ಜಿಲ್ಲಾ ಮಟ್ಟಕ್ಕೆ ವಿದ್ಯಾರ್ಥಿ ಸೃಷ್ಠಿ ಆಯ್ಕೆ
ತಾಳಿಕೋಟೆ20: ತಾಲೂಕ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ತಾಲೂಕಿನ ಬಿಳೆಭಾವಿ ಕ್ರಾಸ್ದಲ್ಲಿರುವ ಶ್ರೀ ಭಾಗ್ಯವಂತಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಸೃಷ್ಠಿ ಕಡಕಲ್ಲ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಪಟ್ಟಣದ ವಿಕಾಸ ಪಬ್ಲಿಕ್ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಸೃಷ್ಠಿ ಹಾಕಿದ ಛೇದ್ಮವೇಷ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿದ್ದಾಳೆ. ಸೃಷ್ಠಿ ಸಾಧನೆಗೆ ಶಾಲೆಯ ಅಧ್ಯಕ್ಷ ಸಿದ್ದನಗೌಡ ಪರಸನಹಳ್ಳಿ, ಮುಖ್ಯ ಗುರುಗಳಾದ ವಿಷ್ಣು ನಾಯ್ಕ ಕಾರವಾರ, ಸಹ ಶಿಕ್ಷಕರಾದ ಗುರುರಾಜ ಬಡಿಗೇರ, ಸಿದ್ದರಾಮಯ್ಯ ಮಠ, ಸಂಗಯ್ಯ ಮಠ, ಪ್ರಕಾಶ ಪೀರಾಪುರ, ವಿಶ್ವನಾಥ ಗಬಸಾವಳಗಿ, ರಾಜು ಬಾಚಿಮಟ್ಟಿ, ಅಕ್ಷತಾ ಹಜೇರಿ, ಸುಧಾ ನಾರಿ, ಹಾಗೂ ಶಿವರಾಜಗೌಡ ಮಾಳಿ, ಭಾಗಣ್ಣ ಮಿಣಜಗಿ ಮತ್ತು ಪಾಲಕ ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.