ಬಳ್ಳಾರಿ

ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆ

ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆ

ಬಳ್ಳಾರಿ 03: ನಗರದ  ಕೌಲ್ ಬಜಾರ್‌ನಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನಾಚರಣೆಯನ್ನು ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿ  ವಿಜೃಂಭಣೆಯಿಂದ ಆಚರಿಸಿದರು.  

ಹೆಣ್ಣು ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತಂದು ಸಮಾನತೆಯನ್ನು ಎತ್ತಿ ಹಿಡಿಯಲು ದಶಕಗಳ ಕಾಲ ಶ್ರಮಿಸಿದ ದೇಶದ ಮೊದಲ ಶಿಕ್ಷಕಿಯಾದ ಧೀಮಂತ ಮಹಿಳೆಯ ಸಾವಿತ್ರಿಬಾಯಿ ಪುಲೆ  ಅವರು ಆಗಿದ್ದಾರೆ. ಇವರನ್ನು ಅಕ್ಷರದ ಅವ್ವ ಎಂದು ಕರೆಯುವರು. ಹೆಣ್ಣೊಂದು ಕಲೆತರೆ  ಶಾಲೆಯನ್ನು ತೆರೆದಂತೆ ಎಂಬ ಉಕ್ತಿಯಂತೆ, ಹಾಗೂ ಯತ್ರ ನಾರಿಸ್ತು ಪೂಜಂತೆ ರಮಂತೆ ತತ್ರ ದೇವತಾಹ  ಸ್ತ್ರೀಯರ ಮೌಲ್ಯವನ್ನು ಕುರಿತು ಸ್ತ್ರೀಯರ ಮೌಲ್ಯವನ್ನು ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.  ನಂತರ  ಮುಖ್ಯ ಶಿಕ್ಷಕರಾದ ಮಂಜೂರಾಲ್ ಹಕ್, ಸುಲ್ತಾನ, ಮೇಹಾಜ್ ಬಿನ್, ಬಿಲ್ಕಾಸ್ ಜಹಾನ್ ಹಲವಾರು ಶಿಕ್ಷಕರು ಭಾಗವಹಿಸಿದ್ದರು. 


ಸುದ್ದಿ ಓದಿ