ಬಳ್ಳಾರಿ

ಶಾಂತಲಾಗೆ ಡಾಕ್ಟರೇಟ್ ಪದವಿ

ಶಾಂತಲಾಗೆ ಡಾಕ್ಟರೇಟ್ ಪದವಿ

ಬಳ್ಳಾರಿ 12: ಸ್ಥಳೀಯ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಸ್ವಾಯತ್ತ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಶಾಂತಲಾ ಅವರಿಗೆ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಡಾಕ್ಟರ್ ಆಫ್ ಫಿಲಾಸಫಿ ಪದವಿಯನ್ನು ಘೋಷಿಸಿದೆ. ಶಾಂತಲಾ ಅವರು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ. ರಾಬರ್ಟ್ ಜೋಸ್ ಅವರ ಮಾರ್ಗದರ್ಶನದಲ್ಲಿ” ಆ್ಯನ್  ಅನಾಲಿಸಿಸ್ ಆಫ್ ವಿಮೆನ್ ರೆಪ್ರಸೆಂಟೇಶನ್ ಇನ್ ದಿ ಸೆಲೆಕ್ಟ್ ವರ್ಕ್ಸ್ ಆಫ್ ಯು.ಆರ್. ಅನಂತಮೂರ್ತಿ ಆ್ಯಂಡ್  ದೇವನೂರು ಮಹಾದೇವ’ ಎಂಬ ಶೀರ್ಷಿಕೆಯಡಿಯಲ್ಲಿ ಸಂಶೋಧನೆ ಕೈಗೊಂಡು ಮಹಾಪ್ರಬಂಧ ಮಂಡಿಸಿದ್ದರು.

ಸುದ್ದಿ ಓದಿ