ಭಾಲೆಪ ಸಂಸ್ಥೆಯ ನೂತನ ಪದಾಧಿಕಾರಿಗಳ ಆಯ್ಕೆ
ಬಳ್ಳಾರಿ ಫೆ.22 : ಸ್ಥಳೀಯ ರಾಘವೇಂದ್ರ ಕಾಲೋನಿಯಲ್ಲಿರುವ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ, ಬಳ್ಳಾರಿ ಶಾಖೆಯ 2021-22ರ ನೂತನ ಪದಾಧಿಕಾರಿಗಳನ್ನು ದಿ. 22ರಂದು ಆಯ್ಕೆ ಮಾಡಲಾಯಿತು. ಶಾಖೆಯ ಅಧ್ಯಕ್ಷರಾಗಿ ಸಿಎ ಪ್ರಸನ್ನಕುಮಾರ ಪಾಟೀಲ್ ಹೆಚ್.ಎಸ್., ಉಪಾಧ್ಯಕ್ಷರಾಗಿ ಸಿಎ ವಿನೋದ್ ಕುಮಾರ್, ಕಾರ್ಯದರ್ಶಿಯಾಗಿ ಸಿಎ ಕೆ. ಹೊನ್ನೂರ್‍ಸ್ವಾಮಿ, ಅಂ ವೆಂಕಟ್‍ನಾರಾಯಣ ಸಿ ಖಜಾಂಚಿಯಾಗಿ ಮತ್ತು ವಿಧ್ಯಾರ್ಥಿ ವಿಭಾಗದ (SIಅಂSಂ) ಅಧ್ಯಕ್ಷರಾಗಿ ಕಿರಣ್ ಕುಮಾರ್ ಜೈನ್ ಅವರನ್ನು ಆಯ್ಕೆಮಾಡಲಾಯಿತು. 2020-21 ರ ನಾಲಿನ ಅಧ್ಯಕ್ಷ ಸಿಎ ಕೆ. ಹೊನ್ನೂರ್‍ಸ್ವಾಮಿ ಇವರು ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಿಎ ಪ್ರಸನ್ನಕುಮಾರ ಪಾಟೀಲ್ ಹೆಚ್.ಎಸ್. ಅವರಿಗೆ ಆಧಿಕಾರವನ್ನು ಹಸ್ತಾಂತರಿಸಿದರು.ಸಿಎ ಪನ್ನರಾಜ್ .ಎಸ್, ಸದಸ್ಯರು, ದಕ್ಷಿಣ ಭಾರತ ಪ್ರಾಂತೀಯ ಪರಿಷತ್, ಚೆನ್ನೆ ೈ (ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆ) ಸಂಸ್ಥೆಯ ಮಾಜಿ ಅಧ್ಯಕ್ಷರುಗಳಾದ ಸಿಎ ಎರ್ರಿಸ್ವಾಮಿ ಸಿ, ಸಿಎ ರಾಜೆÉೀಶ್ ಬಾಗ್ರೇಚ ಮತ್ತು ಸಿಎ ನಾಗನಗೌಡ, ಸಿಎ ಅಕ್ಕಿ ಬಸವರಾಜ್ ಹಾಗೂ ಶಾಖೆಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.