‘ದೊರೆ’ ಕಥೆಗೆ ದ್ವಿತೀಯ ಬಹುಮಾನ: ಅನಿಲ್‌ಕುಮಾರ್
ಲೋಕದರ್ಶನ ವರದಿ
ಬಳ್ಳಾರಿ 17: ರಾಷ್ಟ್ರೋತ್ಥಾನ ಪರಿಷತ್ತಿನ ಉತ್ಥಾನ ಮಾಸ ಪತ್ರಿಕೆ ನಡೆಸಿದೆ 2021ನೇ ಸಾಲಿನ ವಾರ್ಷಿಕ ಕಥಾ ಸ್ಪರ್ಧೆಯಲ್ಲಿ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯ ಕತೆಗಾರರಾದ ವಿರೇಂದ್ರ ರಾವಿಹಾಳ್ ರವರ ‘ದೊರೆ’ ಕತೆಗೆ ದ್ವಿತೀಯ ಬಹುಮಾನ ಲಭಿಸಿದೆ ಎಂದು ಉತ್ಥಾನ ಪತ್ರಿಕೆ ಸಂಪಾದಕರಾದ ಅನಿಲ್‌ಕುಮಾರ್ ರವರು ತಿಳಿಸಿರುತ್ತಾರೆ.
ಸುಮಾರು 342 ಕತೆಗಳಲ್ಲಿ ಇವರ ಕತೆ ದ್ವಿತೀಯ ಬಹುಮಾನಕ್ಕೆ ಆಯ್ಕೆಯಾಗಿರುವುದು ಬಳ್ಳಾರಿ ಸಾಹಿತ್ಯ ವಲಯದಲ್ಲಿ ಹರ್ಷವನ್ನುಂಟು ಮಾಡಿದೆ. ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಸಿದ್ಧರಾಮ ಕಲ್ಮಠ, ಕೋಶಾಧ್ಯಕ್ಷರಾದ ಟಿ ಎಂ ಪಂಪಾಪತಿ, ಶಿವಲಿಂಗಪ್ಪ ಹಂದಿಹಾಳ್, ಅಜಯ್ ಬಣಕಾರ್, ಕೆ ವಿ ನಾಗರೆಡ್ಡಿ, ವಿ ಬಿ ಮಲ್ಲಪ್ಪ, ಈ ಜಿ ರೆಡ್ಡಿ ಇನ್ನು ಮುಂತಾದವರು ಕತೆಗಾರ ರಾವಿಹಾಳ್ ರವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.