ಶಿಗ್ಗಾವ್

ಸದಾಶಿವಪೇಟೆ: ಶರಣ ಬಸವೇಶ್ವರ ರಥೋತ್ಸವ

ಸದಾಶಿವಪೇಟೆ: ಶರಣ ಬಸವೇಶ್ವರ ರಥೋತ್ಸವ

ಶಿಗ್ಗಾವಿ 07 : ತಾಲೂಕಿನ ಸದಾಶಿವಪೇಟೆಯ ಶರಣಬಸವೇಶ್ವರ 41 ನೇ ವರ್ಷದ ಜಾತ್ರೋತ್ಸವದ ಅಂಗವಾಗಿ ನಡೆದ ಶರಣ ಬಸವೇಶ್ವರರ ಉತ್ಸವಮೂರ್ತಿ ಮಹಾ ರಥೋತ್ಸವ ಭಕ್ತ ಜನಸಾಗರದ ಮಧ್ಯ ಶ್ರದ್ಧಾ ಭಕ್ತಿಯಿಂದ ನೆರವೇರಿತು.

ಶರಣ ಬಸವೇಶ್ವರ ದೇವಸ್ಥಾನದಿಂದ ಪ್ರಾರಂಭಗೋಂಡ ರಥೋತ್ಸವಕ್ಕೆ ಮಠದ ಪೀಠಾಧಿಪತಿಗಳಾದ ಶಿವದೇವ ಶರಣರು ಚಾಲನೆ ನೀಡಿದರು. ರಥೋತ್ಸವ ಝಾಂಜ್ ಮೇಳ, ಡೋಳ್ಳು ಮೇಳ, ಭಜನೆ, ಕುಂಬಹೋತ್ತ ಮಹಿಳೆಯರು ಸೇರಿದಂತೆ ವಿವಿಧ ವಾಧ್ಯವೈಭವದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿಬಂದಿತು. ರಥೋತ್ಸವಕ್ಕೆ ಭಕ್ತಸಮೂಹ ಹಣ್ಣುಹೂ, ಕಾಯಿಗಳಿಂದ ವಿಶೇಷ ಪೂಜೆ ಜಲ್ಲಿಸಿ, ರಥದ ಕಳಸಕ್ಕೆ ಉತ್ತತ್ತಿ, ಬಾಳೆಹಣ್ಣು ಎಸೇದು ಭಕ್ತಿನಮನ ಸಲ್ಲಿಸಿದರು. ಮೇರವಣಿಗೆಯಲ್ಲಿ  ಹರ, ಹರ ಮಾಹಾದೇವ ಎಂಬ ಜಯಘೋಷಗಳು ಮುಗಿಲು ಮುಟ್ಟಿ ಭಕ್ತಿ ಪರಾಕಾಷ್ಟೆ ಮೇರೆಯಿತು. ಪುನ: ರಥೋತ್ಸವ ಸಾಗಿಬಂದ ಮಠದ ಆವರಣಕ್ಕೆ ತಲುಪಿ ಸಮಾರೋಪ ಗೋಂಡಿತು.

ತನ್ನಿಮಿತ್ಯ ಪ್ರಾಥಃಕಾಲ ದೇವಸ್ಥಾನದಲ್ಲಿ ಶರಣ ಬಸವೇಶ್ವರ ಹಾಗೂ ಲಿಂಗೈಕ್ಯ  ರೇವಣಸಿದ್ದೇಶ್ವರ ಶರಣರ ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಶ್ರ ಭಿಲ್ವಾರ್ಚನೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು.

ಪುಟ್ಟರಾಜ ಗವಾಯಿಗಳ ಶಿಷ್ಯ ಹೇಮರಾಜ ಶಾಸ್ತ್ರೀಗಳು, ಮುಖಂಡರಾದ ರಮೇಶ ಕಲಿವಾಳ, ಯಲ್ಲಪ್ಪ ಹುಬ್ಬಳ್ಳಿ, ಸಂಗಪ್ಪ ಗಂಗೂರ, ಸಂಗಪ್ಪ ವಡವಿ, ಮೌನೇಶ ಬಡಿಗೇರ, ಪ್ರಭಾಕರ ಬಡಿಗೇರ, ಶಂಭು ಕಿವುಡನವರ, ವೀರಪ್ಪ ರವದಿ, ಪುಟ್ಟಪ್ಪ ಬಾಗಣ್ಣವರ, ಶಿವಮೂರ್ತೆಪ್ಪ ಹಿರೇಮಠ, ಚನ್ನಪ್ಪ ಜಿಗರಿ,  ಚನ್ನಪ್ಪ ಬಿಜಾಪುರ, ಶಿವಬಸಯ್ಯ ಹೊಸಮಠ, ಗದಿಗಪ್ಪ ಬಾಗಣ್ಣವರ, ಮಲ್ಲಪ್ಪ ನೀಡಗುಂದಿ, ನಾಗರಾಜ ಬಡಿಗೇರ, ಚನ್ನಪ್ಪ ಕಿವುಡನವರ,ಈರಣ್ಣ ಶೆಟ್ಟರ, ರುದ್ರಪ್ಪ ಕಿವುಡನವರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸುದ್ದಿ ಓದಿ