ಸ್ವಯಂ ಪ್ರೇರಿತ ರಕ್ತದಾನ ಮಹಾದಾನ : ಡಾ. ನಾಗರಾಜ್ ರಾವ್
ಬಳ್ಳಾರಿ ಫೆ. 19 : ಸ್ವಯಂ ಪ್ರೇರಿತ ರಕ್ತದಾನ ಮಹಾದಾನ ಮತ್ತು ರಕ್ತ ಯಾವುದೇ ಕಾರ್ಖಾನೆಗಳಲ್ಲಿ ಉತ್ಪಾದಿಸಲು ಸಾಧ್ಯವಿಲ್ಲ ಅದು ಕೇವಲ ಮನುಷ್ಯರಿಂದ ಮಾತ್ರ ಪಡೆಯಲು ಸಾಧ್ಯ ಎಂದು ನಿವೃತ್ತ ರೇಡಿಯೋಲಾಜಿಸ್ಟ್ ಡಾ. ನಾಗರಾಜ್ ರಾವ್ ಹೇಳೀದರು.
ದಿವಂಗತ ಮಾಜಿ ಕೇಂದ್ರ ಸಚಿವರು, ಸಂಸ್ಥಾಪಕಾ ಅಧ್ಯಕ್ಷರಾದ ಬಸವರಾಜೇಶ್ವರಿ ಸಂಸ್ಮರಣೆಯ ಅಂಗವಾಗಿ ಇನ್ಸ್‍ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಬಳ್ಳಾರಿ ವಿಮ್ಸ್ ಬಳ್ಳಾರಿ, ರಾಷ್ಟ್ರೀಯ ಸೇವಾ ಯೋಜನೆ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರರಂದು ಇಲ್ಲಿನ ಬಿ.ಐ.ಟಿ.ಯಂ. ಕಾಲೇಜಿನ ಎಂ.ಬಿ.ಎ. ಸೆಮಿನಾರ್ ಸಭಾಂಗಣದಲ್ಲಿ ಆಯೋಜಿಸಿದ “ಉಚಿತ ಸ್ವಯಂ ಪ್ರೇರಿತ ರಕ್ತದಾನ ಶಿಬಿg” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೋಬ್ಬರು ಸ್ವಯಂ ಪ್ರೇರಿತವಾಗಿ ರಕ್ತದಾನವನ್ನು ಮಾಡಿ ಮತ್ತು ಮಾಡಿಸಲು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟಿಇಹೆಚ್‍ಆರ್‍ಡಿ ಟ್ರಸ್ಟ್ ಅಧ್ಯಕ್ಷರಾದ ಡಾ. ಮಹಿಪಾಲ್, ಮುಖ್ಯ ಅತಿಥಿಗಳಾಗಿ ಆರೋಗ್ಯ ಅಧಿಕಾರಿ ಡಾ. ಮೋಹನ್ ಕುಮಾರಿ, ಬಿಐಟಿಯಂ ಉಪನಿರ್ದೇಶಕರಾದ ವೈಜೆ ಪೃತ್ವಿರಾಜ್ ಭೂಪಾಲ್, ಟ್ರಸ್ಟಿ ಡಾ. ವಿ.ಜಿ. ಭರತ್, ಟ್ರಸ್ಟಿ ಡಾ. ಇಂದ್ರಾಣಿ ಡ್ಯಾಪ್ಕೋ, ಮೆಡಿಕಲ್ ಆಫಿಸರ್ ಡಾ. ನರಸಿಂಹ ಮೂರ್ತಿ, ಮೆಡಿಕಲ್ ಆಫಿಸರ್ ಶುಭಾ ಬಿರಾದಾರ, ರಕ್ತದಾನ ಉಪ ಸಮಿತಿ ಕೋ-ಚೇರ್‍ಮೆನ್ ಬಿ.ದೇವಣ್ಣ ಮೊದಲಾದವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕಾಲೇಜಿನ ಶಿಕ್ಷಕರುಂದದವರು ಮತ್ತು ಆಡಳಿತಾಧಿಕಾರಿಗಳು ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು, ನೂರಾರು ವಿಧ್ಯಾರ್ಥಿಗಳು, ಶ್ರೀ.ಮಂಜುನಾಥ್, ರೆಡ್‍ಕ್ರಾಸ್ ಸಂಸ್ಥೆಯ ಸಿಬ್ಬಂದಿ ಭಾಗವಹಿಸಿದ್ದರು.