ಹಲವಾರು ಕಾರ್ಯಕ್ರಮಗಳ ಯೋಜನೆ ರೂಪಿಸಲಾಗಿದೆ: ರಾಜೇಶ್ವರಿ
- ಲೋಕದರ್ಶನ ವರದಿ
ಮುಂಡಗೋಡ:ತಾಲೂಕಿನಲ್ಲಿ ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಹಲವಾರು ಜನಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದು ಪ್ರಶಂಸೆಗೆ ಪಾತ್ರವಾಗಿದೆ ಎಂದು ಹುಬ್ಬಳ್ಳಿ ಇನ್ನರ್ ವ್ಹೀಲ್ ಕ್ಲಬ್ನ ನಿಕಟಪೂರ್ವ ಅಧ್ಯಕ್ಷೆ ರಾಜೇಶ್ವರಿ ವಾಸುಕಿ ಹೇಳಿದರು.
ಪಟ್ಟಣದ ಟ್ರನಿಟಿ ಹಾಲ್ನಲ್ಲಿ 2022-23ನೇ ಸಾಲಿನ ಇನ್ನರ್ ವೀಲ್ಕ್ಲಬ್ನ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ವಿಧವೆಯರಿಗೆ ನೆರವು, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಆರೋಗ್ಯ ಶಿಬಿರ ಹೀಗೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು ಬರುವ ದಿನಗಳಲ್ಲಿ ಇನ್ನೂ ಹಲವಾರು ಕಾರ್ಯಕ್ರಮಗಳ ಯೋಜನೆ ರೂಪಿಸಲಾಗಿದೆ ಎಂದರು.
ನೂತನ ಅಧ್ಯಕ್ಷೆ ಸರೋಜಾ ಛಬ್ಬಿ ಮಾತನಾಡಿ ನಮ್ಮ ಕ್ಲಬ್ನಿಂದ ಪರಿಸರ ಬೆಳೆಸಿ ನಾಡು ಉಳಿಸಿ ಎಂಬ ಸಂದೇಶದೊಂದಿಗೆ ಭೂತಾಯಿಯ ಸಂರಕ್ಷಣೆಗೋಸ್ಕರ ಗಿಡಗಳನ್ನು ನೆಡುವುದು, ನೀರಿನ ಮರು ಬಳಕೆ, ತಾಜ್ಯ ವಸ್ತುಗಳ ಸಮರ್ಕ ವಿಲೇವಾರಿ, ಸೌರಶಕ್ತಿಯ ಬಳಕೆ ಅಭಿಯಾನದ ಮೂಲಕ ಕಾರ್ಯಗತಗೊಳಿಸಲಾಗುವುದು. ಮಕ್ಕಳ, ವೃದ್ಧರ ಹಾಗೂ ಸ್ತ್ರೀಯರ ಆರೋಗ್ಯದ ಕುರಿತು ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಕ್ಲಬ್ನ ನೂತನ ಅಧ್ಯಕ್ಷರಾಗಿ ಸರೋಜಾ ಛಬ್ಬಿ, ಕಾರ್ಯದರ್ಶಿಯಾಗಿ ದಿವ್ಯಾ ರಾವ್, ಖಜಾಂಚಿಯಾಗಿ ಮಂಜುಳಾ ಇಂಗಳೆ, ಐಎಸ್ಒ ಸಿಂಧು ಥಾಮಸ್ ಹಾಗೂ ಎಡಿಟರ್ ಆಗಿ ಶಾಲಿನಿ ಮದಭಾವಿ ಅಧಿಕಾರ ಸ್ವೀಕರಿಸಿದರು.
ನಿಕಟಪೂರ್ವ ಅಧ್ಯಕ್ಷೆ ಶಶಿರೇಖಾ ಬೈಜು ಸ್ವಾಗತಿಸಿದರು. ಸಂಗೀತಾ ಬಾಡಕರ ವರದಿ ವಾಚಿಸಿದರು. ಎಡಿಟರ್ ಶ್ಯಾಮಲಾ ನಾಯ್ಕ, ರೇಖಾ ಅಂಡಗಿ, ವಿನಯಾ ಹೆಗಡೆ, ಶೈಲಜಾ ಕಾನಡೆ, ಹರಿಣಿ ಪ್ರಸಾದ, ವಿಜಯಲಕ್ಷ್ಮೀ ನಾಯ್ಕ, ಭಾರತಿ ಗೋಕರ್ಣ, ರೇಖಾ ಬೋರಕರ, ಜ್ಯೋತಿ ಕುರ್ಡೇಕರ, ಕವಿತಾ ಮಾತ್ರೋಜಿ, ಜಯಶ್ರೀ ಕೋಳುರ, ಜಯಾ ಸೆಲ್ವಿ, ಗಿರಿಜಾ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.