ಮನರಂಜನೆ

ಸೆವೆನ್‌ರಾಜ್ ಮುಂದಾಳತ್ವದಲ್ಲಿ ಸೆ.17ಕ್ಕೆ ಬರಲಿದ್ದಾರೆ ಚಡ್ಡಿ ದೋಸ್ತ್‌ಗಳು

ಸೆವೆನ್‌ರಾಜ್ ಮುಂದಾಳತ್ವದಲ್ಲಿ ಸೆ.17ಕ್ಕೆ ಬರಲಿದ್ದಾರೆ ಚಡ್ಡಿ ದೋಸ್ತ್‌ಗಳು
ಸೆವೆನ್‌ರಾಜ್ ಪ್ರೊಡಕ್ಷನ್ ಬ್ಯಾನರ್‌ನಲ್ಲಿರೆಡ್‌ಅಂಡ್ ವೈಟ್‌ಖ್ಯಾತಿಯ ಸೆವೆನ್‌ರಾಜ್ ನಿರ್ಮಾಣದ 'ಚಡ್ಡಿ ದೋಸ್ತ್‌ ಕಡ್ಡಿ ಅಲ್ಲಾಡುಸ್ಬುಟ್ಟ' ಚಿತ್ರ ರೀಲೀಸ್‌ಗೆ ಸಿದ್ಧವಾಗಿದ್ದು, ಇದೇ ಸೆ.17ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಹಾಸ್ಯದ ಜೊತೆ ಸ್ನೇಹ, ಪ್ರೀತಿಯ ಕಥಾನಕ ಹೊಂದಿರುವ ಈ ಚಿತ್ರಕ್ಕೆ ಆಸ್ಕರ್ ಕೃ?್ಣ ಆ್ಯಕ್ಷನ್‌-ಕಟ್ ಹೇಳುವುದರೊಂದಿಗೆ ನಾಯಕನಾಗಿ ನಟಿಸಿದ್ದಾರೆ. "ಂದೆ 'ಮನಸಿನ ಮರೆಯಲಿ' ಎಂಬ ಅಪ್ಪಟ ಪ್ರೇಮ ಕಥಾನಕದ ಸಿನಿಮಾ ಮಾಡಿದ್ದ ಆಸ್ಕರ್ ಕೃ?್ಣ ಅವರ ನಿರ್ದೇಶನದ ಮತ್ತೊಂದು ಮಾಸ್ ಎಂಟರ್ ಟೈನರ್ ಚಿತ್ರ ಇದಾಗಿದೆ. ನಿರ್ಮಾಪಕ ಸೆವೆನ್‌ರಾಜ್ ಅವರು ಈ ಚಿತ್ರದಲ್ಲಿ ಖಳನಾಯಕನಾಗುವ ಮೂಲಕ ಬಹಳ ದಿನಗಳ ನಂತರ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅಲ್ಲದೆ ಈ ಚಿತ್ರವನ್ನು ಅದ್ದೂರಿ ವೆಚ್ಚದಲ್ಲಿ ನಿರ್ಮಾಣ ಸಹ ಮಾಡಿದ್ದಾರೆ. 'ನಮ್ಮ ಕುಟುಂಬದಲ್ಲಿ ನಾನು ಏಳನೇ ಮಗ, ಹಾಗಾಗಿ ನಮ್ಮ ತಂದೆ ನನಗೆ ಸೆವೆನ್‌ರಾಜ್ ಅಂತ ಹೆಸರಿಟ್ಟಿದ್ರು. ಚಿತ್ರದಲ್ಲಿ ಮೇನ್ "ಲನ್ ಆಗಿ ಕಾಣಿಸಿಕೊಂಡಿದ್ದೇನೆ. 30 ವ?ರ್ಗಳ "ಂದಾದ ಅವಮಾನವೇ ನಾನೀ ಮಟ್ಟಕ್ಕೆ ಬೆಳೆಯಲು ಕಾರಣ, ನಮ್ಮ ಚಿತ್ರವನ್ನು 7 ಕೋಟಿ ಕನ್ನಡಿಗರು ಗೆಲ್ಲಿಸುತ್ತಾರೆ' ಎನ್ನುವರು ನಿರ್ಮಾಪಕರು. ಈ ಚಿತ್ರದಲ್ಲಿ ನಾಯಕಿಯಾಗಿ ಮಲಯಾಳಿ ಬೆಡಗಿ ಗೌರಿ ನಾಯರ್ ಕಾಣಿಸಿಕೊಂಡಿದ್ದಾರೆ. ಈಚೆಗೆ ನಡೆದ ಚಿತ್ರದ ಪತ್ರಿಕಾಗ್ಟೋಯಲ್ಲಿ ನಿರ್ದೇಶಕ ಆಸ್ಕರ್ ಕೃ?್ಣ ಮಾತನಾಡುತ್ತ ಆರಂಭದಲ್ಲಿ ಈ ಚಿತ್ರಕ್ಕೆ ಬೇರೆ ಬೇರೆ ಟೈಟಲ್ ಪ್ಲಾನ್ ಮಾಡಿದ್ದೆವು. ಇಬ್ಬರು ಸ್ನೇ"ತರ ನಡು"ನ ಬಾಂಡಿಂಗ್, ಅದರ ಸುತ್ತ ಒಂದ?್ಟು ಘಟನೆಗಳು, ಅವರ ನಡುವೆ ಒಂದು ಹುಡುಗಿ ಬಂದಾಗ ಎದುರಾಗುವಂಥ ಸಂದರ್ಭಗಳು ಈ ಚಿತ್ರದ ಪ್ರಮುಖ ಕಥಾನಕ. ಲೋಕೇಂದ್ರ ಸೂರ್ಯ ಕಲಾ"ದನಾಗಿ ಬಂದವರು ನಂತರ ಚಿತ್ರಕಥೆಯಲ್ಲೂ ಇನ್‌ವಾಲ್ ಆಗಿ ಅತ್ಯದ್ಭುತವಾದ ಚಿತ್ರಕಥೆ, ಸಂಭಾ?ಣೆ ಬರೆದರು. ಚಿತ್ರ ಮಾಡ್ತಾ ಮಾಡ್ತಾ ಬಜೆಟ್ ಜಾಸ್ತಿಯಾದಾಗ ದೇವರಂತೆ ಬಂದವರೇ ಸೆವೆನ್‌ರಾಜ್‌. ಒಂದು ಮೂಲದಿಂದ ಇವರ ಪರಿಚಯವಾುತು, ಒಂದೇ ಲೈನ್‌ನಲ್ಲಿ ಕಥೆ ಕೇಳಿ ಬಂಡವಾಳ ಹಾಕಲು ಒಪ್ಪಿದರು. ಜೊತೆಗೆ ಚಿತ್ರದಲ್ಲಿ ಖಳನಾಯಕನ ಪಾತ್ರವನ್ನು ಅದ್ಭುತವಾಗಿ ನಿರ್ವ"ಸಿದ್ದಾರೆ. ಈ ಥರ ಸಿನಿಮಾ ಪ್ರೀತಿಸುವ ಪ್ರೊಡ್ಯೂಸರ್ ಸಿಗುವುದು ತುಂಬಾ ಕ"್ಮು. ನಮ್ಮ ಶ್ರಮ ಹಾಗೂ ನಿರ್ಮಾಪಕರ ಪ್ರಾಮಾಣಿಕತೆ ಸೇರಿ ಉತ್ತಮ ಪ್ರಾಜೆಕ್ಟ್‌ ಹೊರಬಂದಿದೆ. ಲಾಕ್‌ಡೌನ್ ನಂತರ ಆರಂಭವಾದ ಮೊದಲ ಚಿತ್ರವೇ ನಮ್ಮದು. ಗೌರಿ ನಾಯರ್ ನನಗೆ 4-5 ವ?ರ್ಗಳ ಸ್ನೇ"ತೆ. ಈಗಾಗಲೇ ಮಲಯಾಳಂನಲ್ಲಿ ಅಭಿನುಸಿದ್ದು, ನಮ ್ಮಚಿತ್ರದಲ್ಲಿ ಉತ್ತಮ ಅಭಿನಯ ನೀಡಿದ್ದಾರೆ. ಸಿಂಗಲ್‌ಟೇಕ್ ನಾಯಕಿ, ನಿರ್ಮಾಪಕರೂ ಅದ್ಭುತವಾಗಿ ನಟಿಸಿದ್ದಾರೆ. ಅನಂತ್ ಆರ್ಯನ್ ಸುಮಧುರವಾಗಿ ಹಾಡುಗಳನ್ನು ಕಂಪೋಜ್ ಮಾಡಿದ್ದಾರೆ. ರಾಜೇಶ್‌ಕೃ?್ಣನ್, ಅನುರಾಧಾ ಭಟ್, ಜೋಗಿ ಸುನಿತಾ ಅದ್ಭುತವಾಗಿ ಹಾಡಿದ್ದಾರೆ. ಗಗನ್ ತುಂಬಾ ಚೆನ್ನಾಗಿ ಕ್ಯಾಮೆರಾ ವರ್ಕ್‌ ಮಾಡಿ ಕೊಟ್ಟಿದ್ದಾರೆ. ಸಮಾಜದ ಕಣ್ಣಲ್ಲಿ ನಾಯಕರಿಬ್ಬರೂ ಕ್ರಿ"ುನಲ್ ಆಗಿದ್ದರೂ ಅವರ ನಡು"ನ ಸ್ನೇಹ ಸಂಬಂಧ ಉತ್ತಮವಾಗಿರುತ್ತದೆ. ಎ?್ಟೋ ದೊಡ್ಡ ದೊಡ್ಡ ಘಟನೆಗಳು ಸಣ್ಣ ಸಣ್ಣ ಕಾರಣಗಳಿಂದ ಜರುಗುತ್ತವೆ, ಅದೇ ರೀತಿ ಇಲ್ಲೂ ಆಗುತ್ತದೆ. ಇವರಲ್ಲಿ ಕ್ರಿ"ುನಲ್ ಯಾರು? ನಿಜವಾದ ಇನ್ನೋಸೆಂಟ್ ಯಾರು? ಅನ್ನೋದರ ಮೇಲೆ ಈ ಚಿತ್ರದ ಕಥೆ ಸಾಗುತ್ತದೆ. ಬೆಂಗಳೂರು, ತುಮಕೂರು, ಕುಣಿಗಲ್ ಸುತ್ತಮುತ್ತ ಚಿತ್ರದ ಶೂಟಿಂಗ್ ನಡೆಸಲಾಗಿದೆ. 3 ಹಾಡು. 2 ಫೈಟ್ಸ್‌ ಚಿತ್ರದಲ್ಲಿದೆ. ಈಗ 50ಅ ಇದ್ದರೂ ಬಿಡುಗಡೆ ಮಾಡುತ್ತಿದ್ದೇವೆ. ನಿರ್ಮಾಪಕರ ಲಕ್ಕಿ ನಂಬರ್ 7, ಚಿತ್ರವೂ 17ರಂದೇ ಬಿಡುಗಡೆಯಾಗುತ್ತಿದೆ ಎಂದು ಚಿತ್ರದ ಕುರಿತಂತೆ ಬಹುತೇಕ ಮಾ"ತಿಯನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಲೋಕೇಂದ್ರ ಸೂರ್ಯ, ಛಾಯಾಗ್ರಾಹಕ ಗಗನ್‌ಕುಮಾರ್, ಸಂಗೀತ ನಿರ್ದೇಶಕ ಅನಂತ್‌ಅರ್ಯನ್ ಕೂಡ ಹಾಜರಿದ್ದು ಮಾತನಾಡಿದರು.

ಸುದ್ದಿ ಓದಿ