ಜಮಖಂಡಿ

ರಕ್ತದಾನದಿಂದ ಜೀವನ ಉಳಿಸಿ, ಪ್ಲಾಸ್ಮಾದಾನದೊಂದಿಗೆ ಜೀವನ ಹಂಚಿಕೊಳ್ಳಿ

ರಕ್ತದಾನದಿಂದ ಜೀವನ ಉಳಿಸಿ, ಪ್ಲಾಸ್ಮಾದಾನದೊಂದಿಗೆ ಜೀವನ ಹಂಚಿಕೊಳ್ಳಿ

ಲೋಕದರ್ಶನ ವರದಿ,

ಜಮಖಂಡಿ: 14: ನಗರದ ವಿಜಯಪೂರ ರಸ್ತೆಯಲ್ಲಿರುವ ಜೀವನ ರಕ್ತನಿಧಿ ಕೇಂದ್ರದಲ್ಲಿ ರಕ್ತದಾನದಿಂದ ಜೀವನ ಉಳಿಸಿ, ಪ್ಲಾಸ್ಮಾದಾನದೊಂದಿಗೆ ಜೀವನ ಹಂಚಿಕೊಳ್ಳಿ ಯೋಜನೆಡಿಯಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು.

ಹಿರಿಯರಾದ ರಾಚಯ್ಯ ಆಕ್ಕಿ, ಅಶೋಕ ಗಾಂವಿ, ಎಸ್.ಎಸ್.ಹಿಟ್ಟಿನಮಠ, ಎಂ.ಎಸ್.ಚಿಂಚಖಂಡಿ, ಚಿದಾನಂದ ಸಿದ್ದಾಪೂರಮಠ, ನಿವೃತ್ತ ಶಿಕ್ಷಕ ಮಠಪತಿ, ಮಹಾದೇವ ಮುಧೋಳ, ರಾಜು ಮೈಗೂರ ಗುರು ಮಠಪತಿ, ಗಂಗಾ ಹಿರೇಮಠ, ಮಹೇಶ ಕಲಕತ್ತಿಮಠ, ಪ್ರಭು ಮಾನಮಿ, ರೇಖಾ ನಡುವಿನಮನಿ, ಎಂ.ವೀಣಾ, ಎ.ಎಸ್.ಶ್ರೀನಿವಾಸ ರಕ್ತದಾನ ಮಾಡಿದರು. ಇದೇ ಸಂದರ್ಭದಲ್ಲಿ ಜೀವನ ಆರೋಗ್ಯ ಸಂಸ್ಥೆ ಅಧ್ಯಕ್ಷ ಡಾ.ರುದ್ರಸ್ವಾಮಿಮಠ ಕಾರ್ಯದರ್ಶಿ ಟಿ.ಎಸ್.ಮೈಗೂರ ಸಹಿ ಇತರರು ಇದ್ದರು.


ಸುದ್ದಿ ಓದಿ