ಸೌಂದತ್ತಿ

ಸವದತ್ತಿ ಪುರಸಭೆ ಕಾಂಗ್ರೆಸ್ ತೆಕ್ಕೆಗೆ

ಸವದತ್ತಿ ಪುರಸಭೆ ಕಾಂಗ್ರೆಸ್ ತೆಕ್ಕೆಗೆ

ಸವದತ್ತಿ 28: ಯಲ್ಲಮ್ಮ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಜರುಗಿದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಅಧ್ಯಕ್ಷರಾಗಿ ಚಿನ್ನವ್ವ ಗಿರೇಪ್ಪ ಹುಚ್ಚಣ್ಣವರ ಹಾಗೂ ಉಪಾಧ್ಯಕ್ಷರಾಗಿ  ದಾವಲಬಿ ಮಕ್ತುಮಸಾಬ್ ಸನದಿ ಅವರು ಆಯ್ಕೆಯಾಗಿದ್ದಾರೆ. ಈ ವೇಳೆ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸಿದ ಸರ್ವ ಸದಸ್ಯರಿಗೂ ಮತ್ತು ಮುಖಂಡರಿಗೆ ಶಾಸಕ ವಿಶ್ವಾಸ ವೈದ್ಯ ಅಭಿನಂದನೆ ಸಲ್ಲಿಸಿದರು. ಪುರಸಭೆ ಸದಸ್ಯರು, ಮುಖಂಡರು, ಗುರು ಹಿರಿಯರು, ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ