ವಿಜಯಪುರ

ಶಾಲೆಯ ಮಕ್ಕಳ ಪದಗ್ರಹಣ ಸಮಾರಂಭ

ಶಾಲೆಯ ಮಕ್ಕಳ ಪದಗ್ರಹಣ ಸಮಾರಂಭ

ವಿಜಯಪುರ 28 : ಇಲ್ಲಿನ ಫ.ಗು.ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಜಲ ನಗರದಲ್ಲಿರುವ ಬಿ.ಎಂ. ಪಾಟೀಲ್   ಪಬ್ಲಿಕ್ ಶಾಲೆಯ ಮಕ್ಕಳ ಪದಗ್ರಹಣ ಸಮಾರಂಭ ಏರಿ​‍್ಡಸಲಾಗಿತ್ತು.  ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಜವಾಬ್ದಾರಿ, ಶಿಸ್ತು ಹಾಗೂ ಸೇವಾ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಶಾಲೆಯಲ್ಲಿ ವಿದ್ಯಾರ್ಥಿಗಳ ಚುನಾವಣೆ ನಡೆಸಲಾಗಿತ್ತು. ಇದರಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ಪದಗ್ರಹಣ ಬೋಧಿಸಲಾಯಿತು.  ಮುಖ್ಯ ಅತಿಥಿಯಾಗಿದ್ದ ನಿತಿನ್ ಋಣವಾಲ್ ಮಾತನಾಡಿ,  ವಿದ್ಯಾರ್ಥಿಗಳಿಗೆ ಮೌಲ್ಯಯುತ ಸಲಹೆಗಳನ್ನು ನೀಡಿ, ಪಠ್ಯೇತರ ಚಟುವಟಿಕೆಗಳನ್ನು ಕೂಡ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.  ಶಾಲೆಯ ಪ್ರಾಚಾರ್ಯ ವಿಕ್ರಂ ನಾರ್ವೇಕರ್, ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಹಿರಿಯ ಸಂಯೋಜಕಿ ಜಯಾ ಗಲಗಲಿ, ಮಕ್ಕಳು ಕ್ರಿಯಾತ್ಮಕವಾಗಿ ಬೆಳೆಯಲು ಸಲಹೆ ನೀಡಿದರು.  ಶಾಲಾ ನಾಯಕ, ಉಪ ನಾಯಕ, ಹೌಸ್ ಕ್ಯಾಪ್ಟನ್ಗಳು ಹಾಗೂ ಇತರ ವಿದ್ಯಾರ್ಥಿ ಪ್ರತಿನಿಧಿಗಳು ಪದಗ್ರಹಣ ಮಾಡಿ, ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದಾಗಿ ಪ್ರತಿಜ್ಞೆ ಸ್ವೀಕರಿಸಿದರು. ಪಾಲಕರು ಕೂಡ ಭಾಗವಹಿಸಿದ್ದು ವಿಶೇಷವಾಗಿತ್ತು. 


ಸುದ್ದಿ ಓದಿ