ವಿಜಯಪುರ

ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ದೇವರಹಿಪ್ಪರಗಿ 13:ಸಿಂದಗಿ ತಾಲ್ಲೂಕು ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ ದೇವರಹಿಪ್ಪರಗಿ ಪಟ್ಟಣದ ಹೊಸನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ.ಸಿಂದಗಿ ಪಟ್ಟಣದ ಎಚ್‌.ಜಿ. ಪ್ರೌಢಶಾಲೆಯಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ ಈ ಶಾಲೆಯ ಮಕ್ಕಳು ಬಾಲಕಿಯರ ರಿಲೇ ವಿಭಾಗದಲ್ಲಿ ಪ್ರಥಮ,100 ಹಾಗೂ 200 ಮೀಟರ್ ಓಟದಲ್ಲಿ ಕ್ರಮವಾಗಿ  ಅವರುಗಳು ಶ್ರದ್ದಾ ದೇವರಮನಿ ಹಾಗೂ ಭಾಗಮ್ಮ ನಾಗಠಾಣ ಈ ವಿದ್ಯಾರ್ಥಿನಿಯರು ದ್ವಿತೀಯ ಸ್ಥಾನವನ್ನು ಪಡೆದುಕೊಂಡು ವಿಜಯಪುರ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಆಗಿರುತ್ತಾರೆ. ವಿದ್ಯಾರ್ಥಿನಿಯರ ಈ ಸಾಧನೆಗೆ ಶಾಲಾ ಮುಖ್ಯಗುರು ಎ.ಎಚ್‌. ವಾಲೀಕಾರ, ಎಸ್‌.ಡಿ.ಎಮ್‌.ಸಿ ಅಧ್ಯಕ್ಷ ಹಾಜಿಲಾಲ್ ಮಸಳಿ,ದೈಹಿಕ ಶಿಕ್ಷಕರಾದ ಶಿವಶರಣ ಪೂಜಾರಿ ಹಾಗೂ ಶಾಲೆಯ ಸಹಶಿಕ್ಷಕರಾದ ಎಸ್‌. ಎನ್‌. ಬಸವರೆಡ್ಡಿ, ಡಿ.ಎಮ್‌. ನದಾಫ್,ಪ್ರೀತಾ .ಪಿ.ಜೆ,ಜೆ.ಎಮ್‌. ಬಡಿಗೇರ,ಕೆ.ಜಿ. ಪವಾರ, ಜಿ ಡಿ ಗಚ್ಚಿನಮಠ, ನಾಗಮ್ಮ ಅಲ್ದಿ,ಸಾವಿತ್ರಿ ಪೂಜಾರಿ, ಸಂತೋಷ ಪಂಚಾಳ ಹಾಗೂ ಪಾಲಕರು ಹರ್ಷವನ್ನು ವ್ಯಕ್ತಪಡಿಸಿರುತ್ತಾರೆ. 


ಸುದ್ದಿ ಓದಿ