ಸೇವಾದಳ ಸಂಸ್ಥೆ ಸ್ವಾತಂತ್ರ್ಯ ಪಡೆಯುವಲ್ಲಿ ಪ್ರಮುಖ ಪಾತ್ರವಹಿಸಿದೆ: ರಾಠೋಡ
ಇಂಡಿ: ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿದಂತಹ ಸೇವಾದಳ ಸಂಸ್ಥೆ ಸ್ವಾತಂತ್ರ್ಯ ಪಡೆಯುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ ಹೇಳಿದರು.
ಗುರುವಾರ ಪಟ್ಟಣದ ಸರಕಾರಿ ಉರ್ದು ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಭಾರತ ಸೇವಾದಳದ ಶಿಬಿರದಲ್ಲಿ ಮಾತನಾಡಿದರು.
ಸೇವಾದಳದ ಮೂಲಕ ಶಿಕ್ಷಕರಿಗೆ, ಮಕ್ಕಳಿಗೆ ಹಾಗೂ ಯುವಕ ಯುವತಿಯರಿಗೆ ರಾಷ್ಟ್ರೀಯ ಭಾವೈಕ್ಯತೆ, ರಾಷ್ಟ್ರಾಭಿಮಾನ, ಸೇವಾ ಮನೋಭಾವನೆ, ಶಿಸ್ತು, ಸಮಯ ಪ್ರಜ್ಞೆಯ ಕುರಿತು ಎಲರಿಗೂ ಜಾಗೃತಿ ಮೂಡಿಸುತ್ತಿದೆ. ಭಾರತ ಸೇವಾದಳದ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
ವಾಯ್.ಎಸ್.ಬಿರಾದಾರ, ಜಿ.ಜಿ.ಬರಡೋಲ, ಎಸ್.ಬಿ.ಕಲ್ಲೊಳ್ಳಿ, ಎಲ್.ಬಿ.ತೋಟದ, ನಾಗೇಶ ಡೋಣುರ ಮಾತನಾಡಿದರು.
ಎಸ್.ಎಸ್.ಹಚಡದ, ವಾಯ್.ಟಿ.ಪಾಟೀಲ, ಎಫ್.ಎಂ.ತುರ್ಕಿ ಸೇರಿದಂತೆ 50 ಜನ ಶಿಕ್ಷಕ ಶಿಕ್ಷಕಿಯರು ಭಾಗವಹಿಸಿದ್ದರು.