ಇಂಡಿ

ಶರಣರ ಚಿಂತನೆಗಳು ಯಶಸ್ವಿ ಜೀವನಕ್ಕೆ ಸಹಕಾರಿ: ಸುನಂದಾ ವಾಲಿಕಾರ

ಶರಣರ ಚಿಂತನೆಗಳು ಯಶಸ್ವಿ ಜೀವನಕ್ಕೆ ಸಹಕಾರಿ: ಸುನಂದಾ ವಾಲಿಕಾರ

ಇಂಡಿ 10: ತಾಲ್ಲೂಕಿನ ತಡವಲಗಾ ಗ್ರಾಮ ಪಂಚಾಯಿತಿ ಆವರಣದಲ್ಲಿ ಹಡಪದ ಅಪ್ಪಣ್ಣ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ   ಸುನಂದಾ ವಾಲಿಕಾರ ಅವರು ಶರಣರ ತತ್ವ ಸಿದ್ಧಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜೀವನ ಯಶಸ್ವಿಗೆ ಸಹಕಾರ ಆಗಬಹುದು ಎಂದು ಹೇಳಿದ ಅವರು  ಹಡಪದ ಅಪ್ಪಣ್ಣ" ನವರು ಹನ್ನೆರಡನೆಯ ಶತಮಾನದ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರು. ಇವರು "ಹಡಪದ" ಸಮಾಜದವರಾಗಿದ್ದು ಬಸವಣ್ಣನವರ ಬಲಗೈ ಬಂಟನೆಂದೇ ಹೆಸರು ಪಡೆದಿದ್ದರು.  

ಬಸವಣ್ಣನವರ ಬಾಲ್ಯದ ಒಡನಾಡಿಗಳಾಗಿದ್ದ ಇವರು ವಿಶ್ವದ ​‍್ರ​‍್ರಥಮ ಪ್ರಜಾಪ್ರಭುತ್ವದ ಸಂಸತ್ತು ಎಂದೇ ಹೆಸರಾದ "ಅನುಭವ ಮಂಟಪದಲ್ಲಿ" ಬಸವಣ್ಣನವರಿಗೆ ಪ್ರಧಾನ ಕಾರ್ಯದರ್ಶಿಗಳಾಗಿ, ಬಸವಣ್ಣನವರಿಗೆ ಯಾವುದೇ ರೀತಿಯ ಮುಜುಗುರವಾಗದಂತೆ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಇವರ ಕಾರ್ಯಕ್ಷಮತೆಗೆ ಇಂದಿನವರಿಗೆ ಕನ್ನಡಿಯಾಗಿದೆಯೆಂದರೆ ತಪ್ಪಾಗಲಾರದು ಎಂದು ಹೇಳಿದರು. 

ಈ ಸಂದರ್ಭದಲ್ಲಿ ತಡವಲಗಾ ಗ್ರಾಮ ಪಂಚಾಯಿತಿ ಸದಸ್ಯರಾದ ಧರೇಪ್ಪ ನಾವಿ ರಮೇಶ ಬಡಿಗೇರ ರವಿ ಹೊಸಮನಿ, ಅಶೋಕ ಕಟ್ಟಿ ತಡವಲಗಾ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಎಸ್ ಎನ್ ನಾಮದಾರ ಎಸ್ ಎಚ್ ವಾಲಿಕಾರ ಎಂ ಬಿ ನೇಂದ್ಯಾಳ ಎಂ ಎಸ್ ಪೂಜಾರಿ ಸಿದ್ದು ಮಿರ್ಜಿ ಸೈಫನ್ ಬಾಗವಾನ ಚಿದಾನಂದ ಗಣವಲಗಾ ಗುರುಬಾಯಿ ಆಳೂರ ಸವಿತಾ ಸಮಾಜದ ಮುಖಂಡರಾದ ಶಿವಯೋಗಪ್ಪ ನಾವಿ  ತುಳಜಪ್ಪ ಹಡಪದ  ಬಸವರಾಜ ನಾವಿ  ಸೇರಿದಂತೆ ಅನೇಕರು ಉಪಸ್ಥಿತರಿದ್ದರು 


ಸುದ್ದಿ ಓದಿ