ಆಡಳಿತಾಧಿಕಾರಿಯಾಗಿ ಶರಣಬಸಪ್ಪ ನೇಮಕ
ಬಳ್ಳಾರಿ 06: ಬಳ್ಳಾರಿ ವಾಲ್ಮೀಕಿ ನಾಯಕರ ವಿದ್ಯಾಭಿವೃದ್ಧಿ ಸಂಘಕ್ಕೆ ಆಡಳಿತಾಧಿಕಾರಿಯನ್ನಾಗಿ ಸಂಡೂರು ತಾಲ್ಲೂಕಿನ ಸಹಕಾರ ಅಭಿವೃದ್ಧಿ ಅಧಿಕಾರಿ ಶರಣಬಸಪ್ಪ ಅವರನ್ನು ನೇಮಕ ಮಾಡಿ ಸಹಕಾರ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ-3(ಪ್ರ)ಗಳಾದ ಹೆಚ್.ಸಿ.ರಾಧ ಅವರು ಆದೇಶ ಹೊರಡಿಸಿದ್ದಾರೆ ಎಂದು ವಾಲ್ಮೀಕಿ ವಿದ್ಯಾಭಿವೃದ್ಧಿ ಸಂಘದ ಆಜೀವ ಸದಸ್ಯರಾದ ನಿವೃತ್ತ ಕೆ.ಇ.ಬಿ. ನೌಕರ ಜಿ.ರುದ್ರ್ಪ ಹಾಗೂ ನಿವೃತ್ತಿ ಪೊಲೀಸ್ ಅಧಿಕಾರಿ ಗೋವಿಂದಪ್ಪ ವಿ. ಇವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಹಿಂದೆ ಸದರಿ ಸಂಘಕ್ಕೆ ರಾಜಶ್ರೀ ಬಿ.ಅಗಸರ್, ಸಹಕಾರ ಸಂಘಗಳ ಅಪರ ನಿಬಂಧಕರು ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ, ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ಇವನ್ನು ಆರು ತಿಂಗಳ ಅವಧಿಗೆ ನೇಮಿಸಿ ಆದೇಶಸಲಾಗಿತ್ತು. ಹಾಗೆಯೇ ದಿ. 18ರ ಆದೇಶವನ್ನು ಹಿಂಪಡೆದು ಮುಂದಿನ ಆದೇಶದವರೆಗೂ ಯಥಾಸ್ಥಿತಿಯನ್ನು ಕಾಪಾಡುವಂತೆ ಆದೇಶಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಶರಣಬಸಪ್ಪ ಅವರನ್ನು ಸಂಘಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಕ ಗೊಳಿಸಿ ದಿ. 18ರಿಂದ ಮುಂದಿನ 6 ತಿಂಗಳ ಅವಧಿಗೆ ವಿಸ್ತರಿಸಿ ಆದೇಶಿಸಿ, ಕೂಡಲೇ ಸಂಘದ ಪ್ರಭಾವಹಿಸಿಕೊಂಡು, ಸಂಘದಲ್ಲಿನ ನ್ಯೂನ್ಯತೆಗಳನ್ನು ನಿಯಮಾನುಸಾರ ಸರಿಪಡಿಸಲು ಕ್ರಮವಿಟ್ಟು, ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆಸಿ, ಚುನಾಯಿತ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸಿ, ಸರ್ಕಾರಕ್ಕೆ ವರದಿ ಸಲ್ಲಿಸತಕ್ಕದ್ದು ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಹೆಚ್.ಸಿ.ರಾಧ ಅವರು ತಿಳಿಸಿದ್ದಾರೆ.