ಬೀಜ ಬಿತ್ತೋತ್ಸವ ಅಭಿಯಾನ
ಮುಂಡಗೋಡ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬುಧವಾರ ಪಟ್ಟಣದ ವಲಯ ಅರಣ್ಯ ಇಲಾಖೆಯ ಆವರಣದಲ್ಲಿರುವ ಸಾಲು ಮರದ ತಿಮ್ಮಕ್ಕ ವೃಕ್ಷೊದ್ಯಾನವನದಲ್ಲಿ ಬೀಜ ಬಿತ್ತೋತ್ಸವ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾತನಾಡಿದ ಯಲ್ಲಾಪುರ ವಿಭಾಗದ ಡಿಎಫ್ಒ ಎಸ್.ಜಿ.ಹೆಗಡೆ ಪರಿಸರದ ಉಳಿವಿಗಾಗಿ ಬೀಜಗಳನ್ನು ಸಂರಕ್ಷಣೆ ಮಾಡಿ ಬಿತ್ತುವ ಮೂಲಕ ಗಿಡ-ಮರಗಳನ್ನು ಬೆಳೆಸಲು ಎಲ್ಲರೂ ಕೈಜೋಡಿಸೋಣ. ಜೂನ್ 5ರಿಂದ12ರವರೆಗೆ ರಾಜ್ಯಾದ್ಯಂತ ಇಲಾಖೆ ವತಿಯಿಂದ ಬೀಜ ಬಿತ್ತೋತ್ಸವ ಅಭಿಯಾನ ನಡೆಸಲಾಗುತ್ತಿದೆ ಎಂದರು. ಈ ವೇಳೆ ತಹಶೀಲ್ದಾರ ಶ್ರೀಧರ ಮುಂದಲಮನಿ, ತಾ.ಪಂ.ಇಒ ಪ್ರವೀಣ ಕಟ್ಟಿ, ಎಸಿಎಫ್ ಶ್ರೀಶೈಲ ವಾಲಿ, ಆರ್ಎಫ್ಒ ಸುರೇಶ ಕುಳ್ಳೊಳ್ಳಿ, ಅಜಯ ನಾಯ್ಕ, ರೋಟರಿ ಕ್ಲಬ್ ಕಾಯದರ್ಶಿ ಬೈಜು ವಿ.ಜೆ., ಮಹೇಶ ಹೆಗಡೆ, ರಾಘವೇಂದ್ರ ತಲಗೇರಿ, ಲೊಯೋಲ ಕೇಂದ್ರೀಯ ವಿದ್ಯಾಲಯದ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು. ಉಪವಲಯ ಅರಣ್ಯಾಧಿಕಾರಿ ಅರುಣಕುಮಾರ ಕಾಶಿ ಸ್ವಾಗತಿಸಿದರು. ಸುನಿತಾ ವಂದಿಸಿದರು.