ಜಮಖಂಡಿ

ಸರ್ಕಾರದ ನೀತಿಯನ್ನು ವಿರೋಧಿಸಿ ವಿದ್ಯಾರ್ಥಿಗಳಿಂದ ಸತ್ಯಾಗ್ರಹ

ಸರ್ಕಾರದ ನೀತಿಯನ್ನು ವಿರೋಧಿಸಿ ವಿದ್ಯಾರ್ಥಿಗಳಿಂದ ಸತ್ಯಾಗ್ರಹ
ಜಮಖಂಡಿ ನಗರಕ್ಕೆ ಮಂಜೂರಾದ ವಿಶ್ವವಿದ್ಯಾಲಯವನ್ನು ಸರ್ಕಾರವು ಜಮಖಂಡಿಗೆ ನೀಡುವಂತೆ ಎನ್ಎಸ್ಯುಐ ಒತ್ತಾಯಿಸಿ, ಅಹೋರಾತ್ರಿ

ಲೋಕದರ್ಶನ ವರದಿ

ಜಮಖಂಡಿ 20: ಭಾರತ ರಾಷ್ಟ್ರೀಯ ವಿದ್ಯಾರ್ಥಿ  ಒಕ್ಕೂಟ ಜಮಖಂಡಿಗೆ ಮಂಜೂರಾದ ವಿಶ್ವವಿದ್ಯಾಲಯವನ್ನು ರಾಜ್ಯ ಸರ್ಕಾರ ದ ನೀತಿಯನ್ನು ಖಂಡಿಸಿ, ದೇಸಾಯಿ ವೃತ್ತದಲ್ಲಿ ಅಹೋ ರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಯಿತು.

ಅದೇ ರೀತಿ ಮುಂದಿನ ದಿನಗಳಲ್ಲಿ ಸರ್ಕಾರವು ಜಮಖಂಡಿ ನಗರಕ್ಕೆ ವಿಶ್ವವಿಧ್ಯಾಲಯವನ್ನು ನೀಡದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಎನ್ಎಸ್ಯು ಐ ಉಗ್ರ ಪ್ರತಿಭಟನೆ ಮಾಡಲಾಗುವದೆಂದು ಜಿಲಾಧ್ಯಕ್ಷ ವಿಜಯ ತಿಪರಡ್ಡಿ ಏಚ್ಚರಿಕೆ ನೀಡಿದರು.   ತಾಲೂಕಾ ಪ್ರಮುಖ ಶಂಬು ಪಡಸಾಲಿ, ಅಖಿಲ ನಧಾಪ, ಸಚಿನ ಅಂಬಿ, ಆನಂದ ಕಾಂಬಳೆ, ಬಸವರಾಜ ನ್ಯಾಮಗೌಡ, ರಮೇಶ ಅಮಾತಿ, ಲೋಹಿತ ಮೇತ್ರಿ, ಪುಂಡಲೀಕ ಮೇತ್ರಿ, ಮಂಜುನಾಥ ಕಣಬೂರಮಠ, ಮಲ್ಲು ಕವಟಕೊಪ್ಪ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು. 


ಸುದ್ದಿ ಓದಿ