ಬಳ್ಳಾರಿ

ಗ್ರಾಮ ಪಂಚಾಯತಿ ಗ್ರಂಥಾಲಯ ಮೇಲ್ವಿಚಾರಕರ ಸಂಘಕ್ಕೆ ಆಯ್ಕೆ

ಗ್ರಾಮ ಪಂಚಾಯತಿ ಗ್ರಂಥಾಲಯ ಮೇಲ್ವಿಚಾರಕರ ಸಂಘಕ್ಕೆ ಆಯ್ಕೆ

ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ 26: ಪಟ್ಟಣದ ರಾಮನಗರದ ಶಾಖಾ ಗ್ರಂಥಾಲಯದಲ್ಲಿ ಸೋಮವಾರ ಗ್ರಾಮ ಪಂಚಾಯತಿಗಳ ಗ್ರಂಥಾಲಯಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. 


ಸಂಘಕ್ಕೆ ವಿಜಯನಗರ ಜಿಲ್ಲಾ  ಪ್ರತಿನಿಧಿಯಾಗಿ ಬೆಣ್ಣಿಕಲ್ಲು ಗ್ರಂಥಾಲಯದ ಎನ್‌.ರಂಗಪ್ಪ, ತಾಲೂಕಾ ಮೇಲ್ವಿಚಾರಕರಾ ಸಂಘಕ್ಕೆ  ಗೌರವಾಧ್ಯಕ್ಷರಾಗಿ ಎ.ಗುರುಬಸವರಾಜ್, ಅದ್ಯಕ್ಷರಾಗಿ ಟಿ.ಪಾಂಡುರಂಗಪ್ಪ, ಉಪಾಧ್ಯಕ್ಷೆಯಾಗಿ ಎಂ.ಶಿವಲೀಲಾ, ಕಾರ್ಯದರ್ಶಿ ಕೆ.ನಿಂಗಪ್ಪ, ಖಜಾಂಚಿ ಕೆ.ಸಯ್ಯದ್, ಸಹಕಾರ್ಯದರ್ಶಿ ಕೆ.ಚನ್ನಬಸಪ್ಪ ಆಯ್ಕೆಯಾಗಿದ್ದಾರೆ. 


ಈ ಸಂಧರ್ಭದಲ್ಲಿ ಶಾಖಾ ಗ್ರಂಥಾಲಯ ಅಧಿಕಾರಿ ಮಲ್ಲಿಕಾರ್ಜುನ ಮಾತನಾಡಿ ಈ ಆಧುನಿಕ ಯುಗದಲ್ಲಿ ಜಾರಿಗೆ ತಂದ ಡಿಜಿಟಲ್ ಗ್ರಂಥಾಲಯ ಸಾರ್ವಜನಿಕರಿಗೆ ಕಡಿಮೆ ಸಮಯದಲ್ಲಿ ಅವಶ್ಯಕವಾದ ಮಾಹಿತಿ ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ, ಇಂದಿನ ಯುವ ಪೀಳಿಗೆ ಪುಸ್ತಕಗಳಿಂದ ದೂರುಳಿಯುತ್ತಿರುವುದು ಶೋಚನೀಯವಾಗಿದೆ,ಪುಸ್ತಕಗಳು ಸಾಹಿತ್ಯ ಸೇರಿದಂತೆ ಇತಿಹಾಸದ ಪಾಠ ಕಲಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಹಾಗಾಗಿ ಪ್ರತಿಯೊಬ್ಬರೂ ಗ್ರಂಥಾಲಯಗಳ ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು, ಎಲ್ಲಾ ಮೇಲ್ವಿಚಾರಕರು​‍್ರ ಗ್ರಂಥಾಲಯದ ಒದುಗರನ್ನು ತನ್ನತ್ತ ಸೆಳೆದುಕೊಂಡು ಕಾರ್ಯ ನಿರ್ವಹಿಸಬೇಕೆಂದು ತಿಳಿಸಿದರು. 


ಸಂಘದ ಮೇಲ್ವಿಚಾರಕರ ಅದ್ಯಕ್ಷ ಟಿ.ಪಾಂಡುರಂಗ ಮಾತನಾಡಿ ಸಂಘದ ಸರ್ವರು ಗ್ರಂಥಾಲಯಕ್ಕೆ ಬರುವ ಒದುಗರನ್ನು ಅವಶ್ಯಕತೆಗನುಗುಣವಾಗಿ ಪುಸ್ತಕಗಳ ಒದಗಿಸುವಲ್ಲಿ ಪ್ರಮಾಣಿಕ ಪ್ರಯತ್ನ ಮಾಡುತ್ತವೆ, ಸಂಘದ ಎಳ್ಗೆಗಾಗಿ ಸಮಾನತೆಯಿಂದ ಶ್ರಮಿಸುತ್ತೆವೆಂದು ತಿಳಿಸಿದರು. 

ಈ ಸಂಧರ್ಭಧಲ್ಲಿ ವರದಿಗಾರ ಮಜ್ಗಿ ವೀರೇಶ್, ಕೆ.ಕನಕಪ್ಪ, ಜಿ.ಮಾರುತಿ, ಕಬ್ಬೇರ ಮಂಜುನಾಥ್, ಎಂ.ಎಸ್‌.ಹುಲುಗಪ್ಪ, ಎಂ.ಟಿ.ಜಗದೀಶ್, ಕೆ.ರಾಮಪ್ಪ, ಹೇಮಣ್ಣ, ಎಂ.ಕೊಟ್ರೇಶ್ ಸೇರಿದಂತೆ ಇನ್ನು ಮುಂತಾದವರು ಇದ್ದರು. 


ಸುದ್ದಿ ಓದಿ