ಕೃಷಿಕ ಸಮಾಜದ ಪದಾಧಿಕಾರಿಗಳ ಆಯ್ಕೆ
ಲೋಕದರ್ಶನ ವರದಿ
ಹಾವೇರಿ 17: ಹಾವೇರಿ ತಾಲೂಕು ಸಹಾಯಕ ಕೃಷಿ ನಿರ್ದೇಶಕರು ಹಾಗೂ ಪದನಿಮಿತ್ತ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸೆ.16 ರಂದು ಜರುಗಿದ ಹಾವೇರಿ ತಾಲೂಕಿನ ತಾಲೂಕಾ ಕೃಷಿಕ ಸಮಾಜದ ಸಭೆಯಲ್ಲಿ ಅವಿರೋಧವಾಗಿ ನೂತನ ಅಧ್ಯಕ್ಷರಾಗಿ ರುದ್ರ್ಪ ಶಿದ್ದಲಿಂಗಪ್ಪ ಕಾಳಪ್ಪನವರ ಮತ್ತು ಉಪಾಧ್ಯಕ್ಷರಾಗಿ ನಾಗಪ್ಪ ವೀರ್ಪ ವಿಭೂತಿ ಆಯ್ಕೆಯಾಗಿದ್ದಾರೆ. ಜಿಲ್ಲಾ ಪ್ರತಿನಿಧಿಯಾಗಿ ಶಿವಪುತ್ರ್ಪ ಎನ್ ಶಿವಣ್ಣನವರ, ಪ್ರಧಾನ ಕಾರ್ಯದರ್ಶಿಯಾಗಿ ಮಹೇಶ ಬಸವಂತಪ್ಪ ಹೆಡಿಯಾಲ, ಮತ್ತು ಖಜಾಂಚಿಯಾಗಿ ರೇವಣಸಿದ್ದಪ್ಪ ಭರಮಪ್ಪ ಸೊಪ್ಪಿನ ಇವರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ನಾಗೆಂದ್ರ್ಪ ಪರಮಣ್ಣ ಕೆಂಡೊಂಡ, ಗಣೇಶ ಹನುಮಂತಪ್ಪ ದೊಡ್ಡಮನಿ, ಹನುಮಣ್ಣ ಸಹದೇವಪ್ಪ ಕನ್ನನಾಯಕನವರ, ಅಶೋಕರೆಡ್ಡಿ ಹೆಚ್ ಮರಚರೆಡ್ಡಿ , ಬುದ್ದಿವಂತಪ್ಪ ಚನ್ನಬಸಪ್ಪ ಕಾಸಂಬಿ, ಬಸವರಾಜ ಡೊಂಕಣ್ಣನವರ, ಬಸನಗೌಡ ಯಲ್ಲನಗೌಡ ಹರ್ತಿ, ಪರಮೇಶ್ವರ ರಾಮಣ್ಣ ನರಗುಂದ, ಕರಬಸಪ್ಪ ಚನ್ನಬಸಪ್ಪ ಕಡ್ಲಿ, ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ಸುನೀಲ್ ನಾಯ್ಕ್.ಹೆಚ್, ಧನಂಜಯ ನಾಗಣ್ಣನವರ, ತಾಂತ್ರಿಕ ವ್ಯವಸ್ಥಾಪಕರಾದ ವನರಾಜ ಬಣಕಾರ ಇತರರು ಉಪಸ್ಥಿತರಿದ್ದರು.