ಶಿಗ್ಗಾವ್

ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ

ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ


ಲೋಕದರ್ಶನ ವರದಿ 

ಶಿಗ್ಗಾವಿ 05:  ತಾಲೂಕಿನ ಹಿರೇಬೆಂಡಿಗೇರಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಯುಗಾದಿ ಹಬ್ಬದ ಅಂಗವಾಗಿ ಹಿರೇಮಠದಲ್ಲಿ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಿತು. ಗಂಜಿಗಟ್ಟಿಯ ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯ ಸ್ವಾಮಿಗಳು, ಮಣಕಟ್ಟಿಯ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಹಿರೇಮಠದ ಶ್ರೀಗಳು ದಿವ್ಯ ಸಾನಿಧ್ಯ ವಹಿಸಿಕೊಂಡಿದ್ದರು. ತಾಲೂಕ ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಶ್ವರಾಧ್ಯರ ನೂತನ ರಥೋತ್ಸವ ದೇಣಿಗೆ ನೀಡಿದ ಜನಾಬ. ಮೌಲಾಸಾಬ್ ತಹಸಿಲ್ದಾರ್ ಅವರನ್ನು ಸನ್ಮಾನಿಸಲಾಯಿತು.  

ಮುಖ್ಯ ಅತಿಥಿಗಳಾಗಿ ಜಯದೇವ ಅಗಡಿ, ಸುರೇಶ್ ಕೊನ್ನೂರ, ಗಂಗಣ್ಣ ಸಾತಣ್ಣವರ, ಅರ್ಜುನ ಹಂಚಿನಮನಿ, ವಿರುಪಾಕ್ಷಪ್ಪ ಪಟ್ಟೇದ, ಮಂಜುನಾಥ ಕಾರಡಗಿ, ಮೃತ್ಯುಂಜಯ ಹಿರೇವ್ಮಠ, ಶಿವಾನಂದಸ್ವಾಮಿ ಕೋರದಾನಮಠ,  ಮೃತ್ಯುಂಜಯ ಒಡೆಯರ, ಶೇಖಣ್ಣ ಹಾದಿಮನಿ, ಈರ​‍್ಪ ಮ್ಯಾಗೇರಿ, ಬಸವರಾಜ್ ನಾರಾಯಣಪುರ, ಬಸವರಾಜ್ ಹುಬಳ್ಳಿ, ಬಸವರಾಜ ಗುದ್ದಲಿ, ಚಿನ್ನಪ್ಪ ಕುಂದಗೋಳ, ಬಸನಗೌಡ ಪಾಟೀಲ, ಕಾದರಸಾಬ ತಶಿಲ್ದಾರ್, ಜನಾಬ್ ಮಹಬೂಬ್ಸಾಬ್ ದಿವಾನವರ, ಬಸಪ್ಪ ಬಂಗಿ, ಹನುಮಂತಪ್ಪ ಮಂಟೂರು, ಎಲ್ಲಪ್ಪ ಧರ್ಮಣ್ಣವರ, ಈರ​‍್ಪ ಬೂದಿಹಾಳ, ಬೀರ​‍್ಪ ನಾಗಪ್ಪನವರ, ಹನುಮಂತಪ್ಪ ದ್ಯಾವಣ್ಣವರ, ಗಂಗಾಧರ ಹೂಸಮನಿ, ಎಂಎಸ್ ಬ್ಯಾಹಟ್ಟಿ,  ಗ್ರಾಮ ಪಂಚಾಯಿತಿ  ಅಧ್ಯಕ್ಷ ಉಪಾಧ್ಯಕ್ಷರು ಸರ್ವ ಸದಸ್ಯರು ಗ್ರಾಮದ ಅನೇಕ ಗುರುಹಿರಿಯರು ಸುತ್ತಮುತ್ತಲಿನ ಹಳ್ಳಿಗಳಿಂದ ಆಗಮಿಸಿದ ಸಾವಿರಾರು ಜನರು ಹಾಜರಿದ್ದರು. 


ಸುದ್ದಿ ಓದಿ