ಮುಂದಗೋಡ

ಶಾಲೆ ಭಾಗ್ಯನೀಡಿದ : ಶಾಸಕ ಶಿವರಾಮ ಹೆಬ್ಬಾರ್

ಶಾಲೆ ಭಾಗ್ಯನೀಡಿದ : ಶಾಸಕ ಶಿವರಾಮ ಹೆಬ್ಬಾರ್

ಮುಂಡಗೋಡ 18 : ಶಾಲೆ ಭಾಗ್ಯ ನೀಡಿದ ಶಾಸಕ ಶಿವರಾಮ ಹೆಬ್ಬಾರ ರವರು ತಾಲೂಕಿನ ಪಾಳಾ ಗ್ರಾಮಕ್ಕೆ 6ನೇ  ತರಗತಿಯಿಂದ 10 ತರಗತಿಯ ವರೆಗೆ ಅಲ್ಪಸಂಖ್ಯಾತರ ಮುರಾರ್ಜಿ ವಸತಿ ಶಾಲೆಯನ್ನು ಶಾಸಕ ಶಿವರಾಮ ಹೆಬ್ಬಾರ ರವರು ಮಂಜೂರ ಮಾಡಿಸಿದ್ದಾರೆ.

ಮಂಜೂರಾದ ಮುರಾರ್ಜಿ ವಸತಿ ಶಾಲೆ ಇದೆ 2025-26 ನೇ ಶೈಕ್ಷಣಿಕ ವರ್ಷದಿಂದ  ವಸತಿ ಶಾಲೆಗೆ 6ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಿ. ಆಟ ಪಾಠ ನಡೆಯಲಿದೆ. ಅಲ್ಪಸಂಖ್ಯಾತರ ಸಮುದಾಯದ ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದೆ ಶಿಕ್ಷಣವಂತರಾಗಬೇಕು ಎಂಬುದರು ಕುರಿತು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು. ಇದೇ ವರ್ಷದಿಂದ ಅಲ್ಪಸಂಖ್ಯಾತರ ಮುರಾರ್ಜಿ ಶಾಲೆಯು ಕಾರ್ಯಾರಂಭ ಮಾಡಬೇಕಾಗಿರುವುದರಿಂದ ಶಾಸಕರು ತುರ್ತಾಗಿ ಅಲ್ಪಸಂಖ್ಯಾತರ ಜಿಲ್ಲಾ ಅಧಿಕಾರಿ ಗದ್ದಿಗೌಡರ ಹಾಗೂ ಮುಂಡಗೋಡ ಮೌಲಾನ ಆಝಾದ ಶಾಲೆಯ ಪ್ರಾಂಶುಪಾಲ ಸಂತೋಷ ಮಡಿವಾಳ ಜೊತೆ ಪಟ್ಟಣದ ಪರೀವೀಕ್ಷಣ ಮಂದಿರದಲ್ಲಿ ಮಂಗಳವಾರ ಚರ್ಚೆ ನಡೆಸಿದರು.  

 ಪಾಳಾದಲ್ಲಿ ವಸತಿ ಶಾಲೆ ಪ್ರಾರಂಭವಾಗಲು ಕಟ್ಟಡ ಇಲ್ಲದೆ ಇರುವುದರಿಂದ ತುರ್ತಾಗಿ ಪಟ್ಟಣದ ಬೃಂದಾವನ ಲೇ ಓಟ್ ನಲ್ಲಿರುವ ಬೃಹತ್ ಕಟ್ಟಡವೊಂದರಲ್ಲಿ ಅಂದರೆ ಈ ಮೊದಲು ಇಂದಿರಾಗಾಂಧಿ ವಸತಿ ಶಾಲೆಯು ಕಾರ್ಯಾಮಾಡಿರುವ ಕಟ್ಟಡದಲ್ಲಿ ಪ್ರಾರಂಭವಾಗುವಂತಹ ಸೂಚನೆಗಳು ಕಂಡು ಬರುತ್ತವೆ. ಸರ್ಕಾರ ಮಟ್ಟದಲ್ಲಿ ಕಟ್ಟಡದ ಬಾಡಿಗೆ ನಿರ್ಧಾರವಾಗಲಿದೆ ಎಂದು ಹೇಳಲಾಗುತ್ತದೆ.ಅಲ್ಪಸಂಖ್ಯಾತರ ಮುರಾರ್ಜಿ ವಸತಿ ಶಾಲೆಯು ಆದಷ್ಟು ಬೇಗನೆ ಕಾರ್ಯಾರಂಭ ಮಾಡಬೇಕು ಎಂದು  ಅಧಿಕಾರಿಗಳಿಗೆ  ಸೂಚನೆ ಕೊಟ್ಟಿದ್ದಾರೆ.ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ರವಿಗೌಡ ಪಾಟೀಲ, ಶಾಸಕರ ಸರ್ಕಾರಿ ಆಪ್ತಸಹಾಯಕ ಕಮಲಾಕರ ನಾಯಕ  ಹಾಗೂ ನಾಗರಾಜ್ ನಾಯ್ಕ್‌ ಇದ್ದರು. ಹಾಗೂ ಕಾರ್ಯಕರ್ತರು ಹಾಗೂ ಉಪಸ್ಥಿತರಿದ್ದರು. 


ಸುದ್ದಿ ಓದಿ