ಕನಕಗಿರಿ

ಸಪ್ತಪದಿ ಸರಳ-ದಾಂಪತ್ಯ ಜೀವನಕ್ಕೆ ಕಾಲಿಟ್ಟ 50ಜೋಡಿ

ಸಪ್ತಪದಿ ಸರಳ-ದಾಂಪತ್ಯ ಜೀವನಕ್ಕೆ ಕಾಲಿಟ್ಟ 50ಜೋಡಿ

ಲೋಕದರ್ಶನ ವರದಿ 

ಕನಕಗಿರಿ 25: ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಪಟ್ಟಣದ ಐತಿಹಾಸಿಕ ಪ್ರಸಿದ್ಧ ಶ್ರೀ ಕನಕಾಚಲಪತಿ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಗುರುವಾರ ಸರಳ ಸಪ್ತಪದಿ ಸಾಮೂಹಿಕ ವಿವಾಹದಡಿ 50ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.  

ಬಳಿಕ ಸುಳೇಕಲ್ ಗ್ರಾಮದ ಪಂಚಾಕ್ಷರಯ್ಯ ಶ್ರೀಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ನವ ವಧುವರರನ್ನು ಆಶೀರ್ವದಿಸಿ ಮಾತನಾಡಿ ನವದಂಪತಿಗಳು ಪುಣ್ಯ ಕ್ಷೇತ್ರವಾದ ಶ್ರೀ ಕನಕಾಚಲಪತಿ ಲಕ್ಷ್ಮೀ ನರಸಿಂಹನ ಸನ್ನಿದಿಯಲ್ಲಿ ನಡೆದ ಈ ಮದುವೆ ಸಮಾರಂಭದಲ್ಲಿ ಸಪ್ತಪದಿ ತುಳಿದಿದ್ದು ಸಂಸಾರವೆಂಬ ಬಾಳ ನೌಕೆಯಲ್ಲಿ ಇಂದಿನಿಂದ ನಿಮ್ಮ ಪಯಣ ಆರಂಭವಾಗಿದೆ. ಈ ಒಂದು ಇಡೀ ಪಯಣದಲ್ಲಿ  ಕಷ್ಟ ಸುಖಗಳು ಜೊತೆ ಜೊತೆಯಾಗಿ ಬರುತ್ತಲಿರುತ್ತವೆ ಅವುಗಳನ್ನೆಲ್ಲಾ ಎದುರಿಸಿ ನಿಮ್ಮ ಜೀವನ ಎಂಬ ನೌಕೆಯನ್ನು ಸಾಗಿಸುತ್ತಲೆ ಇರಬೇಕು. ಮುಖ್ಯವಾಗಿ ನವ ವಧುವರರು ಒಬ್ಬರನೊಬ್ಬರು ಅರ್ಥೈಸಿ ಮುನ್ನಡೆದಾಗ ಮಾತ್ರ ನೀಮ್ಮ ಜೀವನ ಹಾಲು ಜೇನಿನಂತೆ ಸದಾ ಸುಮಧುರವಾಗಿರುತ್ತದೆ ಎಂದರು. 

ನಂತರ ಶಾಸಕ ಬಸವರಾಜ ದಡೆಸುಗೂರ ಮಾತನಾಡಿ ಸಪ್ತಪದಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ ದುಂದು ವೆಚ್ಚಕ್ಕೆ ಕಡಿವಾಣ ಹಾಕಿದಂತಾಗುತ್ತದೆ. ಬಡವರಿಗೆ ಇದರಿಂದ ಸಾಲಾ ಸೂಲಾ ಮಾಡದೆ ನೆಮ್ಮದಿಯ ಜೀವನ ನಡೆಸಬಹುದಾಗಿದೆ ಎಂದು ಹೇಳಿ ನೂತನ ವಧು-ವರರಿಗೆ ಶುಭಕೋರಿ ಕರ್ನಾಟಕ ಸರ್ಕಾರದ ಸಪ್ತಪದಿ ಸರಳ ಸಾಮೂಹಿಕ ವಿವಾಹದ ಕಾರ್ಯಕ್ರಮದ ಯೋಜನೆಯಡಿ ವಧುವಿಗೆ 10 ಸಾವಿರ ಹಾಗೂ ವರನಿಗೆ 5ಸಾವಿರ ರೂಪಾಯಿ ಚಕ್ ವಿತರಿಸಿದರು. ಅರ್ಚಕರಾದ ರಾಯಬಾರ. ಸಂದೀಪಕೌಗಿ. ಸಂತೋಷ ನೇತೃತ್ವದಲ್ಲಿ ಸಾಮೂಹಿಕ ಮದುವೆ ಜರುಗಿದವು. ವಿವಾಹಕ್ಕೆ ಆಗಮಿಸಿದವರಿಗೆ ದೇವಸ್ಥಾನದ ವತಿಯಿಂದ ಊಟದ ವ್ಯವಸ್ಥೆಯನ್ನು ಸಚ್ಚಿದಾನಂದ ಅವಧೂತರ ಮಠದಲ್ಲಿ ಏರಿ​‍್ಡಸಲಾಗಿತ್ತು. ಸುಮಾರು 20ಸಾವಿರಕ್ಕೂ ಅಧಿಕ ಜನರು ಗೋದಿ ಹುಗ್ಗಿ, ಬದನೆಕಾಯಿ ಪಲ್ಲೆ, ಅನ್ನ-ಸಾಂಬಾರ್ ಊಟವನ್ನು ಸವಿದು ವಧು-ವರರಿಗೆ ಹಾರೈಸಿದರು.  

ಈ ಸಂದರ್ಭದಲ್ಲಿ ಮಾಜಿ ಶಾಸಕ ವೀರ​‍್ಪ ಕೆಸರಟ್ಟಿ,ತಹಶೀಲ್ದಾರ ಧನಂಜಯ್ ಮಾಲಗಿತ್ತಿ,ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ದತ್ತಾತ್ರೇಯ ಹೆಗಡೆ, ಪ್ರಮುಖರಾದ ಮಾಂತೇಶ್ ಸಜ್ಜನ್, ವಾಗೇಶ,ವಿರೇಶ ಸಾಲೋಣಿ, ನಾಗರಾಜ ಬಿಲ್ಗಾರ,ಬಿ. ಕನಕಪ್ಪ, ಹನುಮಂತ ಬಸರಿಗಿಡದ,ರವಿಭಜತ್ರಿ,ಮುದಿಯಪ್ಪ ಮಲ್ಲಿಗೆವಾಡ, ಹುಲಿಗೆಮ್ಮ ನಾಯಕ, ದೇವಸ್ಥಾನದ ಕಾರ್ಯದರ್ಶಿ ಸಿದ್ಧಲಿಂಗಯ್ಯಸ್ವಾಮಿ ಸೇರಿದಂತೆ ಇತರರು ಹಾಗೂ ವಿವಿಧ ಗ್ರಾಮಗಳ ಸಾರ್ವಜನಿಕರು ಇದ್ದರು. 


ಸುದ್ದಿ ಓದಿ