ಮುಂಡರಗಿ

ಚಿಂತನ ಮಾಲಿಕೆಯನ್ನು ತಮಗೆ ವೈಯಕ್ತಿಕವಾಗಿ ಸಂತಸವನ್ನು ತಂದಿದೆ : ದೇವೇಂದ್ರಪ್ಪ ರಾಮೇನಹಳ್ಳಿ

ಚಿಂತನ ಮಾಲಿಕೆಯನ್ನು ತಮಗೆ ವೈಯಕ್ತಿಕವಾಗಿ ಸಂತಸವನ್ನು ತಂದಿದೆ : ದೇವೇಂದ್ರಪ್ಪ ರಾಮೇನಹಳ್ಳಿ

ಮುಂಡರಗಿ 04: ಬಸವಾದಿ ಶರಣರು ತೋರಿದ ಹಾದಿಯಲ್ಲಿ ನಡೆಯುವುದು ನಮ್ಮೆಲ್ಲರಿಗೂ ಒಳ್ಳೆಯದು, ಕಾಯಕ, ದಾಸೋಹ ಮತ್ತು ಲಿಂಗ ಪೂಜಾ ನಿಷ್ಟೆ ಗಳನ್ನು ನಾವು ನಮ್ಮ ಜೀವನದಲ್ಲಿ ಪಾಲಿಸಿಕೊಂಡು ಬರಬೇಕು, ಮುಂಡರಗಿಯ ಸಾಹಿತ್ಯ ಬಳಗವು ಬಸವಾದಿ ಶರಣರ ಚಿಂತನ ಮಾಲಿಕೆಯನ್ನು ಆರಂಭಿಸಿರುವುದು ತಮಗೆ ವೈಯಕ್ತಿಕವಾಗಿ ಸಂತಸವನ್ನು ತಂದಿದೆ ಎಂದು ಶರಣ ಚಿಂತಕ ದೇವೇಂದ್ರ​‍್ಪ ರಾಮೇನಹಳ್ಳಿ ಹೇಳಿದರು. 

ಪಟ್ಟಣದಲ್ಲಿ ಮುಂಡರಗಿ ತಾಲೂಕಿನ ಶರಣ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಮತ್ತು ಚೈತನ್ಯ ಶಿಕ್ಷಣ ಸಂಸ್ಥೆಯ 'ಸೌರಭ' ಅಂಗ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ "ಶರಣ ಚಿಂತನಮಾಲೆಯ ಎರಡನೇ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಪ್ರಾಧ್ಯಾಪಕಿ ಶಶಿಕಲಾ ಕುಕನೂರ್, ಉಪೇಕ್ಷಿತ ವಚನಕಾರ್ತಿ ಆಯ್ದಕ್ಕಿ ಲಕ್ಕಮ್ಮನವರ ಕುರಿತು ಮಾತನಾಡಿದರು. ಆಯ್ದಕ್ಕಿ ಲಕ್ಕಮ್ಮನವರ ಕಾಯಕ ನಿಷ್ಠೆ ಮತ್ತು ದಾಸೋಹ ಶ್ರದ್ಧೆಯ ಕುರಿತು ಮಾತನಾಡಿದ ಅವರು, ಶರಣ ದಂಪತಿಗಳಾದ ಆಯ್ದಕ್ಕಿ ಮಾರಯ್ಯ ಮತ್ತು ಲಕ್ಕಮ್ಮನವರ ನಡುವಿನ ಸಂಭಾಷಣೆ ಮತ್ತು ಆಕೆಯ ಹಲವಾರು ವಚನಗಳಲ್ಲಿ ವ್ಯಕ್ತವಾದ ದಾಸೋಹದ ಕುರಿತಾದ ಪ್ರೀತಿಯನ್ನು ಮತ್ತು ದಾಸೋಹವನ್ನು ಅನೂಚಾನವಾಗಿ ನಡೆಸಿಕೊಂಡು ಬರಲು ಶರಣ ಧರ್ಮ ಹೇಗೆ ನೆರವಾಗುತ್ತದೆ ಎಂದು ಹೇಳಿದರು. 

ತಾಲೂಕ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಆರ್‌.ಎಲ್‌.ಪೊಲೀಸ್ ಪಾಟೀಲ್ ಗುರುಗಳು ಮಾತನಾಡಿ ಕಲ್ಯಾಣದ ಶರಣರು ಕಾಯಕ, ದಾಸೋಹ, ಲಿಂಗಪೂಜಾ ನಿಷ್ಠೆಗಳನ್ನು ತಮ್ಮ ಬದುಕಿನ ಭಾಗವನ್ನಾಗಿಸಿಕೊಂಡಿದ್ದರು. ಪ್ರಸ್ತುತ ಶರಣ ಚಿಂತನ ಮಾಲಿಕೆಯಲ್ಲಿ ಉಪೇಕ್ಷಿತ ವಚನಕಾರರನ್ನು ಪರಿಚಯಿಸುವ ಮೂಲಕ ಅವರ ಬದುಕು ಮತ್ತು ವಚನಗಳ ಮೂಲಕ ಅವರು ನೀಡಿದ ಸಂದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸುವುದು ನಾಲ್ಕು ಸಂಘಟನೆಗಳ ಉದ್ದೇಶವಾಗಿದ್ದು ಆ ನಿಟ್ಟಿನಲ್ಲಿ ತಾವೆಲ್ಲರೂ ಕಾರ್ಯ ಪ್ರವೃತ್ತರಾಗಿದ್ದೇವೆಂದು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕದಳಿ ಮಹಿಳಾ ವೇದಿಕೆಯ ತಾಲೂಕು ಅಧ್ಯಕ್ಷೆ ಸೀತಾ ಬಸಾಪುರ ಅವರು ವಹಿಸಿಕೊಂಡು ಮಾತನಾಡಿ, ಶರಣರು ನಡೆದು ಬಂದ ಹಾದಿಯ ಅವಲೋಕನ ನಮ್ಮ ಬದುಕಿಗೆ ದಾರೀದೀಪವಾಗುತ್ತದೆ ಎಂದು ಹೇಳಿದರು. 

ಈ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಜಿ.ಗಚ್ಚಣ್ಣವರ, ಎಸ್‌.ಬಿ.ಕೆ ಗೌಡರ್, ಎಸ್‌.ಆರ್‌.ಬಸಾಪುರ, ಮಕ್ಕಳ ಸಾಹಿತಿ ನಿಂಗು ಸೊಲಗಿ, ಶಂಕರ್ ಕುಕನೂರ್, ಆರ್‌.ಬಿ.ಹಕ್ಕಂಡಿ, ಎಂ.ಎಸ್‌.ಶೀರನಳ್ಳಿ, ಮಹೇಶ್ವರ ಮೇಟಿ, ಕಾವೇರಿ ಬೋಲಾ, ಪ್ರತಿಭಾ ಹೊಸಮನಿ, ಉಮಾ ದೊಡ್ಡಮನಿ, ಸುಮಿತ್ರಾ ಜಾಧವ್, ಗಿರಿಜಾ ಕೋರಿ ಶೆಟ್ಟರ್, ಅಕ್ಕಮಹಾದೇವಿ ಕೊಟ್ಟೂರ್ ಶೆಟ್ಟರ್, ಗಿರಿಜಾ ಸೂಡಿ, ಮಂಜುನಾಥ್ ಅಳವಂಡಿ, ರತ್ನಾ ಕಾಗನೂರ ಮಠ, ಆರ್‌.ಕೆ.ರಾಯನಗೌಡ, ಲಿಂಗರಾಜ್ ದಾವಣಗೆರೆ, ಮುಲ್ಲಾ ನವರ್, ವೈ.ಎಚ್‌.ಬಚನಹಳ್ಳಿ, ಮಂಜುನಾಥ್ ಮುಧೋಳ್, ಕೃಷ್ಣ ಸಾವ್ಕಾರ್, ಆರ್‌.ವೈ.ಪಾಟೀಲ್, ಎಸ್‌.ಕೆ.ಹುಬ್ಬಳ್ಳಿ, ಎಸ್‌.ಸಿ.ಚಕ್ಕಡಿಮಠ ಮುಂತಾದವರು ಪಾಲ್ಗೊಂಡಿದ್ದರು. 

ಜಯಶ್ರೀ ಅಳವಂಡಿ ಸ್ವಾಗತಿಸಿದರೆ, ಚೈತನ್ಯ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ವೀಣಾ ಪಾಟೀಲ್ ನಿರೂಪಿಸಿ ಕೊನೆಗೆ ವಂದಿಸಿದರು. ಮುಂಡರಗಿಯಲ್ಲಿ ಶರಣ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಮತ್ತು ಚೈತನ್ಯ ಶಿಕ್ಷಣ ಸಂಸ್ಥೆಯ 'ಸೌರಭ' ಅಂಗ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಶರಣ ಚಿಂತನಮಾಲೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕದಳಿ ಮಹಿಳಾ ವೇದಿಕೆಯ ತಾಲೂಕು ಅಧ್ಯಕ್ಷೆ ಸೀತಾ ಬಸಾಪುರ ಮಾತನಾಡಿದರು. 


ಸುದ್ದಿ ಓದಿ