ವಿಕಲಚೇತನರು ಸ್ವಾಭಿಮಾನದಿಂದ ಬದುಕಲು ಸೌಲಭ್ಯ ಬಳಸಿಕೊಳ್ಳಿ: ಶಿವರಾಮ ದೇಶಪಾಂಡೆ
Avail facilities to live with self-respect: Shivaram Deshpande tells persons with disabilities
ಲೋಕದರ್ಶನ ವರದಿ
ಹಾವೇರಿ 25: ವಿಕಲಚೇತನರು ಸ್ವಾಭಿಮಾನದಿಂದ ಬದುಕಿನಲ್ಲಿ ಮುನ್ನಡೆಯಬೇಕು.ಸರ್ಕಾರಗಳಿಗೆ ತೆರಿಗೆ ಕಟ್ಟುವಷ್ಟು ಆರ್ಥಿಕವಾಗಿ ಬಲಿಷ್ಠರಾಗಬೇಕು ಎಂದು ಸಮರ್ಥನಂ ಸಂಸ್ಥೆಯ ಹೆಡ್ ಆಪರೇಷನ್ಸ್‌ಗಳಾದ ಶಿವರಾಮ ಎಸ್ ದೇಶಪಾಂಡೆ ಅವರು ಹೇಳಿದರು.
ಇಲ್ಲಿನ ಕಾಗಿನೆಲೆ ರೋಡಿ ಜಿಲ್ಲಾಸ್ಪತ್ರೆ ಹಿಂಭಾಗದಲ್ಲಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆ-ಡಿಡಿಆರ್‌ಸಿ ಕಚೇರಿಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಹಾವೇರಿ,ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ,ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲಿಕರಣ ಇಲಾಖೆ ಹಾವೇರಿ ಹಾಗೂ ಸಮರ್ಥನಂ ವಿಕಲಚೇತನರ ಸಂಸ್ಥೆ,ಬೆಂಗಳೂರು ಇವರುಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಕಲಚೇತನರಿಗೆ ಸಾಧನ-ಸಲಕರಣೆಗಳನ್ನು ವಿತರಿಸಿ ಅವರು ಮಾತನಾಡಿದರು.
ಸಮರ್ಥನಂ ಸಂಸ್ಥೆ ರಾಜ್ಯದಲ್ಲಿ ಸಾವಿರಾರು ವಿಕಲಚೇತನರಿಗೆ ಸಾಧನ-ಸಲಕರಣೆಗಳನ್ನು ಉಚಿತವಾಗಿ ವಿತರಣೆ ಮಾಡಿದೆ.ಈ ಕೆಲಸವನ್ನು ಇನ್ನೂ ಮುಂದುವರಿಸಿದೆ. ಇಲ್ಲಿನ ಭಾರತೀಯ ರೆಡ್ ಕ್ರಾಸ್ ಸಂಸ್ಥೆ-ಡಿಡಿಆರ್‌ಸಿ ಉತ್ತಮವಾಗಿ ಸೇವೆ ಮಾಡುತ್ತಿದ್ದು,ಜಿಲ್ಲೆಯ ವಿಕಲಚೇತನರಿಗೆ ಇನ್ನೂ ಏನಾದರೂ ಸೌಲಭ್ಯ ಬೇಕಿದ್ದರೆ ಸಮರ್ಥನಂ ವಿಕಲಚೇತನರ ಸಂಸ್ಥೆಯು ಸಹಕಾರ ನೀಡಲಾಗುವುದು ಎಂದು ಸಮರ್ಥನಂ ವಿಕಲಚೇತನರ ಸಂಸ್ಥೆಯ ಸೇವೆ ಹಾಗೂ ಕಾರ್ಯಗಳನ್ನು ವಿವರಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಗೌರವ ಕಾರ್ಯಾಧ್ಯಕ್ಷರಾದ ಸಂಜೀವಕುಮಾರ ನೀರಲಗಿ ಅವರು ಮಾತನಾಡಿ ವಿಕಲಚೇತನರು ಸರ್ಕಾರಗಳ ಸೌಲಭ್ಯಗಳನ್ನು ಪಡೆದು ಮುಖ್ಯವಾಹಿನಿಗೆ ಬರುವಂತಾಗಲಿ.ಸಮರ್ಥನಂ ಸಂಸ್ಥೆಯವರು ಜಿಲ್ಲೆ ವಿಕಲಚೇತನರಿಗೆ ಹಲವಾರು ಸಾಧನ-ಸಲಕರಣೆಗಳನ್ನು ನೀಡಿದ್ದು,ಅವರಿಗೆ ನಮ್ಮೆಲ್ಲರ ವತಿಯಿಂದ ಧನ್ಯವಾದಗಳು.ಇದರ ಸದುಪಯೋಗ ಪಡಿಸಿಕೊಂಡು ಬದುಕಿನಲ್ಲಿ ಮುಂದೆ ಬನ್ನಿರಿ ಎಂದು ವಿಕಲಚೇತನರಿಗೆ ಸಲಹೆ ನೀಡಿದರು.
ಗಣೇಶ ವಿಸರ್ಜನೆ ವೇಳೆ ದುರಂತ : ಬೆಳಗಾವಿಯ ಯುವಕ ನೀರಲ್ಲಿ ಮುಳುಗಿ ಸಾವು
ಚನ್ನಮ್ಮ ಪ್ರತಿಮೆ ಪ್ರತಿಷ್ಠಾಪನೆಗೆ ನವೆಂಬರ 1ರ ಗಡುವು ನೀಡಿದ ಕನ್ನಡ ಸಂಘಟನೆಗಳು
ಎನ್ಒಸಿ ನೀಡಲು ಲಂಚ : ಖಾನಾಪುರ ತಾಲೂಕು ಆರೋಗ್ಯಾಧಿಕಾರಿ ಲೋಕಾಯುಕ್ತ ಬಲೆಗೆ
ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ 