ಹಿರಿಯ ನಾಗರಿಕರ ದಿನಾಚರಣೆ
ಮುಂಡಗೋಡ:ತಾಲೂಕು ಕಾನೂನು ಸೇವಾ ಸಮಿತಿ ಮತ್ತು ಇಲ್ಲಿನ ವಕೀಲರ ಸಂಘದ ವತಿಯಿಂದ ಪಟ್ಟಣದ ಜೆಎಮ್ಎಫ್ಸಿ ನ್ಯಾಯಾಲಯ ಆವರಣದಲ್ಲಿ ಶನಿವಾರ ಹಿರಿಯ ನಾಗರಿಕರ ದಿನಾಚರಣೆ ಆಚರಿಸಲಾಯಿತು.
ನ್ಯಾಯಾಧೀಶ ಕೇಶವ ಕೆ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಎಮ್.ಎ.ನಂದಿಕಟ್ಟಿ ಮಾತನಾಡಿದರು. ಯಲ್ಲಾಪುರ ನ್ಯಾಯಾಲಯದ ಹಿರಿಯ ವಕೀಲ ವಿ.ಪಿ.ಭಟ್ ತಮ್ಮ ವೃತ್ತಿ ಜೀವನ ಬಗ್ಗೆ ಮಾತನಾಡಿ ಕಿರಿಯರಿಗೆ ಮಾರ್ಗದರ್ಶನ ನೀಡಿದರು. ವಕೀಲ ಆರ್.ಎಮ್.ಮಳಗಿಕರ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಯಲ್ಲಾಪುರ ನ್ಯಾಯಾಲಯದ ಹಿರಿಯ ವಕೀಲ ವಿ.ಪಿ.ಭಟ್, ಪಟ್ಟಣದ ನ್ಯಾಯಾಲಯದ ಹಿರಿಯ ವಕೀಲರಾದ ಸಿ.ಎಸ್.ಗಾಣಿಗೇರ, ಕೆ.ಎನ್.ಹೆಗಡೆ, ಎಸ್.ಪಿ.ಸಮ್ಮಸಗಿ, ಆರ್.ಎನ್.ಹೆಗಡೆ, ಬಿ.ಎಫ್.ಪೂಜಾರ ಇವರನ್ನು ಸನ್ಮಾನಿಸಲಾಯಿತು. ವಕೀಲ ರಾಜಶೇಖರ ಹುಬ್ಬಳ್ಳಿ ಕಾರ್ಯಕ್ರಮ ನಿರೂಪಿಸಿದರು. ವಕೀಲ ನಾಗರಾಜ ಬಾರ್ಕಿ ವಂದಿಸಿದರು.