ಬಳ್ಳಾರಿ

ಪಂಡಿತ್ ದೀನದಯಾಳ್ ಉಪಾಧ್ಯಾಯರ ಜಯಂತಿ ಆಚರಣೆಯ ನಿಮಿತ್ತ ಸಸಿ ನೆಡುವ ಕಾರ್ಯಕ್ರಮ

ಪಂಡಿತ್ ದೀನದಯಾಳ್ ಉಪಾಧ್ಯಾಯರ ಜಯಂತಿ ಆಚರಣೆಯ ನಿಮಿತ್ತ ಸಸಿ ನೆಡುವ ಕಾರ್ಯಕ್ರಮ


ಲೋಕದರ್ಶನ ವರದಿ 

ಬಳ್ಳಾರಿ 25:  ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ನಗರ ಘಟಕದ ವತಿಯಿಂದ  ನಗರ ಅಧ್ಯಕ್ಷ ಅರುಣ್ ಬಾಲಚಂದ್ರ ಅವರ ನೇತೃತ್ವದಲ್ಲಿ ದಿ. 25ರಂದು ಪಂಡಿತ್ ದೀನ ದಯಾಳ್ ಉಪಾಧ್ಯಾಯರ ಜಯಂತಿಯ  ಅಂಗವಾಗಿ ಬಳ್ಳಾರಿ ನಗರದ ದುರ್ಗಮ್ಮ ಗುಡಿ ಆವರಣದಲ್ಲಿ ಸಸಿ ನೆಡುವ ಅಭಿಯಾನ ನಡೆಯಿತು.  ಗಿಡ ಮರ ಬೆಳೆಸಿ ನಾಡು ಉಳಿಸಿ ಎಂಬ ಉಕ್ತಿಯಂತೆ ಮನೆಗೊಂದು ಮರ ಬಳಸಬೇಕು ನಂತರ ಊರಿಗೊಂದು ವನ ಆಗುತ್ತಿದೆ ಹಸಿರುದ್ದರೆ ಮಾತ್ರ ನಮ್ಮ ಉಸಿರು  ಇಲ್ಲವಾದರೆ ಮುಂದಿನ ದಿನಗಳಲ್ಲಿ ಜೀವನ ಬಹಳ ಕಷ್ಟವಾಗುತ್ತದೆ ಎಂದು ಅರುಣ್ ಬಾಲಚಂದ್ರ ಅವರು ತಿಳಿಸಿದರು.  


ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ  ಮುರಾರಿ ಗೌಡ ಅಣ್ಣ ಅವರು ಹಾಗೂ ಬಳ್ಳಾರಿ ನಗರದ ಜನಪ್ರಿಯ ಶಾಸಕ ಜಿ.ಸೋಮಶೇಖರ ರೆಡ್ಡಿ ಯವರು  ಹಾಗೂ ಜವಳಿ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಗುತ್ತಿಗೆನೂರು ವಿರುಪಾಕ್ಷಗೌಡ, ಹಾಗೂ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ  ಕೆ.ಎಸ್ ಅಶೋಕ್ ಕುಮಾರ,  ಅವರು ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೀರಶಂಕರ್ ರೆಡ್ಡಿ,  ಹಾಗೂ ಬಳ್ಳಾರಿ ನಗರ ಘಟಕ ಅಧ್ಯಕ್ಷರಾದ  ಕೆ.ಬಿ ವೆಂಕಟೇಶ್ವರ,  ಮೋತ್ಕರ್ ಶ್ರೀನಿವಾಸ, ರವರು  ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕರಾದ ಶ್ರೀರಾಜೀವ್ ತೊಗರಿ ಅವರು ನಗರ ಪ್ರಧಾನ ಕಾರ್ಯದರ್ಶಿ  ಕೆ.ಎಸ್ ರಾಮಾಂಜಿ, ಸುನಿಲ್ ರೆಡ್ಡಿ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ  ರಾಘವೇಂದ್ರರವರು  ಯುವ ಮೋರ್ಚ ಜಿಲ್ಲಾ ಉಪಾಧ್ಯಕ್ಷರಾದ  ಶರಣಬಸನಗೌಡ ಅವರು ಬಳ್ಳಾರಿ ನಗರ ಮಹಾನಗರ ಪಾಲಿಕೆ ಸದಸ್ಯರಾದ  ಮಲ್ಲನಗೌಡ,  ಹನುಮಂತಪ್ಪ ಹಾಗೂ ವೇಮಣ್ಣ ಅವರು ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ   ಸದಸ್ಯ  ಅಡವಿ ಸ್ವಾಮಿಯವರು ಹಾಗೂ ಬಿಜೆಪಿ ನಗರ ಉಪಾಧ್ಯಕ್ಷ ಪುಷ್ಪಲತಾ ಹಾಗೂ ಕೇದಾರನಾಥ್  ಸ್ವಾಮಿ ಅವರು ಹಾಗೂ ನಗರ ಓಬಿಸಿ ಮೋರ್ಚ ಅಧ್ಯಕ್ಷರಾದ  ಸಂದೀಪ್ ಕುಮಾರ್ ಅವರು ಯುವ ಮೋರ್ಚಾ ಎಲ್ಲ ಪದಾಧಿಕಾರಿಗಳು ಪಕ್ಷದ  ಜವಾಬ್ದಾರಿಯುತ ಮುಖಂಡರು ನಾಯಕ ಹಿರಿಯ ಜನಪ್ರತಿನಿಧಿಗಳು ಕಾರ್ಯಕರ್ತರು ಹಾಗೂ ಇನ್ನುಳಿದಂತೆ ಎಲ್ಲಾ ಗಣ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಮಾಡಲಾಯಿತು ಎಂದು ರಾಜೀವ್ ತೊಗರಿ ರವರು ತಿಳಿಸಿದರು. 


ಸುದ್ದಿ ಓದಿ