ಸೆನ್ಸೆಕ್ಸ್ 158 ಅಂಕ ಇಳಿಕೆ
ಮುಂಬೈ, ನ 8: ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 158 ಅಂಕ ಇಳಿಕೆ ಕಂಡಿದೆ. ಸೆನ್ಸೆಕ್ಸ್ 158.57 ಅಂಕ ಇಳಿಕೆ ಕಂಡು 40,495.17 ರಲ್ಲಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಸಹ 54.15 ಅಂಕ ಇಳಿಕೆ ಕಂಡು 11,957.90 ರಲ್ಲಿ ವಹಿವಾಟು ಆರಂಭಿಸಿತು. ಸೆನ್ಸೆಕ್ಸ್ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 40,630.56 ಮತ್ತು 40,452.26. ನಿಫ್ಟಿ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 11,996.55 ಮತ್ತು 11,948.50. ಹಣಕಾಸು, ಬ್ಯಾಂಕ್ ಎಕ್ಸ್, ಬಂಡವಾಳ ಸರಕುಗಳು ಆರಂಭಿಕ ವಹಿವಾಟಿನಲ್ಲಿ ಚೇತರಿಕೆ ನೀಡಿವೆ. ಐಸಿಐಸಿಐ ಬ್ಯಾಂಕ್ ಶೇ 2.47 ರಷ್ಟು ಏರಿಕೆ ಕಂಡು 490.50 ರೂ, ಯೆಸ್ ಬ್ಯಾಂಕ್ ಶೇ 2.41 ರಷ್ಟು ಏರಿಕೆಯಾಗಿ 68.10 ರೂ, ಇಂಡಸ್ ಇಂಡ್ ಬ್ಯಾಂಕ್ ಶೇ 2.40 ರಷ್ಟು ಹೆಚ್ಚಳ ಕಂಡು 1414 ರೂ, ಎಮ್ & ಎಮ್ ಶೇ 1.83 ಏರಿಕೆಯಾಗಿ 591.05 ರೂ ನಷ್ಟಿತ್ತು. ಸನ್ ಫಾರ್ಮ್ ಶೇ 2.79 ರಷ್ಟು ಇಳಿಕೆ ಕಂಡು 428.15 ರೂ, ಹಿಂದ್ ಯೂನಿಲಿವರ್ ಶೇ 1.92 ರಷ್ಟು ಇಳಿಕೆಯಾಗಿ 2096.65 ರೂ, ಐಟಿಸಿ ಶೇ 1.67 ರಷ್ಟು ಕುಸಿದು 261.45 ರೂ ಮತ್ತು ಟಾಟಾ ಸ್ಟೀಲ್ ಶೇ 1.66 ರಷ್ಟು ಇಳಿಕೆಯಾಗಿ 396.45 ರೂ ನಷ್ಟಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 