ಕ್ರೀಡೆ

ಸಂತೋಷ್ ಟ್ರೋಫಿ: ಸೆಮಿಫೈನಲ್‌ಗೆ ಜಿಗಿದ ಬಂಗಾಳ

ಸಂತೋಷ್ ಟ್ರೋಫಿ: ಸೆಮಿಫೈನಲ್‌ಗೆ ಜಿಗಿದ ಬಂಗಾಳ

ಮಲಪ್ಪುರಂ: ಏಪ್ರಿಲ್ 25 : ಭಾನುವಾರ ಕೊಟ್ಟಪ್ಪಾಡಿ ಕ್ರೀಡಾಂಗಣದಲ್ಲಿ ನಡೆದ ಸಂತೋಷ್ ಟ್ರೋಫಿ ರಾಷ್ಟ್ರೀಯ ಫುಟ್‌ಬಾಲ್ ಚಾಂಪಿಯನ್‌ಶಿಪ್‌ನ ಎ ಗುಂಪಿನ ಪಂದ್ಯದಲ್ಲಿ ಬಂಗಾಳ ತಂಡ ರಾಜಸ್ಥಾನವನ್ನು 3-0 ಗೋಲುಗಳಿಂದ ಸೋಲಿಸಿ ಸೆಮಿಫೈನಲ್ ತಲುಪಿದೆ.

ಪಂದ್ಯಶ್ರೇಷ್ಠ ಮೊಹಮ್ಮದ್ ಫರ್ದೀನ್ ಅಲಿ ಮುಲ್ಲಾ 48 ಮತ್ತು 60ನೇ ನಿಮಿಷದಲ್ಲಿ ಎರಡು ಗೋಲು ಬಾರಿಸಿದರೆ, ಸುಜಿತ್ ಸಿಂಗ್ 81ನೇ ನಿಮಿಷದಲ್ಲಿ ಮೂರನೇ ಗೋಲು ದಾಖಲಿಸಿದರು.

ಕೇರಳ 10 ಅಂಕಗಳೊಂದಿಗೆ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಸೆಮಿಫೈನಲ್‌ಗೆ ಮುನ್ನಡೆದರೆ, ಬಂಗಾಳ ಒಂಬತ್ತು ಅಂಕಗಳೊಂದಿಗೆ ಎರಡನೇ ಸ್ಥಾನ ಗಳಿಸಿತು.

ಸುದ್ದಿ ಓದಿ