ಹಿರಿಯ ನಟ ಸತ್ಯಜಿತ್ ದೇಹಸ್ಥಿತಿ ಚಿಂತಾಜನಕ
ಬೆಂಗಳೂರು, ಅ. 09: ಅನಾರೋಗ್ಯದಿಂದ ಬಳಲುತ್ತಿರುವ ಸ್ಯಾಂಡಲ್ ವುಡ್ ಹಿರಿಯ ನಟ ಸತ್ಯಜಿತ್ ದೇಹಸ್ಥಿತಿ ಗಂಭೀರವಾಗಿದೆ. ಪಾರ್ಶ್ವವಾಯು ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ಆಸ್ಪತ್ರೆಗೆ ದಾಖಲಾಗಿರುವ 72 ವರ್ಷ ವಯಸ್ಸಿನ ಅವರ ಆರೋಗ್ಯ ಗಂಭೀರವಾಗಿದೆ ಎನ್ನಲಾಗಿದೆ.
ಆರ್ಥಿಕ ವಿಚಾರಕ್ಕೆ ಸಂಬಂಧಿಸಿ ಮಗಳ ಜತೆಗಿನ ಜಗಳದ ಬಳಿಕ ಮಾನಸಿಕವಾಗಿಯೂ ಜರ್ಝರಿತವಾಗಿರುವ ಅವರು, ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಬೌರಿಂಗ್ ಆಸ್ಪತ್ರೆಯ ವೈದ್ಯರು ತಿಳಿಸಿರುವುದಾಗಿ ಅವರ ಪುತ್ರ ಆಕಾಶ್ ಮಾಹಿತಿ ನೀಡಿದ್ದಾರೆ. ಪೋಷಕ ನಟರಾಗಿ 650ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ತಂದೆ ಸತ್ಯಜಿತ್ ಅವರಿಗೆ ಸ್ಟ್ರೋಕ್ ಆಗಿರುವ ಕಾರಣ ತುರ್ತು ಚಿಕಿತ್ಸಾ ಘಟಕದಲ್ಲಿ ಅಡ್ಮಿಟ್ ಮಾಡಲಾಗಿದೆ. ಹಾರ್ಟ್ ಸ್ಟ್ರೋಕ್ ಆಗಿದೆ. ಹಾರ್ಟ್ ರೇಟ್ ತುಂಬಾ ಕಡಿಮೆ ಆಗಿದೆ. ಬಿಪಿ ಫುಲ್ ಲೋ ಆಗಿದೆ. ಮಧುಮೇಹ ತೊಂದರೆಯೊಂದಿಗೆ ಮಾನಸಿಕವಾಗಿ ತುಂಬಾ ನೊಂದಿದ್ದಾರೆ. 3 ವರ್ಷಗಳ ಹಿಂದೆ ಗ್ಯಾಂಗ್ರಿನ್ ನಿಂದಾಗಿ ಒಂದು ಕಾಲು ಕತ್ತರಿಸಲಾಗಿತ್ತು’ ಎಂದಿದ್ದಾರೆ.
ಮಗಳ ವಿಷಯದಲ್ಲಿ ತುಂಬಾ ನೋವು ಪಟ್ಟಿದ್ದರು. ಇಂತಹ ಟೈಂನಲ್ಲೂ ಮಗಳು ಬಂದಿಲ್ಲ. ಸದ್ಯ ಅಪ್ಪ ಏನೂ ಮಾತಾಡ್ತಿಲ್ಲ. ಡಯಾಲಿಸಿಸ್ ಮಾಡಲೂ ಆಗುತ್ತಿಲ್ಲ. ಯಾವುದೇ ಚಿಕಿತ್ಸೆ ಪ್ರಯೋಜನ ಆಗ್ತಿಲ್ಲ ಅಂತ ಡಾಕ್ಟರ್ ಸಹ ಹೇಳಿದ್ದಾರೆ. ಆರೋಗ್ಯ ಕ್ಷಣ ಕ್ಷಣಕ್ಕೂ ಚಿಂತಾಜನಕವಾಗುತ್ತಿದೆ’ ಎಂದು ತಿಳಿಸಿದ್ದಾರೆ.