ಶಿಗ್ಗಾವ್

ಶಾಲಾ ಮಕ್ಕಳಿಂದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ

ಶಾಲಾ ಮಕ್ಕಳಿಂದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ


ಲೋಕದರ್ಶನ ವರದಿ 

ಶಿಗ್ಗಾವಿ 17: ತಾಲೂಕಿನ ಹಿರೇಮಣಕಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ಪ್ರಯೋಗಾಲಯ ಹಾಗೂ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 

ಶಾಲೆಯ ಎಸ್ ಡಿ ಎಂ ಸಿ ಅದ್ಯಕ್ಷರು ಹಾಗೂ ಉಪಾಧ್ಯಕ್ಷರು ಶಾಲಾ ಮಕ್ಕಳ ತಯಾರಿ ಮಾಡಿರುವ  ಪರಿಸರದಿಂದ ಆಗುವ ಲಾಭ ಹಾಗೂ  ಪಾಠೋಪಕರಣ ಪ್ರಯೋಗಾಲಯ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ವೀಕ್ಷಣೆ ಮಾಡಿದರು. 

ವಿಕ್ಷಣೆ ಮಾಡಿ ಮಾತನಾಡಿದ ಈರಣ್ಣ ಕಮ್ಮಾರ ಮಕ್ಕಳಲ್ಲಿ ಬಹಳಷ್ಟು ಉತ್ಸಾಹ ತುಂಬಿ ಮಕ್ಕಳನ್ನು ವಿದ್ಯಾಭ್ಯಾಸದ ಮೂಲಕ ಇತರ ಚಟುವಟಿಕೆಗಳನ್ನು ಅವರಿಗೆ ನಿಡುವ ಮೂಲಕ ಮಕ್ಕಳಲ್ಲಿ ಎಲ್ಲ ಚಟುವಟಿಕೆಯಲ್ಲಿ ಬಾಗವಹಿಸುವ ಶಕ್ತಿ ನಿಡುತ್ತದೆ ಎಂದರು ನಮ್ಮ ಶಾಲಾ ಸರ್ವ ಶಿಕ್ಷಕ ವೃಂದದ ಕೆಲಸಕ್ಕೆ ಶ್ಲಾಘನೀಯ ಎಂದರು. 

ಶಾಲಾ ಮುಖ್ಯೋಪಾಧ್ಯಾಯ ಎಂ ಎನ್ ಸವದತ್ತಿ ಅವರು  ಮಾತನಾಡಿ ಸರಕಾರಿ ಶಾಲೆಯಲ್ಲಿ ಕಲಿತ ಮಕ್ಕಳು ಕಲಿಕೆ ಎಲ್ಲಿ ಆಟ ಪಾಠದಲ್ಲಿ ಹಾಗೂ ದೈಹಿಕವಾಗಿ ಮಾನಸಿಕವಾಗಿ ಬೆಳವಣಿಗೆ ಹೊಂದುತ್ತಾರೆ ಎಂದರು. 

ಈ ಸಂದರ್ಭದಲ್ಲಿ ಶಾಲೆಯ  ಶಿಕ್ಷಕರು ಎನ್ ಐ ಕತಿಬ್,  ಬಿ ಆರ್ ಶಿವಪೂರ, ಆರ್ ಕಿರಣ, ದೀಪಾ ದೇವಗೇರಿ, ಎಸ್ ಎನ್ ಜುಂಜಾಳ, ರೇಣುಕಾ ದುಂಡಪ್ಪನವರ, ಆರ್ ಬಿ ಕಬ್ಬುರ  ಹಾಗೂ ಎಸ್ ಡಿ ಎಂ ಸಿ  ಸದಸ್ಯರ  ಶಿವಪ್ಪ ಗುಲಗಂಜಿಕೊಪ್ಪ, ನಿಂಗಪ್ಪ ಬಾರಕೇರ, ಸವಿತಾ ಬಾಗಲಕೊಟಿಮಠ ಹಾಗೂ ಸರ್ವ ಸದಸ್ಯರು ಹಾಗೂ ಬಿಸಿ ಊಟ ತಯಾರಕರು ಉಪಸ್ಥಿತರಿದ್ದರು. 


ಸುದ್ದಿ ಓದಿ