ಹಾವೇರಿ

ವಿವಿಧ ಕ್ರೀಡೆಗಳಿಗೆ ಜಿ.ಎಚ್‌. ಕಾಲೇಜು ವಿದ್ಯಾರ್ಥಿಗಳ ಆಯ್ಕೆ

ವಿವಿಧ ಕ್ರೀಡೆಗಳಿಗೆ ಜಿ.ಎಚ್‌. ಕಾಲೇಜು ವಿದ್ಯಾರ್ಥಿಗಳ ಆಯ್ಕೆ

ಲೋಕದರ್ಶನ ವರದಿ 

  ಹಾವೇರಿ 01: ನಗರದ ಕೆಎಲ್‌ಇ ಸಂಸ್ಥೆಯ ಗುಡ್ಲೆಪ್ಪ ಹಳ್ಳಿಕೇರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು 2026-27ನೇ ಸಾಲಿನ ಹಾವೇರಿ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ಕಾಲೇಜಿನ ಒಟ್ಟು 47 ಕ್ರೀಡಾಪಟುಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು, ಬಾಲಕರ ವಿಭಾಗದಲ್ಲಿ ಹ್ಯಾಂಡ್ಬಾಲ್, ಬಾಸ್ಕೆಟ್ಬಾಲ್, ಟೇಬಲ್ ಟೆನ್ನಿಸ್ ಹಾಗೂ ಗುಡ್ಡಗಾಡು ಓಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.  

ಬಾಲಕಿಯರ ವಿಭಾಗದಲ್ಲಿ ಹ್ಯಾಂಡ್ಬಾಲ್, ಬಾಸ್ಕೆಟ್ಬಾಲ್, ಯೋಗ, ಕರಾಟೆ, ಟೈಕ್ವಾಂಡೋ ಹಾಗೂ ಟೇಬಲ್ ಟೆನ್ನಿಸ್ ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.  

ಸಾಧನೆಗೈದ ವಿದ್ಯಾರ್ಥಿಗಳು ಹಾಗೂ ದೈಹಿಕ ನಿರ್ದೇಶಕ ಪ್ರೊ. ಪ್ರವೀಣ್ ಚೂರಿ ಮತ್ತು ಮಾರ್ಗದರ್ಶಕ ಪ್ರೊ. ಶಿವಮೂರ್ತಯ್ಯ ಸಿ.ಜಿ. ಅವರನ್ನು ಬೆಳಗಾವಿ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಅಮಿತ್ ಪಿ. ಕೋರೆ, ನಿರ್ದೇಶಕ ಎಂ.ಸಿ. ಕೊಳ್ಳಿ ಹಾಗೂ ಸ್ಥಳೀಯ ಆಡಳಿತ ಮಂಡಳಿಯ ಪದಾಧಿಕಾರಿಗಳು ಅಭಿನಂದಿಸಿದರು. 

 ಕಾರ್ಯಕ್ರಮದಲ್ಲಿ ವಿವಿಧ ಪದಾಧಿಕಾರಿಗಳು, ಪ್ರಾಚಾರ್ಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಡಾ. ಜೆ.ಆರ್‌. ಶಿಂದೆ ಸ್ವಾಗತಿಸಿದರು. ಪ್ರೊ. ಸಿದ್ದೇಶ್ವರ ಹುಣಸಿಕಟ್ಟಿಮಠ ಕಾರ್ಯಕ್ರಮ ನಿರ್ವಹಿಸಿದರು. 


ಸುದ್ದಿ ಓದಿ