ಶಿಗ್ಗಾವ್

ಸ್ಕೌಟ್‌- ಗೈಡ್ ರಾಷ್ಟ್ರದ ಸೇವಕರನ್ನಾಗಿ ಮಾಡುತ್ತದೆ: ಸೋಮಣ್ಣ

ಸ್ಕೌಟ್‌- ಗೈಡ್ ರಾಷ್ಟ್ರದ ಸೇವಕರನ್ನಾಗಿ ಮಾಡುತ್ತದೆ: ಸೋಮಣ್ಣ

ಶಿಗ್ಗಾವಿ 13:  ಸ್ಕೌಟ್ ಮತ್ತು ಗೈಡ್ ಈ ಸಂಸ್ಥೆ ಮಕ್ಕಳನ್ನು ರಾಷ್ಟ್ರದ ಸೇವಕರನ್ನಾಗಿ ಮಾಡುತ್ತದೆ ಈ ಸಂಸ್ಥೆಗೆ ನಾವು ಯಾವತ್ತೂ ಬೆಂಬಲಿಗರಾಗಿ ಇರುತ್ತೇವೆ ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ  ಹೇಳಿದರು. 

ಪಟ್ಟಣದ ಹೊರವಲಯದ ದಿಶಾ ಇಂಟರ್ನ್ಯಾಷನಲ್ ಸ್ಕೂಲ್, ಶಿಗ್ಗಾವಿಯಲ್ಲಿ ಕಬ್ಸ್‌ ಬುಲ್ ಬುಲ್ ಸ್ಕೌಟ್ ಮತ್ತುಗೈಡ್ಸ್‌ ದಳಗಳ ಉದ್ಘಾಟನೆಯ ಪೂರ್ವ ಸಿದ್ಧತಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಜಾತಿಧರ್ಮ ಕುಲವನ್ನು ಮರೆತು ಮಕ್ಕಳು ದೇಶ ಸೇವೆಗೆ ಸಿದ್ದರಾಗಲು ತಯಾರಾಗುತ್ತಾರೆ ಎಂದರು. ಬಿ ವೈ ಉಪ್ಪಾರ, ಉಡಬ್ಯಾಡ್ ಹೋಲ್ಡರ್  ಓಣಿಮನಿ, ಸುಮಾ ಆರ್, ಲಿಂಗೇಶ್ ಕೆ, ಶಾಲೆಯ ಪ್ರಧಾನ ಗುರುಗಳು ಮತ್ತು ಸಹ ಶಿಕ್ಷಕರು  ಉಪಸ್ಥಿತರಿದ್ದರು. 


ಸುದ್ದಿ ಓದಿ