ಬಳ್ಳಾರಿ

ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯ ವಶ

ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯ ವಶ

ಬಳ್ಳಾರಿ 16: ಕೋವಿಡ್ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿ ಬಳ್ಳಾರಿ ನಗರದ ದೇವಿನಗರ ಕ್ರಾಸ್ ಕಡೆಯಿಂದ ಎಸ್‌.ಬಿ.ಐ ಬ್ಯಾಂಕ್ ಕಡೆಗೆ ಸಂಚರಿಸುತ್ತಿದ್ದ ಮಹಿಂದ್ರಾ ಸ್ಕಾರ್ಫಿಯೋ  ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ವಿವಿಧ ಬ್ರಾಂಡ್‌ನ ಒಟ್ಟು 87 ಬಾಕ್ಸ್‌ಗಳ (751.68ಲೀ.) ಮದ್ಯವನ್ನು ಅಬಕಾರಿ ಅಧಿಕಾರಿ ಮಂಗಳವಾರ ರಾತ್ರಿ ವಶಪಡಿಸಿಕೊಂಡಿದ್ದಾರೆ. 

ಅಬಕಾರಿ ಅಧಿಕಾರಿಗಳು ನಗರದ ಎಸ್‌.ಪಿ ಸರ್ಕಲ್‌ನಲ್ಲಿ ಗಸ್ತು ಮಾಡುತ್ತಿರುವ ಸಮಯದಲ್ಲಿ ವಾಹನವು ಕಂಡು ಬಂದಿದ್ದು ಅಧಿಕಾರಿಗಳು ಪರೀಶೀಲಿಸಲು ಮುಂದಾದಾಗ ಚಾಲಕನು ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ. ಅನುಮಾನದ ಮೇರೆಗೆ ಪರೀಶೀಲಿಸಿದ್ದು ವಾಹನದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಮದ್ಯವನ್ನು  ಸ್ಥಳ ಮಹಜರನೊಂದಿಗೆ ವಶ ಪಡಿಸಿಕೊಂಡಿದ್ದು ಪರಾರಿಯಾದ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಹಾಗೂ ವಾಹನ ಜಫ್ತಿ ಮಾಡಿಕೊಳ್ಳಲಾಗಿದೆ. 

ಹೊಸಪೇಟೆ ವಿಭಾಗ ಅಬಕಾರಿ ಜಂಟಿ ಆಯುಕ್ತ ಎಲ್‌.ಮೋಹನ್ ಕುಮಾರ್ ಅವರ ನಿರ್ದೆಶನ ಮತ್ತು ಬಳ್ಳಾರಿ ಅಬಕಾರಿ ಉಪ ಆಯುಕ್ತರಾದ ಪಿ. ಮಹೇಶ್ ಕುಮಾರ್ ಅವರ ಆದೇಶದ ಮೇರೆಗೆ ಅಬಕಾರಿ ನೀರೀಕ್ಷಕರಾದ  ತುಕಾರಾಂ ನಾಯ್ಕ್‌, ಅಬಕಾರಿ ಉಪ ನೀರೀಕ್ಷಕರಾದ ಪಿ. ಗೀರೀಶ್, ಅಬಕಾರಿ ಪೇದೆ ಸಿ. ದಕ್ಷಿಣಾಮೂರ್ತಿ ಮತ್ತು ಸಿಬ್ಬಂದಿಯು ದಾಳಿ ನಡೆಸಿ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. 


ಸುದ್ದಿ ಓದಿ