ಶಿಗ್ಗಾವ್

ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ

ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ

ಲೋಕದರ್ಶನ ವರದಿ 

ಲೋಕದರ್ಶನ ವರದಿ 

ಶಿಗ್ಗಾವಿ 30: ತಾಲೂಕಿನ ಬನ್ನೂರ ಗ್ರಾಮದಲ್ಲಿ ಬಸವ ಜಯಂತಿ ಪ್ರಯುಕ್ತ ಇದೇ ಮೇ 3 ರ ಮಂಗಳವಾರದಂದು ಪ್ರತಿವರ್ಷದಂತೆ ಈ ವರ್ಷವೂ ಸಹಿತ ಭಾರತ ಸೇವಾ ಸಂಸ್ಥೆಯ ವತಿಯಿಂದ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಭಾರತ ಸೇವಾ ಸಂಸ್ಥೆ ಅದ್ಯಕ್ಷರು ಹಾಗೂ ಸಿವಿಲ್ ಗುತ್ತಿಗೆದಾರರಾದ ಶ್ರೀಕಾಂತ ದುಂಡಿಗೌಡ್ರ ಹೇಳಿದರು. 

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಮ್ಮ ಸಂಸ್ಥೆಯಿಂದ ಅನೇಕ ಸಮಾಜಮುಖಿ ಕಾರ್ಯಗಳನ್ನ ಹಮ್ಮಿಕೊಳ್ಳುತ್ತ ಬರುತ್ತಿದ್ದು ಸಂಸ್ಥೆಯು ತನ್ನದೇ ವಿಶೇಷ ಮತ್ತು ವಿಶಿಷ್ಟ ಕಾರ್ಯಗಳ ಜೊತೆಗೆ ಉಪಯುಕ್ತ ಕಾರ್ಯಕ್ರಮಗಳಾದ ಕೆರೆಗಳ ಹೂಳೆತ್ತುವುದು, ಉತ್ತೇಜಿತ ವಿದ್ಯಾರ್ಥಿಗಳ ಉನ್ನತ ವ್ಯಾಸಕ್ಕಾಂಗಿ ಧನ ಸಹಾಯ ಮಾಡುವುದು, ಹಲವಾರು ಶಾಲೆಗಳ ಸ್ವಚ್ಚತೆ ಮತ್ತು ನೈರ್ಮಲ್ಯತೆ ಕಾಪಾಡಲು ಶಾಲೆಗಳನ್ನ ದತ್ತು ತೆಗೆದುಕೊಳ್ಳುವುದು, ಬರಗಾಲ ಕ್ಷಾಮವನ್ನ ಅನುಭವಿಸುತ್ತಿರುವ ಹಳ್ಳಿಗಳಿಗೆ ಸಂಸ್ಥೆಯ ಮುಖಾಂತರ ಉಚಿತವಾಗಿ ಜೀವ ಜಲವನ್ನು ಪೂರೈಕೆ ಮಾಡುವುದು, ಕೊರೊನಾ ಸಂದರ್ಭದಲ್ಲಿ ಬಡವರಿಗೆ ಆರ್ಥಿಕವಾಗಿ ಹಿಂದುಳಿದವರಿಗೆ ಪೌರಕಾರ್ಮಿಕರಿಗೆ ಆಹಾರದ ಕಿಟ್‌ಗಳನ್ನ ದಾನ ಮಾಡಿರುವುದು, ಕೋರೋನಾ ವಾರಿಯರ್ಸಗಳಾದ ವೈದ್ಯಕೀಯ ಸಿಬ್ಬಂದಿಗಳಿಗೆ, ಆಶಾ ಕಾರ್ಯಕರ್ತೆಯರಿಗೆ, ಪೋಲಿಸ್ ಸಿಬ್ಬಂದಿಗಳಿಗೆ ಎಲ್ಲ ವೈದ್ಯಕೀಯ ಉಪಕೇಂದ್ರಗಳಿಗೆ ಉಚಿತವಾಗಿ ಸ್ಟೀಮ್ ವಿತರಣೆ, ಮುಂದುವರೆದ ಶೈಕ್ಷಣಿಕ ವ್ಯವಸ್ಥೆಗೆ ಅನುಗುಣವಾಗಿ ಪ್ರೊಜೆಕ್ಟ್‌ ಕಂಪ್ಯೂಟರ್ ಮತ್ತು ಈ ಉಪಕರಣಗಳನ್ನ ಅನೇಕ ಶಾಲೆಗಳಿಗೆ ದಾನ ಮಾಡಿರುವುದು, ಕ್ರೀಡಾ ಪ್ರೋತ್ಸಾಹಕ್ಕಾಗಿ ಸಮ್ಮರ್ ಕ್ಯಾಂಪ್‌ಗಳ ಆಯೋಜನೆ, ಕಿಕ್ರೇಟ ಪಂದ್ಯಾವಳಿ ಆಯೋಜನೆಗಳು ಶ್ಲಾಘನೀಯ ಕಾರ್ಯಗಳನ್ನ ಹಮ್ಮಿಕೊಳ್ಳುತ್ತ ಬರುತ್ತಿದೆ ಎಂದರು. 

ಇದರೊಂದಿಗೆ ಬಡವರ ಕಲ್ಯಾಣಕ್ಕಾಗಿ ಸತತ 8 ವರ್ಷಗಳಿಂದ ನೂರಾರು ಜೋಡಿಗೂ ಹೆಚ್ಚು ಜೋಡಿಗಳ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹಗಳನ್ನು ಪ್ರತಿ ವರ್ಷದಂತೆ ಈ ವರ್ಷವೂ ಬನ್ನೂರ ಗ್ರಾಮದ ಸಮಸ್ಥ ಹಿರಿಯರೊಂದಿಗೆ ಹಮ್ಮಿಕೊಂಡಿದ್ದು ಅಂದು ವಿವಿಧ ಶ್ರೀಗಳಾದ ಬಂಕಾಪೂರ ಅರಳೆಲೆಮಠದ ರೇವಣಸಿದ್ದೇಶ್ವರ ಮಹಾಸ್ವಾಮಿಗಳ, ಗಂಜೀಗಟ್ಟಿ ಮಠದ ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ, ಶಿಗ್ಗಾವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳ ಹಿರೇಮಣಕಟ್ಟಿ ವಿಶ್ವಾರಾದ್ಯ ಮಹಾಸ್ವಾಮಿಗಳ, ಬನ್ನೂರನ ಶಿವಾನಂದ ಮಹಾಸ್ವಾಮಿಗಳ ಮತ್ತು ಚಿಕ್ಕಮಠದ ಮಹಾಲಿಂಗಯ್ಯ ಸ್ವಾಮಿಗಳ ದಿವ್ಯ ಸಾನಿದ್ಯದಲ್ಲಿ ಬನ್ನೂರ ಗ್ರಾಮದ ಸಮಸ್ಥ ಹಿರಿಯರ ತಾಲೂಕಿನ ವಿವಿಧ ಮುಖಂಡರ ಸಹಕಾರದೊಂದಿಗೆ ಸಾಮೂಹಿಕ ವಿವಾಹಗಳು ನೆರವೇರಲಿವೆ ಎಂದರು. 


ಸುದ್ದಿ ಓದಿ