ಮನರಂಜನೆ

ಜೈಲಿನಲ್ಲಿರುವ ಮಗ ಆರ್ಯನ್‌ ಭೇಟಿ ಮಾಡಿ ತೆರಳಿದ ಶಾರುಖ್‌ ಖಾನ್‌

ಜೈಲಿನಲ್ಲಿರುವ  ಮಗ ಆರ್ಯನ್‌   ಭೇಟಿ  ಮಾಡಿ  ತೆರಳಿದ ಶಾರುಖ್‌ ಖಾನ್‌

ಮುಂಬೈ, ಅ  21: ಕ್ರೂಸ್ ಹಡಗು    ಡ್ರಗ್ಸ್   ಪಾರ್ಟಿ  ಪ್ರಕರಣದಲ್ಲಿ  ಬಂಧಿತನಾಗಿರುವ   ಪುತ್ರ     ಆರ್ಯನ್ ಖಾನ್ ನನ್ನು   ನೋಡಲು  ಬಾಲಿವುಡ್ ತಾರೆ ಶಾರುಖ್ ಖಾನ್  ಗುರುವಾರ ಮುಂಬೈನ  ಆರ್ಥರ್ ರೋಡ್ ಜೈಲಿಗೆ ಭೇಟಿ ನೀಡಿದರು.   ಮಗನೊಂದಿಗೆ ಸ್ವಲ್ಪ ಕಾಲ  ಮಾತನಾಡಿ  ಅವರು  ಹಿಂದಿರುಗಿದರು.   ಅವರು ಪೊಲೀಸ್ ಕಸ್ಟಡಿಯಲ್ಲಿರುವ  ಆರ್ಯನ್‌  ನನ್ನು    ಭೇಟಿಯಾಗಿರುವುದು    ಇದೇ ಮೊದಲು.  ಅಕ್ಟೋಬರ್ 2 ರಂದು ಬಂಧನಕ್ಕೊಳಗಾದ  ಆರ್ಯನ್ ಜಾಮೀನಿಗಾಗಿ  ಹಲವು  ಬಾರಿ   ಆರ್ಜಿ  ಸಲ್ಲಿಸಿದ್ದಾನೆ.  ಆದರೆ,   ಪ್ರಕರಣದ ವಿಚಾರಣೆ ನಡೆಸಿದ ವಿಶೇಷ  ನ್ಯಾಯಾಲಯ  ಆರ್ಜಿಯನ್ನು   ವಜಾಗೊಳಿಸಿದೆ. ನಿನ್ನೆ ಕೂಡ ಜಾಮೀನು ನಿರಾಕರಿಸಲಾಗಿದೆ.  ಈ ಕ್ರಮದಲ್ಲಿ  ಮಗನನ್ನು  ನೋಡಲು  ಶಾರುಖ್‌ ಖಾನ್‌  ಜೈಲಿಗೆ ಬಂದಿದ್ದರು.  ಕಳೆದ ವಾರ  ಆರ್ಯನ್ ತನ್ನ ತಂದೆ ತಾಯಿಯೊಂದಿಗೆ  ವೀಡಿಯೊ ಕಾಲ್‌ ನಲ್ಲಿ  ಮಾತನಾಡಿದ್ದ   ಎಂದು ತಿಳಿದುಬಂದಿದೆ.

ಏತನ್ಮಧ್ಯೆ, ಮಹಾರಾಷ್ಟ್ರ ಸರ್ಕಾರ   ಕೋವಿಡ್     "ಪ್ರಸರಣ"   ನಿಯಂತ್ರಣದಲ್ಲಿರುವುದರಿಂದ  ನಿಯಮ ಸಡಿಲಗೊಳಿಸಿರುವುದರಿಂದ     ಜೈಲಿನಲ್ಲಿರುವ   ತಮ್ಮ  ವ್ಯಕ್ತಿಗಳನ್ನು   ಭೇಟಿಯಾಗಲು  ಅವಕಾಶ ಮಾಡಿಕೊಟ್ಟಿದೆ.     ಇಬ್ಬರು  ಕುಟುಂಬದ ಸದಸ್ಯರು   ಕೈದಿಗಳನ್ನು ಭೇಟಿ ಮಾಡಬಹುದು.  ಈ   ಸೌಲಭ್ಯ  ಲಭ್ಯವಾದ  ನಂತರವೇ  ಶಾರುಖ್ ತಮ್ಮ  ಮಗನನ್ನು ಭೇಟಿಯಾಗಲು ಬಂದಿದ್ದಾರೆ.   ಪ್ರಕರಣ ವಿಚಾರಣೆಯ ಭಾಗವಾಗಿ, ಶಾರುಖ್ ಮ್ಯಾನೇಜರ್,  ವಕೀಲರು  ಆರ್ಯನ್ ಜೊತೆ ಸಮಾಲೋಚನೆ  ನಡೆಸುತ್ತಿದ್ದಾರೆ.  ವಿಶೇಷ ನ್ಯಾಯಾಲಯ ಈಗಾಗಲೇ ಹಲವು  ಬಾರಿ  ಜಾಮೀನು ನಿರಾಕರಿಸಿದ್ದರಿಂದ ಆರ್ಯನ್ ಬಾಂಬೆ ಹೈಕೋರ್ಟ್  ಮೊರೆ ಹೋಗಿದ್ದಾರೆ.

ಸುದ್ದಿ ಓದಿ