ರಾಷ್ಟ್ರೀಯ ಜ್ಯುನಿಯರ್ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಾಮೆಂಟ್ಗೆ ಆಯ್ಕೆ: ಸನ್ಮಾನ
ಮುದ್ದೇಬಿಹಾಳ 31 : ಪಟ್ಟಣದ ಇಂದಿರಾ ನಗರ ಬಡಾವಣೆಯ ವಿಶಾಲ ಶಂಕರ ಚಲವಾದಿ ಅವರು ಹಿಮಾಚಲ ಪ್ರದೇಶದಲ್ಲಿ ನಡೆಯುವ ರಾಷ್ಟ್ರೀಯ ಜ್ಯುನಿಯರ್ ಟೇನಿಸ್ ಬಾಲ್ ಕ್ರಿಕೇಟ್ ಟೂರ್ನಾಮೇಂಟ್ಗೆ ಕರ್ನಾಟಕ ರಾಜ್ಯದ 19 ವರ್ಷದೊಳಗಿನ ಪಂದ್ಯಾವಳೀಗೆ ಆಯ್ಕೆಗೊಂಡ ಹಿನ್ನೇಲೆಯಲ್ಲಿ ತಾಲೂಕು ಗಣ್ಯರಿಂದ ಸನ್ಮಾನಿಸಿ ಗೌರವಿಸಲಾಯಿತು.
ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಕಾಂಗ್ರೇಸ್ ಎಸ್ ಸಿ ಮೋರ್ಚಾ ಅಧ್ಯಕ್ಷ ಶ್ರೀಕಾಂತ ಚಲವಾದಿ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಮುಖಂಡ ಸಿ ಜಿ ವಿಜಯಕರ, ದೇವರಾಜ ಹಂಗರಗಿ, ಬಸವರಾಜ ಸರೂರ, ಮೈಬೂಬ ಗೊಳಸಂಗಿ, ಶರಣು ಚಲವಾದಿ, ಶಿವಪುತ್ರ ಅಜಮನಿ, ಜಾಕೀರ ಢವಳಗಿ, ಪ್ರಶಾಂತ ಕಾಳೆ, ಮಹಮ್ಮದ ರಫೀಕ ಶಿರೋಳ, ಹರಿಶ ನಾಟಿಕಾರ, ರಾಜೇಂದ್ರ ರಾಯಗೊಂಡ ಸೇರಿದಂತೆ ಹಲವರು ಇದ್ದರು.