ಲೇಖನಗಳು

ಸತ್ಸಂಗ

ಸತ್ಸಂಗ


ಮಡಕೆಯ ಮಡುವಡೆ ಮಣ್ಣೆ ಮೊದಲು 

ತೊಡಿಗೆಯ ಮಾಡುವಡೆ ಹೊನ್ನೆ ಮೊದಲು 

ಶಿವಪಥವನರಿದೆಡೆ ಗುರುಪಥವೇ ಮೊದಲು 

ಕೂಡಲ ಸಂಗಮ ದೇವರನರಿದಡೆ 

ಶರಣರ ಸಂಗವೇ ಮೊದಲು 

ಶಿವಕುಮಾರ ಮುನಿಗಳು ಶಿಷ್ಯರಿಗೆ ಬೋಧನೆ ಮಾಡುತ್ತಿದ್ದರು. ಆ ನಿರ್ಮಲವಾದ ಕಾಡಿನಲ್ಲಿ ಒಮ್ಮಲೆ ಹೆಣ್ಣಿನ ದುಃಖಭರಿತ ಧ್ವನಿ ತೇಲಿ ಬಂದಿತು. ಶಿವಕುಮಾರ ಮುನಿಗಳಿಗೆ ಯಾರೋ ಹೆಣ್ಣುಮಗಳು ದುಃಖದಲ್ಲಿ ಸಿಲುಕಿರುವದು ಅರಿವಾುತು. ಶಿವಕುಮಾರ ಮುನಿಗಳು ಕೆಲವು ಶಿಷ್ಯರನ್ನು ಕರೆದುಕೊಂಡು ಧ್ವನಿಬಂದ ದಿಕ್ಕಿನತ್ತ ಹೊರಟರು. 

ಸ್ವಲ್ಪ ದೂರದಲ್ಲಿಯೇ ಹರಿಯುತ್ತಿರುವ ಝರಿಯ ಹತ್ತಿರ ಹೆಣ್ಣು ಮಗಳೊಬ್ಬಳು ಅದೇ ತಾನೆ ಅವಳಿ ಜವಳಿ ಮಕ್ಕಳನ್ನು ಹೆತ್ತಿದ್ದಳು. ತುಂಬಾ ಬಡವಾಗಿದ್ದ ಆಕೆಯು ಅನಾಥೆಯಾಗಿದ್ದಳು. ಅವಳು ಉಳಿಯುವ ಸ್ಥಿತಿಯಲ್ಲಿ ಇರಲಿಲ್ಲ. ಆಗ ಮುನಿಗಳು "ತಾಯಿ ನಿನ್ನ ಸ್ಥಿತಿ ಕಂಡು ನನಗೆ ದುಃಖವಾಗುತ್ತದೆ. ನಡೆ ನನ್ನ ಆಶ್ರಮಕ್ಕೆ, ನಿನಗೆ ರಕ್ಷಣೆ ಒದಗಿಸುತ್ತೇನೆ" ಎಂದರು. 

ಆಗ ಅನಾಥೆ, "ಮುನಿಗಳೇ ನಾನು ಬದುಕುವ ಸ್ಥಿತಿಯಲ್ಲಿ ಇಲ್ಲ. ನನಗೆ ಯಾರೂ ದಿಕ್ಕಿಲ್ಲ. ನನ್ನ ಪತಿಯು ಒಂದು ಘಟನೆಯಲ್ಲಿ ತೀರಿಹೋದರು. ಈ ಮಕ್ಕಳಿಗೆ ನೀವೇ ಗತಿ" ಎಂದು ಹೇಳಿ ಪ್ರಾಣಬಿಟ್ಟಳು. 

ಮುನಿಗಳು ಅನಾಥೆಯ ಸಂಸ್ಕಾರವನ್ನು ಮಾಡಿ. ಎರಡು ಮುದ್ದಾದ ಮಕ್ಕಳನ್ನು ಆಶ್ರಮಕ್ಕೆ ತಂದರು. ಆದರೆ ಮಕ್ಕಳ ಲಾಲನೆ, ಪಾಲನೆ ಮಾಡುವದು ಕಷ್ಟದ ಕೆಲಸವಾಗಿತ್ತು. ಗುರುಗಳಿಗೆ ಶಿಷ್ಯರು ಸಹಾಯಹಸ್ತ ನೀಡಿದ್ದರಿಂದ ಮಕ್ಕಳ ಲಾಲನೆ ಪಾಲನೆ ನಡೆುತು. 

ಅದೇ ಮುನಿಗಳು ವಾಸಿಸುತ್ತಿದ್ದ ಕಾಡಿನ ಪಕ್ಕದ ಊರಲ್ಲಿ ದಂಪತಿಗಳಿದ್ದರು. ಅವರಿಗೆ ಮಕ್ಕಳಿರಲಿಲ್ಲ. ಎಷ್ಟೋ ದೇವರ ಸೇವೆ, ಹರಕೆ ಮಾಡಿದರೂ ಅವರಿಗೆ ಮಕ್ಕಳ ಭಾಗ್ಯ ಸಿಗಲಿಲ್ಲ. ಶಿವಕುಮಾರ ಮುನಿಗಳ ಆಶ್ರಮದಲ್ಲಿ ಪುಟ್ಟ ಕಂದಮ್ಮಗಳು ಇರುವದು ತಿಳಿದು ಆಶ್ರಮಕ್ಕೆ ಬಂದರು. 

ಇಬ್ಬರು ದಂಪತಿಗಳು, "ಮುನಿಗಳೇ ನಮಗೆ ಮಕ್ಕಳಿಲ್ಲ, ತಮ್ಮಲ್ಲಿಯ ಒಬ್ಬ ಕಂದನನ್ನು ನೀಡಿದರೆ ನಾವು ಚೆನ್ನಾಗಿ ಸಾಕುತ್ತೇವೆ. ನಿಮಗೆ ಕೀರ್ತಿ ತರುವಂತೆ ಬೆಳೆಸುತ್ತೇವೆ" ಎಂದರು. 

ತುಂಬಾ ಸಾತ್ವಿಕರಾದ ದಂಪತಿಗಳ ಮಾತು ಕೇಳಿ ಮಕ್ಕಳಿಗೆ ತಾುಯ ಪ್ರೀತಿ, ಮಮತೆ ಅವಶ್ಯ ಬೇಕು. ಮಗುವಿಗೆ ತಾನು ತಾು ಇಲ್ಲದ ತಬ್ಬಲಿ ಆಗಬಾರದೆಂದು ತಿಳಿದು ಅವರಿಗೆ ರಾಮನೆಂಬ ಮಗುವನ್ನು ಇತ್ತು, ಸಲುಹಲು ತಿಳಿಸಿ ಆಶೀರ್ವದಿಸಿ ಕಳಿಸಿದರು. 

ಅದೇ ಕಾಡಿನಲ್ಲಿ ಭೀಮನೆಂಬ ವ್ಯಕ್ತಿ ವಾಸಿಸುತ್ತದ್ದ. ಆತನಿಗೂ ಮಕ್ಕಳಿರಲಿಲ್ಲ. ಭೀಮಣ್ಣ ಯೋಗ್ಯ ವ್ಯಕ್ತಿಯಾಗಿರಲಿಲ್ಲ. ಅವನ ಹೆಂಡತಿಯು ಗಂಡನ ಹಾದಿಯಲ್ಲಿಯೇ ನಡೆಯುವವಳು. ಅವರು ಮುನಿಗಳ ಹತ್ತಿರ ಮಗು"ರುವದನ್ನು ಕೇಳಿ ಆಶ್ರಮಕ್ಕೆ ಬಂದರು. 

"ಮುನಿಗಳೆ ನಮಗೆ ಮಕ್ಕಳಿಲ್ಲ, ದಯವಿಟ್ಟು ಈ ಮಗುವನ್ನು ನೀಡಿದರೆ ನಾವು ಸಾಕುತ್ತೇವೆ ದಯವಿಟ್ಟು ಕೊಡಿರಿ" ಎಂದರು. ಆದರೆ ಭೀಮಣ್ಣ ಯೋಗ್ಯ ವ್ಯಕ್ತಿಯಾಗಿರಲಿಲ್ಲ. ಅದು ಮುನಿಗಳಿಗೂ ತಿಳಿದಿತ್ತು. ಆದರೆ ಆತನ ಹೆಂಡತಿಯು ದೀನಳಾಗಿ ಮಗುವನ್ನು ಕೊಡಲೇಬೇಕು. ನಾವು ಚೆನ್ನಾಗಿ ಸಾಕುತ್ತೇವೆ" ಎಂದಳು. ಆಶ್ರಮದಲ್ಲಿ ಹೆಣ್ಣುಮಕ್ಕಳಿಲ್ಲದ್ದರಿಂದ ಮಗು"ನ ಯೋಗಕ್ಷೇಮ ನೋಡಿಕೊಳ್ಳಲು ಮುನಿಗಳಿಗೂ ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಮಗು ತಾು-ತಂದೆ ಇಲ್ಲದೆ ಅನಾಥವಾಗಬಾರದೆಂದು ಒಲ್ಲದ ಮನಸ್ಸಿನಿಂದ ಮಗುವನ್ನು ಕೊಟ್ಟರು. 

ಒಂದಷ್ಟು ವರ್ಷಗಳು ಕಳೆದ ನಂತರ ಮುನಿಗಳು ಶಿಷ್ಯರನ್ನು ಕುರಿತು "ನಿಮ್ಮ ಶಿಕ್ಷಣ ಪೂರ್ಣವಾಗಿದೆ. ನಮ್ಮ ಆಶ್ರಮದಲ್ಲಿ ಕೆಲವು ವರ್ಷಗಳ "ಂದೆ ಎರಡು ಕೂಸುಗಳು ಸಿಕ್ಕಿದ್ದು ನಿಮಗೆಲ್ಲ ಗೊತ್ತು. ಈಗ ಅವರು ಏನು ಮಾಡುತ್ತಿದ್ದಾರೆ ನೋಡೋಣ ಬನ್ನಿರಿ" ಎಂದು ಶಿಷ್ಯರನ್ನು ಕರೆದುಕೊಂಡು ಭೀಮಣ್ಣ ವಾಸಿಸುತ್ತಿದ್ದ ಊರ ಕಡೆಗೆ ಬರುತ್ತಿದ್ದರು. ದೂರದಲ್ಲಿ ಒಬ್ಬ ಯುವಕ ಜನರನ್ನು ದೋಚುತ್ತಿದ್ದ. ಅವರಲ್ಲಿರುವ ವಸ್ತುಗಳನ್ನು ಕಿತ್ತುಕೊಂಡು ಹೊಡೆದು ಕಳಿಸುತ್ತಿದ್ದ. ಇದನ್ನು ನೋಡಿ ಮುನಿಗಳು 'ಮಗು ಯಾರು ನೀನು? ನೀನು "ಗೇಕೆ ಮಾಡುತ್ತಿರುವೆ. ಇದು ಯೋಗ್ಯವೇ" ಎಂದರು. 

"ಮುನಿಗಳೆ ನಿಮ್ಮ ನೀತಿ ಮಾತುಗಳು ನಮಗೆ ಬೇಕಿಲ್ಲ. ತಂದೆ ಭೀಮಣ್ಣ ನಾನು ಚಿಕ್ಕವನಿದ್ದಾಗಿನಿಂದ ನನಗೆ ಈ ವಿದ್ಯೆ ಕಲಿಸಿದ್ದಾನೆ. ಇದೇ ನನ್ನ ವೃತ್ತಿ" ಎಂದ. ಮುನಿಗಳು ತಾನು ಮಾಡಿದ್ದು ತಪ್ಪಾುತು ಎಂದು ತಿಳಿದರು. 

ಮುಂದೆ ನಡೆಯುತ್ತಾ ಸಾತ್ವಿಕ ದಂಪತಿಗಳಾದ ಚಿನ್ನಪ್ಪನ ಮನೆಗೆ ಬಂದರು. ಆಗ ಒಬ್ಬ ಯುವಕ ಹೊರಗೆ ಬಂದು "ಬನ್ನಿ ಮುನಿಗಳೆ ತಾವು ಎಲ್ಲಿಂದ ಬಂದೀರೀ, ಆಯಾಸವಾಗಿರಬೇಕು ನೀರು ತೆಗೆದುಕೊಳ್ಳಿ, ಕೈ ಕಾಳು ತೊಳೆದುಕೊಳ್ಳಿ, ಒಳಗೆ ಬಂದು ವಿಶ್ರಾಂತಿ ಪಡೆುರಿ. ಈಗ ತಂದೆಯವರು ಬರುತ್ತಾರೆ" ಎಂದು ಗುರು ಶಿಷ್ಯರನ್ನು ಸತ್ಕರಿಸಿದನು. ತಂದೆ-ತಾುಗಳು ಗುರು ಶಿಷ್ಯರಿಗೆ ಆದರದಿಂದ ಸತ್ಕರಿಸಿದರು. ಹಾಲು ಹಣ್ಣು ಇತ್ತು ಉಪಚರಿಸಿದರು. ಮುನಿಗಳಿಗೆ ತುಂಬಾ ಸಂತೋಷವಾುತು. 

ಆಗ ಮುನಿಗಳು "ಶಿಷ್ಯರೆ ನೋಡಿದಿರಾ, ಒಂದೇ ತಾುಯ ಮಕ್ಕಳು ಭಿನ್ನ ಭಿನ್ನ ಪರಿಸರ ಆಚಾರ, ವಿಚಾರ ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ. ಯಾವಾಗಲೂ ಸಂಗ ಮಹತ್ವದ್ದು. ಹೂವಿನೊಡನೆ ನಾರು ಸ್ವರ್ಗ ಸೇರುವಂತೆ ಒಳ್ಳೆಯವರ ಸತ್ಸಂಗದಿಂದ ಜೀವನವು ಪಾವನವಾಗುತ್ತದೆ. ಆದ್ದರಿಂದ ಒಳ್ಳೆಯವರ ಸಂಗ ಮಾಡಬೇಕು. ಅದರಿಂದ ಸಮಾಜಕ್ಕೆ ಒಳ್ಳೆಯದಾಗುತ್ತದೆ" ಎಂದರು.  

ಬಿ. ಎಸ್‌. ಜಗಾಪುರ 

ಬೆಳಗಾವಿ   


-= * * * =- 


ಸುದ್ದಿ ಓದಿ