ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಪರಶುರಾಮ ಕೊಣ್ಣೂರ ಸರ್ವಾನುಮತದಿಂದ ಆಯ್ಕೆ
ಮುದ್ದೇಬಿಹಾಳ 18: ಕರ್ನಾಟಕ ಮಾಧ್ಯಮ ಒಕ್ಕೂಟ ಬೆಂಗಳೂರು ಸಂಘದ ಮುದ್ದೇಬಿಹಾಳ ತಾಲೂಕಾ ಅಧ್ಯಕ್ಷರಾಗಿ ಸಾಹಿತಿ, ಹಿರಿಯ ಪತ್ರಕರ್ತ ಪರಶುರಾಮ ಕೊಣ್ಣೂರ ಅವರನ್ನು ಸರ್ವಾನುಮತದಿಂದ ಸರ್ವ ಸದಸ್ಯರ ಸಮ್ಮುಖದಲ್ಲಿ ಸಂಘದ ರಾಜ್ಯಧ್ಯಕ್ಷ ನಾರಾಯಣ ಮಾಯಾಚಾರಿ ಘೋಷಣೆ ಮಾಡಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ನಡೆದ ಕರ್ನಾಟಕ ಮಾಧ್ಯಮ ಒಕ್ಕೂಟ ಬೆಂಗಳೂರು ಮುದ್ದೇಬಿಹಾಳ ಸಂಘದ ಸಭೆಯಲ್ಲಿ ಸರ್ವಸದಸ್ಯರು ಒಮ್ಮತದಿಂದ ಸಂಘಕ್ಕೆ ಸೇರೆ್ಡಯಾದ ನೂತನ ತಾಲೂಕು ಅಧ್ಯಕ್ಷರಿಗೆ ಹಾಗೂ ಪತ್ರಕರ್ತ ಶಿವಕುಮಾರ್ ಶಾರದಳ್ಳಿ ಅವರಿಗೆ ಅಭಿನಂದನೆ ತಿಳಿಸಿದರು.
ಈ ಸಂದರ್ಭದಲ್ಲಿ ಕ.ಮಾ ಒಕ್ಕೂಟ ಬೆಂಗಳೂರು ರಾಜ್ಯಾಧ್ಯಕ್ಷರಾದ ನಾರಾಯಣ ಮಾಯಾಚಾರಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾರಂಗ ಶ್ರೇಷ್ಠವಾಗಿದೆ. ಸಮಾಜದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಪತ್ರಕರ್ತರ ಶ್ರಮ ದೊಡ್ಡದು. ಜನರ ಮಧ್ಯೆ ಕೊಂಡಿಯಾಗಿ ಕೆಲಸ ಮಾಡುತ್ತಿರುವ ಮಾಧ್ಯಮ ಮತ್ತು ಪತ್ರಕರ್ತರು, ತಮ್ಮದೇ ಆದ ಮಹತ್ವದ ಜವಾಬ್ದಾರಿಯನ್ನು ಹೊಂದಿದ್ದು, ಸಾಮಾಜದ ಸ್ವಾಸ್ತ್ಯ ಕಾಪಾಡುತ್ತಿದ್ದಾರೆ. ಹೀಗಾಗಿ ಸಂಘದ ಅಧ್ಯಕ್ಷರು ಸದಸ್ಯರ ಹಿತಾಸಕ್ತಿ ಕಾಪಾಡಿಕೊಂಡು ಹೋಗಬೇಕು. ಮುಂದಿನ ದಿನಗಳಲ್ಲಿ ಸಂಘದ ಸದಸ್ಯರಿಗೆ ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳನ್ನು ಕೊಡಿಸುವ ಪ್ರಾಮಾಣಿಕ ಜವಾಬ್ದಾರಿ ಇದೆ ಎಂದರು.
ಈ ವೇಳೆ ಕರ್ನಾಟಕ ಮಾಧ್ಯಮ ಒಕ್ಕೂಟದ ತಾಲೂಕಾ ಘಟಕದ ನೂತನ ಅಧ್ಯಕ್ಷ ಪರಶುರಾಮ ಕೊಣ್ಣೂರ ಅವರು ಮಾತನಾಡಿ ಕಳೇದ ಹಲವು ವರ್ಷಗಳಿಂದ ಕಾನಿಪ ಸಂಘದ ಸದಸ್ಯನಾಗಿದ್ದೇ ಕೆಲವು ನ್ಯೂನ್ಯತೆಗಳನ್ನು ಗಮನಿಸಿ ಸ್ವಯಂ ಪ್ರೇರಿತವಾಗಿ ಕಾನಿಪ ಸಂಘಕ್ಕೆ ರಾಜಿನಾಮೆ ಸಲ್ಲಿಸಿದ್ದೇನೆ ಸಧ್ಯ ನನಗೆ ಒಕ್ಕೂಟಕ್ಕೆ ಬರಮಾಡಿಕೊಂಡು ಬಹುದೊಡ್ಡ ಜವಾಬ್ದಾರಿ ವಹಿಸಿದ್ದಿರಿ ಈ ನಿಟ್ಟಿನಲ್ಲಿ ಸಂಘದ ಸದಸ್ಯರ ಆಶಯಗಳನ್ನು ಈಡೇರಿಸುವಲ್ಲಿ ಎಲ್ಲರ ವಿಶ್ವಾಸದೊಂದಿಗೆ ಕೆಲಸ ನಿರ್ವಹಿಸುತ್ತೇನೆ. ಮುಂದಿನ ದಿನಗಳಲ್ಲಿ ಪ್ರತಿ ತಿಂಗಳು ಒಂದೊಂದು ಚಟುವಟಿಕೆಗಳನ್ನು ಮಾಡುವುದರ ಮೂಲಕ ಸಂಘವನ್ನು ಸದೃಢವನ್ನಾಗಿ ಮಾಡುವ ಸಂಕಲ್ಪವನ್ನು ಹೊಂದಿದ್ದೇನೆ. ಪತ್ರಕರ್ತರ ಸಂಘಗಳು ಅನ್ಯಾಯಕ್ಕೊಳಗಾದ, ಧೌರ್ಜನ್ಯಕ್ಕೊಳಗಾದ ಪತ್ರಕರ್ತರ ಪರ ಧ್ವನಿ ಎತ್ತುವ ಮೂಲಕ ಪತ್ರಕರ್ತರ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ವಿನಃ ರಾಜಕಾರಿಣಿಗಳ ಕೈಗೊಂಬೆಯಾಗಿ ಇನ್ನೋಬ್ಬ ಪತ್ರಕರ್ತನ್ನು ತುಳಿಯುವಂತ ಕೆಟ್ಟ ಪ್ರವೃತ್ತಿಹೊಂದಿರಬಾರದು. ಇದು ಒಬ್ಬ ಪತ್ರಕರ್ತನಿಗೆ ಮಾಡುವ ಅಪಮಾನವಲ್ಲ ಇಡಿ ಪತ್ರಿಕೋದ್ಯಮಕ್ಕೆ ಅಪಮಾನ ಮಾಡಿದಂತಾಗುತ್ತದೆ ಮಾತ್ರವಲ್ಲದೇ ಪತ್ರಕರ್ತರ ಒಗ್ಗಟ್ಟು ಮುರಿದಂತಾಗುತ್ತದೆ.
ಪತ್ರಕರ್ತರು ಯಾವುದೇ ಸಂದರ್ಭದಲ್ಲಿ ವೃತ್ತಿಯ ಮೌಲ್ಯಗಳಿಗೆ ಕಳಂಕ ಬಾರದಂತೆ ನಡೆದುಕೊಳ್ಳಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮ ನಾಲ್ಕನೇಯ ಅಂಗವಾಗಿದೆ. ಪತ್ರಕರ್ತರ ಛಲವೇ ಪ್ರಜಾಪ್ರಭುತ್ವಕ್ಕೆ ಬಲ. ಆದರೆ, ಈ ಛಲ ಪ್ರಜಾಪ್ರಭುತ್ವಕ್ಕೆ ಮಾರಕವಾಗಬಾರದು. ಈ ನಿಟ್ಟಿನಲ್ಲಿ ಸಮಾಜದ ಹಿತವನ್ನು ಗಮನದಲ್ಲಿರಿಸಿಕೊಂಡು ಕೆಲವೊಮ್ಮೆ ಪತ್ರಕರ್ತರ ನಿರ್ಧಾರ, ಬರವಣಿಗೆ ಅಗತ್ಯ, ಪ್ರಜಾಪ್ರಭುತ್ವ ರಕ್ಷಣೆಗೆ ಎಲ್ಲ ರಂಗಗಳಂತೆ ನಮ್ಮ ಪತ್ರಕರ್ತರು ತಮ್ಮ ಬರವಣಿಗೆ ಮೂಲಕ ಶ್ರಮಿಸಬೇಕೆಂದರು ಎಂದರು.
ಪತ್ರಕರ್ತ ಶಿವುಕುಮಾರ ಶಾರದಳ್ಳಿ ಅವರು ಮಾತನಾಡಿ ಈ ಮೊದಲು ನಾನೂ ಕೂಡ ಕಾನಿಪ ಸಂಘದ ಸದಸ್ಯನಾಗಿದ್ದೇ ಆದರೇ ಕಳೆದ ವರ್ಷದಿಂದ ನಾನು ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಲಿಲ್ಲ. ಹಾಗಾಗಿ ಯಾವೂದೇ ಸಂಘದ ಸದಸ್ಯತ್ವ ಪಡೆದುಕೊಳ್ಳದೇ ಏಕಾಂಗಿಯಾಗಿದ್ದೇ ಸಧ್ಯ ನನ್ನ ಒಕ್ಕೂಟಕ್ಕೆ ಬರಮಾಡಿಕೊಳ್ಳುವ ಮೂಲಕ ಗೌರವಿಸಿದ್ದಿರಿ ಕಾರಣ ಸಂಘದ ಎಲ್ಲ ಚಟುವಟಿಕೆಗಳಲ್ಲಿ ನನ್ನನ್ನು ತೊಡಗಿಸಿಕೊಂಡು ಒಕ್ಕೂಟದ ಬೆಳವಣಿಗೆ ಮತ್ತು ಒಕ್ಕೂಟದ ಪತ್ರಕರ್ತರ ಪರವಾಗಿ ಕೈಜೋಡಿಸಿ ನಿಲ್ಲುತ್ತೇನೆ ಎಂದರು.
ಈ ಸಂದರ್ಭದಲ್ಲಿ ಸಂಘದ ಸದಸ್ಯ ಹಾಗೂ ಪತ್ರಕರ್ತರಾದ ಯೂನೂಸ್ ಮೂಲಿಮನಿ, ಜಿಲಾನಿ ಮಕಾಂದರ, ಸಚಿನ್ ಚಲವಾದಿ, ರವಿ ಕುಂಬಾರ, ಬಸವರಾಜಯಂಕಂಚಿ, ಮೂಕಿಹಾಳ, ಶ್ರೀಶೈಲ್ ಪೂಜಾರಿ ಇದ್ದರು.