ಶಾಮನೂರ ಶಿವಶಂಕರಪ್ಪ "ಹಜಾಮರು" ಪದ ಬಳಸಿದ್ದು ಖಂಡನೀಯ : ವಿರೇಶ
ಶಿಗ್ಗಾವಿ 23 : ಕಾಂಗ್ರೆಸ್ನ ಹಿರಿಯ ಮುಖಂಡ ಶಾಮನೂರ ಶಿವಶಂಕರಪ್ಪ ಅವರು ವೀರಶೈವ ಲಿಂಗಾಯತ ಮಹಾಸಭಾದ ಅಧಿವೇಶನದ ಕುರಿತು ನಡೆಯುತ್ತಿದ್ದ ಸುದ್ದಿಗೋಷ್ಠಿಯಲ್ಲಿ "ಹಜಾಮರು" ಎಂಬ ಪದ ಬಳಸಿದ್ದು ಖಂಡೀನೀಯ ಎಂದು ಶಿಗ್ಗಾವಿ ತಾಲೂಕಾ ಹಡಪದ ಅಪ್ಪಣ್ಣ ಸಮಾಜದ ಶಹರ ಘಟಕದ ಕ್ಷೌರಿಕ ವೃತ್ತಿಬಾಂಧವರ ಅಧ್ಯಕ್ಷ ವೀರೇಶ ಹಡಪದ ತಿಳಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರಾಗಿ, ಸಚಿವರಾಗಿ ಕಾರ್ಯನಿರ್ವಹಿಸಿದ ಶಾಮನೂರ ಶಿವಶಂಕರ್ಪ ಅವರು, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರು ಕೂಡ, ವೀರಶೈವ-ಲಿಂಗಾಯತ ಧರ್ಮದಲ್ಲಿ ಹಲವಾರು ಉಪ ಪಂಗಡಗಳಿವೆ, ಬಸವಾದಿ ಶರಣರ ತತ್ವದಲ್ಲಿ ನಂಬಿಕೆಯಿಟ್ಟು ಬಂದವರಲ್ಲಿ ಹಡಪದ ಸಮಾಜ ಕೂಡ ಒಂದು, ತಮ್ಮ ಪರಂಪರಾಗತ ಕ್ಷೌರಿಕ ಕಾಯಕದಲ್ಲಿ ತೊಡಗಿರುವ ಸಮಾಜವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವ ಪ್ರವೃತ್ತಿ ಬೆಳೆದಿದೆ, ತಮ್ಮ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕಾರಣಕ್ಕಾಗಿ ವೀರಶೈವ-ಲಿಂಗಾಯತ ಎನ್ನತ್ತ ತಮ್ಮ ಸ್ವಾರ್ಥ ಸಾಧನೆ ಮಾಡಿಕೊಳ್ಳುವ ವ್ಯವಸ್ಥಿತ ತಂತ್ರ ನಡೆಯುತ್ತಿದೆ, ಸರಕಾರದ ಆದೇಶದನ್ವಯ ಹಜಾಮರು ಪದವನ್ನು ಬಳಕೆ ಮಾಡುವಂತಿಲ್ಲ, ಒಂದು ಸಮಾಜಕ್ಕೆ ಅವಮಾನವಾಗುವ ರೀತಿಯಲ್ಲಿ ಹಿರಿಯರು ಮತ್ತು ಅನುಭವಿಗಳು ಆದ ಶಾಮನೂರ ಶಿವಶಂಕರ್ಪ ಅವರು ಮಾತನಾಡಿದ್ದಾರೆ, ಇದು ಇಡೀ ಹಡಪದ ಸಮಾಜದ ಜನರಲ್ಲಿ ನೋವು ತಂದಿದೆ, ಈ ವಿಷಯವನ್ನು ಶಾಮನೂರ ಶಿವಶಂಕರ್ಪ ಅವರ ಗಮನಕ್ಕೆ ತಂದರೂ ಕ್ಷಮೆ ಒಂದೆಡೆ ಇರಲಿ, ವಿಷಾದ ಕೂಡ ವ್ಯಕ್ತಪಡಿಸದೇ ಹಗುರವಾಗಿ ಪರಿಗಣಿಸಿದ್ದಾರೆ, ಇನ್ನು ಇದಕ್ಕೂ ನೋವಿನ ಸಂಗತಿ ಎಂದರೆ, ವೀರಶೈವ-ಲಿಂಗಾಯತ ಸಮಾಜದ ಯಾವುದೇ ಮುಖಂಡರು ಬಾಯಿಬಿಡದಿರುವುದು ಇನ್ನೂ ನೋವಿನ ಸಂಗತಿಯಾಗಿದೆ ಎಂದರು.
ತಾಲೂಕಾ ಹಡಪದ ಸಮಾಜದ ಗೌರವಾದ್ಯಕ್ಷ ಬಸವರಾಜ ಹಡಪದ, ತಾಲೂಕಾದ್ಯಕ್ಷ ಮಲ್ಲಿಕಾರ್ಜುನ ಹಡಪದ, ಉಪಾದ್ಯಕ್ಷ ಶಿವರಾಜ್ ಕ್ಷೌರದ, ಜಗದೀಶ ಹಡಪದ, ರುದ್ರಪ್ಪ ಹಡಪದ, ಸೇರಿದಂತೆ ಹಡಪದ ಸಮಾಜದ ಇತರ ಮೊದಲಾದವರಿದ್ದರು.