ಮಹಿಳೆಯರಿಗೆ ಸೀರೆ ವಿತರಣೆ
ಬಳ್ಳಾರಿ 12: ಅಪ್ಪು ಸೇವಾ ಸಮಿತಿ ಹಾಗೂ ಸನ್ಮಾರ್ಗ ಸಹಾಯ ಹಸ್ತ ಸಹಯೋಗದಲ್ಲಿ ಡಾ. ಶಿವರಾಜಕುಮಾರ್ ಅವರ 59ನೇ ಹುಟ್ಟು ಹಬ್ಬದ ಅಂಗವಾಗಿ ಶ್ರೀ ಕನಕದುರ್ಗಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕೇಕ್ ಕತ್ತರಿಸಿ ಮಹಿಳೆಯರಿಗೆ ಸೀರೆಗಳು ವಿತರಣೆ ಮಾಡಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಕಪ್ಪಗಲ್ ಬಿ ಚಂದ್ರಶೇಖರ ಆಚಾರ್ ಆಚರಣೆಗಳಿಂದ ಜನರಿಗೆ ಅನುಕೂಲವಾಗಬೇಕೆ ಹೊರತು ಅನಾನುಕೂಲವಾಗಬಾರದು ಆ ನಿಟ್ಟಿನಲ್ಲಿ ಅಪ್ಪು ಸೇವಾ ಸಮಿತಿಯ ಸದಾ ಜನ ಮುಖಿ ಕಾರ್ಯ ಮಾಡುತ್ತಿದೆ ರಾಜ್ ಕುಟುಂಬ ಎಲ್ಲಾ ಅಭಿಮಾನಿಗಳು ಅವರ ಆದರ್ಶಗಳನ್ನು ರೂಢಿಸಿಕೂಳ್ಳುತ್ತಿರುವದು ಅಭಿನಂದನೀಯ.
ಈ ಸಮಯದಲ್ಲಿ ಮಹಾನಗರ ಪಾಲಿಕೆ ಸದಸ್ಯ ಹನುಮಂತ ಗುಡಿ ಗಂಟೆ ಮತ್ತು ಅಪ್ಪು ಸೇವಾ ಸಮಿತಿ , ಸಂಸ್ಥಾಪಕ ಅಧ್ಯಕ್ಷ ಜೆಪಿ ಮಂಜುನಾಥ್ ಮತ್ತು ಅಧ್ಯಕ್ಷ ಹೆಚ್ಚು ರವಿಕುಮಾರ್ ಹಾಗೂ ಉಪಾಧ್ಯಕ್ಷ ರಾಜೇಶ್ ಹುಂಡೇಕರ್, ವಿಭೂತಿ ನಾಗರಾಜ ಹಾಗೂ ಸದಸ್ಯರುಗಳಾದ ಎಂ ನವೀನ್, ಲಕ್ಷ್ಮಿ ರೆಡ್ಡಿ, ಪ್ರಶಾಂತ್ ಕುಮಾರ್, ರುದ್ರ, ಯೆ ಅರ್ ಮಂಜುನಾಥ, ಸುರಾಜ್ ಕುಮಾರ್, ಶರಣ ತೇಜ, ಫೋಟೋಗ್ರಾಫರ್ ರಾಜೇಶ್, ಎಲ್ಲ ಸದಸ್ಯರು ಉಪಸ್ಥಿತರಿದ್ದರು.