ಬಳ್ಳಾರಿ

ಸ್ಟೇಟ್ ಬ್ಯಾಂಕ್ ದಿನಾಚರಣೆ ನಿಮಿತ್ತ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಸ್ಟೇಟ್ ಬ್ಯಾಂಕ್ ದಿನಾಚರಣೆ ನಿಮಿತ್ತ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಬಳ್ಳಾರಿ 01: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪ್ರಾದೇಶಿಕ ಕಛೇರಿ, ಬಳ್ಳಾರಿ. ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬಳ್ಳಾರಿ ಶಾಖೆ, ಸ್ಪಂದನಾ ಚಾರಿಟೇಬಲ್ ಟ್ರಸ್ಟ್‌, ಬಳ್ಳಾರಿ ಮತ್ತು ವಿಮ್ಸ್‌, ಬಳ್ಳಾರಿ ಇವರ ಸಂಯುಕ್ತಾಶ್ರಯದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪ್ರಾದೇಶಿಕ ಕಛೇರಿ ಆವರಣದಲ್ಲಿ “ಸ್ಟೇಟ್ ಬ್ಯಾಂಕ್ ದಿನಾಚರಣೆ” ನಿಮಿತ್ತ ದಿ. 01ರಂದು ಸ್ವಯಂ ಪ್ರೇರಿತ ರಕ್ತದಾನ” ಶಿಬಿರವನ್ನು ಆಯೋಜಿಸಲಾಯಿತು. 

ಈ ಕಾರ್ಯಕ್ರಮದಲ್ಲಿ ಪ್ರದೀಪ್ ನಾಯರ್, ಡಿ.ಜಿ.ಎಂ, ಎಸ್‌.ಬಿ.ಐ, ಬಳ್ಳಾರಿ ಇವರು ಉದ್ಘಾಟನೆಯನ್ನು ಮಾಡಿದ್ದರು. ಇದೇ ಸಂದರ್ಭದಲ್ಲಿ ಅತಿಥಿಗಳಾಗಿ ಆಗಮಿಸಿದ ಲಕ್ಷ್ಮಣ ಸಿಂಹ, ಪ್ರದೇಶಿಕ ವ್ಯವಸ್ಥಾಪಕರು ಎಸ್‌.ಬಿ.ಐ, ಡಾ. ಎಸ್‌.ಜೆ.ವಿ.ಮಹಿಪಾಲ್, ಉಪ ಸಭಾಪತಿಗಳು, ರೆಡ್ ಕ್ರಾಸ್ ಸಂಸ್ಥೆ, ಬಳ್ಳಾರಿ. ಲಕ್ಷ್ಮೀನಾರಾಯಣ ಮಹೋಪಾತ್ರ, ಮುಖ್ಯ ವ್ಯವಸ್ಥಾಪಕರು, ಎಸ್‌.ಬಿ.ಐ. ಡಾ. ಭರತ್ ಸದಸ್ಯರು ರೆಡ್ ಕ್ರಾಸ್ ಸಂಸ್ಥೆ, ಎಂ.ಎ.ಷಕೀಬ್, ಕಾರ್ಯದರ್ಶಿ, ಭಾರತೀಯ ರೆಡ್ ಕರಾಸ್ ಸಂಸ್ಥೆ, ಬಳ್ಳಾರಿ. ಮತ್ತು ದೇವಣ್ಣ, ಅತೀ ಹೆಚ್ಚುಬಾರಿ ರಕ್ತದಾನ ಮಾಡಿರುವ ಇವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಮೀಮ್ ಜಕಾಳಿ, ಮಹಬೂಬ್ ಬಾಷಾ, ಪಿ.ವಾಸು, ಮಂಜುನಾಥ ಮತ್ತು ಎಂ.ವಲಿ ಬಾಷಾ ಇವರು ಉಪಸ್ಥಿತರಿದ್ದರು.  

ಈ ಸಂದರ್ಭದಲ್ಲಿ ಸುಮಾರು 40ಕಿಂತ ಹೆಚ್ಚು ಬ್ಯಾಂಕ್ ಸಿಬ್ಬಂದಿ ಮತ್ತು ಸ್ವಯಂ ಸೇವಕರು ರಕ್ತದಾನವನ್ನು ಮಾಡಿದ್ದರು. 


ಸುದ್ದಿ ಓದಿ