ಮುಂದಗೋಡ

ರಾಜ್ಯಮಟ್ಟದ ಕುಸ್ತಿ ವಿಭಾಗದ ಕ್ರೀಡಾಕೂಟಕ್ಕೆ ಆಯ್ಕೆ

ರಾಜ್ಯಮಟ್ಟದ ಕುಸ್ತಿ ವಿಭಾಗದ ಕ್ರೀಡಾಕೂಟಕ್ಕೆ ಆಯ್ಕೆ

ಮುಂಡಗೋಡ 09: ತಾಲೂಕಿನ ಇಂದೂರ ಗ್ರಾಮದ ಪ್ರೌಢಶಾಲೆಯ ಮೂವರು ವಿದ್ಯಾರ್ಥಿಗಳು ರಾಜ್ಯಮಟ್ಟದ ಪ್ರೌಢಶಾಲಾ ಕುಸ್ತಿ ವಿಭಾಗದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.    

ಬಾಲಕಿಯರ 69ಕೆ.ಜಿ. ಫ್ರೀ ಸ್ಟೈಲ್ ವಿಭಾಗದಲ್ಲಿ ಲಕ್ಷ್ಮೀ ಸಿಂಗೇರಿ, ಬಾಲಕರ 60ಕೆ.ಜಿ. ಗ್ರೀಕೊ ರೋಮನ್ ವಿಭಾಗದಲ್ಲಿ ಮಹಮ್ಮದ್‌ಜುನೈದ್ ಶಾಹಪೂರ ಮತ್ತು 71ಕೆ.ಜಿ. ವಿಭಾಗದ ಫ್ರೀ ಸ್ಟೈಲ್ ವಿಭಾಗದಲ್ಲಿ ಶ್ರೇಯಸ್ ಪಟ್ಯಾಡಿಯಲ್ ಆಯ್ಕೆಯಾಗಿದ್ದಾರೆ.  

ನ.10, 11 ಮತ್ತು 12ರಂದು ಬಾಗಲಕೋಟೆಯ ಮುಧೋಳದಲ್ಲಿ ರನ್ನ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಕುಸ್ತಿ ಕ್ರೀಡಾಕೂಟ ನಡೆಯಲಿದ್ದು ಕೃಷ್ಣಾ ಗುಜಮಾಗಡಿ ಕುಸ್ತಿ ತರಬೇತುದಾರರಾಗಿದ್ದಾರೆ. ಶಾಲೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯ, ಶಿಕ್ಷಕರು ಹಾಗೂ ಸಿಬ್ಬಂದಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ. 


ಸುದ್ದಿ ಓದಿ