಕೃತ ಧಾಮರ್ಿಕ ಭಾವನೆಗಳ ಹಿನ್ನೆಲೆಯುಳ್ಳ ದೇಶವಾಗಿರುವುದರಿಂದ ನವರಾತ್ರಿಯ ವೈಶಿಷ್ಟ್ಯ ಅಜ್ಞಾತವಾಸದಲ್ಲಿದ್ದ ಪಾಂಡವರು ಬನ್ನಿ ಮರಕ್ಕೆಕಟ್ಟಿದ್ದ ಅವರ ಆಯುಧಗಳನ್ನು ಶರನ್ನವರಾತ್ರಿಯ ನವಮಿ ದಿನದಂದು ಪೂಜಿಸಿ ಮರಳಿ ಕೈಗೆ ಪಡೆದರು. ಹಾಗೆಯೇ ಶ್ರೀರಾಮಚಂದ್ರ ರಾವಣನನ್ನು ವಧಿಸಲೆಂದು ನಾರದರಿಂದ ಉಪದೇಶ ಪಡೆದು ನವರಾತ್ರಿಯನ್ನು ಶ್ರದ್ಧೆಯಿಂದ ಆಚರಿಸಿ, ರಾವಣನನ್ನು ನವರಾತ್ರಿ ಕಾಲದಲ್ಲೇ ವಧಿಸಿದ. ಶ್ರೀದುಗರ್ಾದೇವಿ ಒಂಭತ್ತು ದಿನಗಳ ಕಾಲ ಮಹಿಷಾಸುರ ಎಂಬ ರಕ್ಕಸನಜತೆಯುದ್ಧಮಾಡಿ ನವರಾತ್ರಿಯ ಮಹಾನವಮಿಯಂದು ಸಂಹರಿಸಿದಳು. ಹಲವಾರು ಅವತಾರಗಳನ್ನು ಒಳಗೊಂಡಂತಹ ದೇವಿ ಆರಾಧನೆ ಒಂಬತ್ತು ದಿನಗಳ ಕಾಲ ಈ ಶರನ್ನವರಾತ್ರಿ ಸಂಭ್ರಮದಲ್ಲಿ ಆಚರಣೆ ಮಾಡುವುದರಿಂದ ನಮ್ಮ ಮನಸ್ಸಿನಲ್ಲಿರುವ ಅಂತಹಕೆಟ್ಟ ವಿಚಾರಗಳನ್ನು ಬಿಟ್ಟು ಒಳ್ಳೆಯ ವಿಚಾರಗಳನ್ನು  ಆರಾಧನೆಯಿಠದ ಪಡೆದುಕೊಂಡು ಪುನೀತರಾಗೋಣ ಎಂದು ಹೇಳಿದರು.

  ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಂ ಹೆಬ್ಬಾರ್ ಮಾತನಾಡಿ ತಾಯಿದೇವಿ ಎಲ್ಲರಿಗೂ ಒಳಿತು ಮಾಡಿ ರಕ್ಷಣೆ ಮಾಡಲಿ ಎಂದರು.

ಗ್ರಾಮದೇವಿ ಜಾತ್ರಾ ಸಮಿತಿ ಅಧ್ಯಕ್ಷ ಬರಮಜ್ಜ ನವಲಗುಂದದೇವಿ ಆರಾಧನೆಕುರಿತು ಮಾತನಾಡಿ ನಂತರ 2023 ರಲ್ಲಿ ಜರುಗುವ ಜಾತ್ರಾ ಮಹೋತ್ಸವಕ್ಕೆ ಪಾದಗಟ್ಟಿಗೆ ಇನ್ನೂ ಹೆಚ್ಚಿನಅನುಧಾನ ಹಾಗೂ ಜಾತ್ರೆಕ್ರೀಡಾಂಗಣದಲ್ಲಿ ನಡೆಯುವುದರಿಂದ ಕ್ರೀಡಾ ಇಲಾಖೆಯ ನಿಭಂದನೆಗಳಿಗೆ ಬದ್ದರಾಗಿರಬೇಕಾಗುತ್ತದೆ ಆದ್ದರಿಂದ ಪ್ರತ್ಯೇಕ ಒಂದು ಗ್ರಾಮದೇವಿ ಜಾತ್ರಾ ಸಮಿತಿ ಹೆಸರಿನಲ್ಲಿ ವಿಶಾಲವಾದ ಭೂಮಿಯ ಅವಶ್ಯಕತೆಯಿದೆ ಎಂದರು.

  ಕಾರ್ಯಕ್ರಮದಲ್ಲಿ ಟಿವಿ ಸುರುಗಿಮಠ, ಎಸ್ ಪಿ ಜೋಶಿ, ಶ್ರೀಕಾಂತ ಬುಳ್ಳಕ್ಕನವರ, ಪಕ್ಕೀರಜ್ಜಎಲಿಗಾರ, ಈರಣ್ಣ ಬಡ್ಡಿ, ಅಶೋಕ್ ಕುರಸಾಪುರ, ಚಂದ್ರು ಜವಳಿ, ಜಯಣ್ಣ ಹೆಸರೂರ, ರಮೇಶ ವನಹಳ್ಳಿ, ಶಂಕರಗೌಡ ಪಾಟೀಲ, ಶಿವಾನಂದ ಮ್ಯಾಗೇರಿ, ನರಹರಿಕಟ್ಟಿ, ಸೇರಿದಂತೆ ದೇವಸ್ಥಾನ ಜಾತ್ರಾ ಮಹೋತ್ಸವ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

* ಗ್ರಾಮದೇವಿ ಜಾತ್ರಾ ಸಮಿತಿಯ ಬೇಡಿಕೆಗಳನ್ನು ಸಮಿತಿಯ ಸದಸ್ಯರ ಜೊತೆಗೆ ಮಾತನಾಡಿ ಶೀಘ್ರ ಪರಿಹಾರ ಕಂಡುಕೊಂಡು ಬೇಡಿಕೆ ಈಡೇರಿಸುತ್ತೇನೆ.

-ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 

ಸುದ್ದಿ ಓದಿ