ಹಗರಿಬೊಮ್ಮನಹಳ್ಳಿ

ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆ

ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆ

ಹಗರಿಬೊಮ್ಮನಹಳ್ಳಿ 20: ಅಖಿಲ ಕರ್ನಾಟಕ ಹವ್ಯಾಸಿ ರಂಗಭೂಮಿ ಮತ್ತು ಸರ್ವ ಜನಪದ ಕಲಾವಿದರ ಸಂಘ ಇವರ ವತಿಯಿಂದ ಗಾನಯೋಗಿ ಪಂ.ಪುಟ್ಟರಾಜ ಗವಾಯಿಗಳ ಜಯಂತೋತ್ಸವದ ಅಂಗವಾಗಿ ಜರುಗುವ ಕರ್ನಾಟಕ ಜಾನಪದ ಕಲಾ ಉತ್ಸವ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಛಾಯಾಗ್ರಾಹಕ ಲೋಕದ ಫಟೋಗ್ರಾಫರ್ ತಬಲಾ ಸಂಗೀತ ಕಲಾ ಸೇವಾ ರತ್ನ ರಾಜ್ಯ ಮಟ್ಟದ ಪ್ರಶಸ್ತಿಗೆ ಹಗರಿಬೊಮ್ಮನಹಳ್ಳಿ ತಾಲೂಕಿನ ಸಂತೋಷಕುಮಾರ್ ಬಿ.ಡಿ. ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು 21ರ ಭಾನುವಾರ ಗದಗ ಜಿಲ್ಲೆಯ ಎಪಿಎಂಸಿಯ ಸ್ವಾಮಿ ವಿವೇಕಾನಂದ ಸಭಾ ಭವನದಲ್ಲಿ ಜರುಗಲಿದೆ.

ಸುದ್ದಿ ಓದಿ