ಕಾರವಾರ

ಸಚಿವ ಬೆಂಗಾಲು ವಾಹನಕ್ಕೆ ಸ್ಕೂಟಿ ಡಿಕ್ಕಿ

ಸಚಿವ ಬೆಂಗಾಲು ವಾಹನಕ್ಕೆ ಸ್ಕೂಟಿ ಡಿಕ್ಕಿ

ಕಾರವಾರ 04 : ಆರೋಗ್ಯ ಸಚಿವ  ಯು.ಟಿ .ಖಾದರ್ ಅವರು ಕಾರವಾರ ದಿಂದ ಉಡುಪಿ ಕಡೆಗೆ ತೆರಳುವಾಗ , ಅವರ  ಬೆಂಗಾವಲು ವಾಹನಕ್ಕೆ ಸ್ಕೂಟಿ ಡಿಕ್ಕಿಯಾಗಿದೆ. ಅಂಕೋಲಾ ಸನಿಹ ಬಾಳೆಗುಳಿ ಎಂಬಲ್ಲಿ ಹೆದ್ದಾರಿ ಮೇಲೆ ವರದರಾಜ ಹೋಟೆಲ್  ಬಳಿ ಅಪಘಾತ ನಡೆದಿದೆ ಎಂದು ಪೋಲೀಸರು ತಿಳಿಸಿದ್ದಾರೆ.ಸ್ಕೂಟಿ  ಸವಾರ ಗಂಭೀರ ಗಾಯಗೊಂಡಿದ್ದಾನೆ ಎನ್ನಲಾಗಿದೆ.ಅಪಘಾತವಾಗುತಿದ್ದಂತೆ ವಿಷಯ ಅರಿತ ಸಚಿವರು  ಸ್ವತಃ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.  ಅಲಗೇರಿ ಮೂಲದ ಸಂದೀಪ್ ನಾಯಕ್  ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವ.ಅಂಕೋಲಾ ಪಟ್ಟಣದ ಆರ್ಯ ಮೆಡಿಕಲ್  ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು ,ತಲೆಗೆ ಪೆಟ್ಟಾಗಿದೆ ಎನ್ನಲಾಗಿದೆ. ಘಟನೆ ಸಂಬಂಧ ಅಂಕೋಲ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 


ಸುದ್ದಿ ಓದಿ